ಪತ್ನಿಗೆ ಡ್ರಗ್ಸ್‌ ನೀಡಿ ಅಪರಿಚಿತರ ಆಹ್ವಾನಿಸುವ ಗಂಡ, ಬೆಚ್ಚಿ ಬೀಳಿಸಿದ ಜಾಗತಿಕ ಅತ್ಯಾ** ಅಕಾಡೆಮಿ ಕೇಸ್

Published : Mar 27, 2026, 01:36 PM IST
Dominique Pelicot

ಸಾರಾಂಶ

ಆಪ್ತರೆ ತಮ್ಮವರನ್ನು ಖೆಡ್ಡಾಗೆ ಬೀಳಿಸಿ ಮಜಾ ತೆಗೆದುಕೊಳ್ಳುವ, ದುಡ್ಡು ಮಾಡುವ ಸಾಕಷ್ಟು ಘಟನೆಗಳಿವೆ. ಆದರೆ ಪತ್ನಿಗೆ ಡ್ರಗ್ಸ್‌ ನೀಡಿ ಅಪರಿಚಿತರ ಆಹ್ವಾನಿಸುವ ಗಂಡಂದಿರ ಕೇಸ್ ಜಗತನ್ನೇ ಬೆಚ್ಚಿ ಬೀಳಿಸಿದೆ. ಇದು ಜಾಗತಿಕ ಅತ್ಯಾ** ಅಕಾಡೆಮಿ ಪ್ರಕರಣ

ನವದೆಹಲಿ (ಮಾ.27) ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸ್ವರೂಪ ಹಲವು ಬಾರಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ, ಕ್ರೌರ್ಯ, ಆಪ್ತರಿಂದಲೇ ಆಗುತ್ತಿರುವ ಅನ್ಯಾಯ, ಅಮಾನುಷ ಘಟನೆಗಳು ಹಲವು ಬಾರಿ ವರದಿಯಾಗಿದೆ. ಇದೀಗ ಸಂಬಂಧಗಳನ್ನು ಮತ್ತಷ್ಟು ಅನುಮಾನದಿಂದ ನೋಡುವ ತನಿಖಾ ವರದಿಯೊಂದು ಬಿಡುಗಡೆಯಾಗಿದೆ. ಪತ್ನಿಗೆ ಡ್ರಗ್ಸ್ ನೀಡಿ ಅರೆಪ್ರಜ್ಞಾವಸ್ಥೆಯಲ್ಲಿ ಅಪರಿಚಿತ ಪುರುಷರನ್ನು ಆಹ್ವಾನಿಸುವ ಗಂಡನ ಪ್ರಕರಣ ಇದು. ಬಳಿಕ ಆಕೆಯ ವಿಡಿಯೋಗಳನ್ನು ರೆಕಾರ್ಡ್ ಅಪರಿಚಿತರ ಜೊತೆ ಹಂಚಿಕೊಂಂಡು ಮಜಾ ತೆಗೆದುಕೊಳ್ಳುವುದು, ಹಣ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಿಎನ್‌ಎನ್ ಮಾಧ್ಯಮ ಸಂಸ್ಥೆ ತನಿಖಾ ವರದಿಯೊಂದನ್ನು ಮಾಡಿ ಪ್ರಕಟಿಸಿದ್ದು, ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಡೋಮಿನಿಕೆ ಪೆಲಿಕೋಟ್ ಕೇಸ್ ಬಿಚ್ಚಿಟ್ಟ ಕರಾಳ ಮುಖ

ಫ್ರಾನ್ಸ್‌ನ ಡೋಮಿನಿಕ್ ಪೆಲಿಕೋಟ್ ಪ್ರಕರಣ ಜಾಗತಿಕ ಮಟ್ಟದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ ಪ್ರಕರಣ. ಕಾರಣ 2020ರಲ್ಲಿ ಬೆಳಕಿಗೆ ಬಂದ ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ಪತ್ನಿಯ ಮೇಲೆ ನಡೆಯುತ್ತಿರುವ ಅತ್ಯಂತ ಕ್ರೂರ ಅತ್ಯಾ** ರ ಘಟನೆಗಳ ಮೇಲೆ ಬೆಳಕು ಚೆಲ್ಲಿದೆ. 2011ರಿಂದ 2020ರ ವರೆಗೆ ಡೊಮಿನಿಕ್ ಪೆಲಿಕೋಟ್ ತನ್ನ ಪತ್ನಗೆ ಡ್ರಗ್ಸ್ ನೀಡಿ ಅರೆಪ್ರಜ್ಞಾವಸ್ತೆಯಲ್ಲಿರುವಾಗ ಅಪರಿಚಿತ ಪುರುಷರನ್ನು ಆಹ್ವಾನಿಸಿ ತನ್ನ ಪತ್ನಿ ಮೇಲೆ ಅತ್ಯಾ** ರ ಎಸಗಲು ಸೂಚಿಸುತ್ತಿದ್ದ. ಹೀಗೆ 91 ಬಾರಿ 71 ವಿವಿಧ ಪುರುಷರ ಅತ್ಯಾ**ರ ಎಸಗಿದ್ದರು. ಇದನ್ನು ಡೋಮಿನಿಕ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಬಳಿಕ ಹಣಕ್ಕಾಗಿ, ಮೋಜಿಗಾಗಿ ವಿತರಣೆ ಮಾಡುತ್ತಿದ್ದ. ಅರೆಪ್ರಜ್ಞಾವಸ್ತೆಯಲ್ಲಿ ತನಗೆ ಎನು ಆಗುತ್ತಿದೆ ಅನ್ನೋದೆ ಆಕೆಗೆ ಗೊತ್ತಾಗುತ್ತಿರಲಿಲ್ಲ. ಹೊರಗಡೆ ಹೇಳಲು ಆಗದೆ, ಇರಲು ಆಗದೆ ಮಾನಸಿಕವಾಗಿ ಕುಗ್ಗಿಹೋಗಿದ್ದಳು. 2020ರ ಸೆಪ್ಟೆಂಬರ್‌ನಲ್ಲಿ ಡೋಮಿನಿಕ್ ಅರೆಸ್ಟ್ ಆಗಿದ್ದ. ತನಿಖೆೆಯಲ್ಲಿ ಈ ಬೆಚ್ಚಿ ಬೀಳಿಸುವ ಮಾಹಿತಿ ಹೊರಬಂದಿತ್ತು. ಈ ಡೊಮಿನಿಕ್ ಕ್ರೂರತನ ಎಷ್ಟಿತ್ತು ಎಂದರೆ ತನ್ನ ಸ್ವಂತ ಮಗಳು ಹಾಗೂ ಸೊಸೆಯನ್ನು ಬಿಡದೆ ಪೀಡಿಸಿದ್ದ.

ಜಾಗತಿಕ ಮಟ್ಟದಲ್ಲಿ ಸಕ್ರೀಯ

2024ರಲ್ಲಿ ಈ ಪ್ರಕರಣದ ತೀರ್ಪು ಬಂದಿತ್ತು. ಡೋಮಿನಿಕ್ ಸೇರಿದಂತೆ 50 ಅಪರಿಚಿತ ಪುರುಷರಿಗೆ ಶಿಕ್ಷೆ ವಿಧಿಸಲಾಗಿತ್ತು. 2024ರ್ರಿ ಸಿಎನ್ಎನ್ ಅಂತಾರಾಷ್ಟ್ರೀಯ ಮಾಧ್ಯಮ ಈ ಪ್ರರಕರಣವನ್ನು ಕೈಗೆತ್ತಿಕೊಂಡಿತ್ತು. ವರದಿಗಾರರಾದ ಸಾಸ್ಕಿಯಾ ವ್ಯಾಂಡೋರ್ನೆ ಹಾಗೂ ನಿಯಾಮ ಕೆನಡಿ ಈ ಕುರಿತು ತನಿಖೆ ಆರಂಭಿಸಿದ್ದರು. ಡೋಮಿನಿಕೋ ಪ್ರಕರಣ ಒಂದೇ ಘಟನೆಯೇ ಅಥವಾ ಇದೇ ರೀತಿಯ ಕಿರುಕುಳ, ದೌರ್ಜನ್ಯ ನಡೆಯುತ್ತಿದೆಯಾ ಅನ್ನೋ ಕುರುತು ಪತ್ರಿಕೋದ್ಯಮದ ತನಿಖೆ ಆರಂಭಿಸಿದ್ದರು. ರಹಸ್ಯವಾಗಿ ಈ ಪ್ರಕರಣದ ತನಿಖೆ ತೀವ್ರಗೊಂಡಿತ್ತು. ಈ ವೇಳೆ ಇದು ಒಂದು ಪ್ರಕರಣ ಅಲ್ಲ, ವ್ಯವಸ್ಥಿತ ಜಾಲವೊಂದು ಪತ್ತೆಯಾಗಿದೆ. ಹೆಸರಿಗೆ ಮದುವೆ ಮಾಡಿಕೊಳ್ಳುವುದು, ಬಳಿಕ ಪತ್ನಿಯನ್ನು ಪರ ಪುರುಷರಿಗೆ ಅತ್ಯಾ** ರ ಎಸಗಲು ಅವಕಾಶ ಮಾಡಿಕೊಡುವುದು ಪತ್ತೆಯಾಗಿತ್ತು. ಟೆಲಿಗ್ರಾಂ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್ ಮೂಲಕ ಹಲವು ಗಂಪುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದವವು. ಇಲ್ಲಿ ತಮ್ಮ ತಮ್ಮ ಪತ್ನಿಯರ ಮೇಲೆ ಅನ್ಯ ಪುರುಷರ ಅತ್ಯಾ** ದ ವಿಡಿಯೋಗಳನ್ನು ಸ್ವತಃ ಗಂಡಂದಿರೇ ಫಾರ್ವರ್ಡ್ ಮಾಡುತ್ತಿದ್ದರು. ಪತ್ನಿಯರಿಗೆ ಅಮಲು ಔಷಧಿಗಳನ್ನು ಹೇಗೆ ನೀಡಬೇಕು ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಈ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ್ರು.

ಪೊಲೆಂಡ್ ಹಾಗೂ ಫ್ರಾನ್ಸ್‌ನಲ್ಲಿಈ ಜಾಲ ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ಇತರ ದೇಶಗಳಿಗೆ ಇದರ ಜಾಲ ವಿಸ್ತರಣೆಯಾಗಿತ್ತು ಅನ್ನೋದು ತನಿಖಾ ವರದಿಯಲ್ಲಿ ಬಯಲಾಗಿದೆ. ಪತ್ರರ್ತರು ತಮ್ಮ ತನಿಖೆಯ ಅವಧಿಯಲ್ಲಿ ಹಲವು ಸಂತ್ರಸ್ತ ಮಹಿಳೆಯರನ್ನು ಮಾತನಾಡಿಸಿ ಮಾಹಿತಿ ಕಲೆ ಹಾಕಿದ್ದಾರೆ. ತಮ್ಮವರಿಂದಲೇ ತಮಗೆ ಅನ್ಯಾಯವಾದಾಗ ಆಗುವ ಆಘಾತ, ಮಾನಸಿಕ ನೋವಿನ ಕುರಿತು ಹೇಳಿಕೊಂಡಿದ್ದರು. ಇದೀಗ ಈ ತನಿಖಾ ವರದಿ ಜಾಗತಿಕ ಮಟ್ಟದಲ್ಲಿ ಮಹಿಳೆ ಹಾಗೂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಅತ್ಯಂತ ಕ್ರೂರ ಮುಖವನ್ನು ಬಹಿರಂಗ ಮಾಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮರುಭೂಮಿಯ ನಡುವೆ 1.7 ಮೈಲಿ ಉದ್ದದ ಬೃಹತ್ ಕೃತಕ ಸರೋವರ ನಿರ್ಮಿಸಲು ಮುಂದಾದ ಸೌದಿ ಅರೇಬಿಯಾ
ಅಂತಿಮ ದಾಳಿಗೆ ಅಮೆರಿಕ ಸಿದ್ಧತೆ - ತಕ್ಕ ತಿರುಗೇಟಿನ ಎಚ್ಚರಿಕೆ ನೀಡಿದ ಇರಾನ್