
ದೆಹಲಿ (ಜೂ.06): ಭಾರತದಲ್ಲಿ ಕೇವಲ 5 ರೂಪಾಯಿಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ತುಗಳನ್ನು ಯುದ್ಧದಿಂದಾಗಿ ಕ್ಷಾಮಕ್ಕೆ ತುತ್ತಾಗಿರುವ ಗಾಜಾದಲ್ಲಿ 500 ಪಟ್ಟು ಹೆಚ್ಚಿನ ಬೆಲೆಗೆ (ಅಂದರೆ 2,342 ರೂ.) ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಎನ್‌ಡಿಟಿವಿ ಈ ಸುದ್ದಿಯನ್ನು ವರದಿ ಮಾಡಿದೆ. ಪಾರ್ಲೆ ಜಿ ಬಿಸ್ಕತ್ತುಗಳನ್ನು 24 ಯುರೋಗಳಿಗೆ (2,342 ರೂಪಾಯಿ) ಮಾರಾಟ ಮಾಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗಿದೆ. 1.5 ಯುರೋದಿಂದ ಬಿಸ್ಕತ್ತಿನ ಬೆಲೆ ಏಕಾಏಕಿ 24 ಯುರೋಗೆ ಏರಿದೆ. ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ನಂತರ, ಗಾಜಾಕ್ಕೆ ಆಹಾರ ಪೂರೈಕೆಯನ್ನು ಕ್ರಮೇಣ ಕಡಿತಗೊಳಿಸಲಾಗಿದೆ. ಈ ವರ್ಷ ಮಾರ್ಚ್ 2 ರಿಂದ ಮೇ 19 ರವರೆಗೆ, ಗಾಜಾ ಸಂಪೂರ್ಣ ದಿಗ್ಬಂಧನವನ್ನು ಎದುರಿಸಿತು.
ಸೀಮಿತ ಸಂಖ್ಯೆಯ ಟ್ರಕ್‌ಗಳನ್ನು ಮಾತ್ರ ಹಾದುಹೋಗಲು ಇಸ್ರೇಲ್ ಅನುಮತಿಸಿದೆ. ಹಮಾಸ್ ನೆರವು ವಶಪಡಿಸಿಕೊಂಡು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿ ಇಸ್ರೇಲ್ ಟ್ರಕ್‌ಗಳನ್ನು ತಡೆದಿದೆ. ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ಅಭಿವೃದ್ಧಿಪಡಿಸಿದ ಸೆಕ್ಯೂರ್ ಡಿಸ್ಟ್ರಿಬ್ಯೂಷನ್ ಸೈಟ್ 1 (SDS1) ಮಾದರಿಯ ಮೂಲಕ ಮಾತ್ರ ವಿತರಣೆ ಮಾಡಬೇಕು ಎಂದು ಇಸ್ರೇಲ್ ಹೇಳಿದೆ. ಬಿಸ್ಕತ್ತು ಮಾತ್ರವಲ್ಲ, ಗಾಜಾದಲ್ಲಿ ಎಲ್ಲಾ ಆಹಾರ ಪದಾರ್ಥಗಳಿಗೂ ಹೆಚ್ಚಿನ ಬೆಲೆ ಇದೆ. ನೆರವಾಗಿ ಬರುವ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.
ದಿನನಿತ್ಯ ಬಳಸುವಂತಹ ಪ್ರಮುಖ ಆಹಾರ ಪದಾರ್ಥಗಳಾದ ಒಂದು ಕಿಲೋ ಸಕ್ಕರೆ: 4,914 ರೂಪಾಯಿ, ಒಂದು ಲೀಟರ್ ಅಡುಗೆ ಎಣ್ಣೆ: 4,177 ರೂಪಾಯಿ, ಒಂದು ಕಿಲೋ ಆಲೂಗಡ್ಡೆ: 1,965 ರೂಪಾಯಿ, ಒಂದು ಕಿಲೋ ಈರುಳ್ಳಿ: 4,423 ರೂಪಾಯಿ ಬೆಲೆಗೆ ಮಾರಾಟ ಆಗುತ್ತಿದೆ.
ಒಂದು ಕಪ್ ಕಾಫಿ: 1,800 ರೂಪಾಯಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗಿದೆ. ಎನ್‌ಡಿಟಿವಿ ಸಂಗ್ರಹಿಸಿದ ಪಟ್ಟಿಯಲ್ಲಿ ಅಗತ್ಯ ವಸ್ತುಗಳು ಮತ್ತು ದಿನಸಿಗಳನ್ನು ಅತಿಯಾದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತೋರಿಸುತ್ತದೆ. ಸ್ಥಳೀಯ ಕರೆನ್ಸಿಯಾದ ಹೊಸ ಇಸ್ರೇಲಿ ಶೆಕೆಲ್‌ನಲ್ಲಿ ಬೆಲೆಗಳನ್ನು ಉಲ್ಲೇಖಿಸಲಾಗಿದೆ. ಒಂದು ಇಸ್ರೇಲಿ ಶೆಕೆಲ್‌ಗೆ 24.57 ಭಾರತೀಯ ರೂಪಾಯಿ ಮೌಲ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ