* ಟೋಕಿಯೋ ಸಂಶೋಧಕರಿಂದ ಅಧ್ಯಯನ
* ಡೆಲ್ಟಾ ಸೇರಿ ಎಲ್ಲ ತಳಿ ವಿರುದ್ಧ ರೋಗನಿರೋಧಕ ಶಕ್ತಿ ಅಭಿವೃದ್ಧಿ
* ಐಸಿಎಂಆರ್ ಅಧ್ಯಯನದಲ್ಲಿ ಮಹತ್ವದ ಸಂಗತಿ ಪತ್ತೆ
ಟೋಕಿಯೋ(ಜ.27): ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ಮತ್ತು ಅತಿ ವೇಗವಾಗಿ ಹರಡುವ ಒಮಿಕ್ರೋನ್(Omicron) ರೂಪಾಂತರಿ ವೈರಸ್ ಚರ್ಮದ(Skin) ಮೇಲೆ 21 ಗಂಟೆ, ಪ್ಲಾಸ್ಟಿಕ್‌ನಂಥ ವಸ್ತುಗಳ ಮೇಲೆ 8 ದಿನಕ್ಕೂ ಹೆಚ್ಚು ಕಾಲ ಜೀವಂತವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
undefined
ಟೋಕಿಯೋ(Tokyo) ಫರ್‌ಫೆಕ್ಟುವಲ್ ಯುನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ವಿಶ್ವ ಆರೋಗ್ಯ ಸಂಸ್ಥೆ(World Health Organization) ‘ವೇರಿಯಂಟ್ ಆಫ್ ಕನ್ಸರ್ನ್’ ಎಂದು ಗುರುತಿಸಿರುವ ಎಲ್ಲಾ ತಳಿಯ ಕೋವಿಡ್-19(Covid-19) ವೈರಸ್ಸಿನ ಜೀವಿತಾವಧಿಯ ಬಗ್ಗೆ ಅಧ್ಯಯನ ನಡೆಸಿದೆ.
Corona 3rd Wave: ಖಾಲಿಯಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಬೀಗ?
ಅದರಲ್ಲಿ, ವುಹಾನ್‌ನಲ್ಲಿ ಪತ್ತೆಯಾದ ವೈರಸ್ಸಿಗಿಂತ ಆಲ್ಫಾ, ಬೀಟಾ, ಡೆಲ್ಟಾ ಮತ್ತು ಒಮಿಕ್ರೋನ್ ತಳಿಗಳು ಪ್ಲಾಸ್ಟಿಕ್ ಮತ್ತು ಚರ್ಮದ ಮೇಲೆ ಎರಡು ಪಟ್ಟು ಹೆಚ್ಚು ಕಾಲ ಜೀವಂತವಾಗಿರುತ್ತವೆ. ಅದರಲ್ಲೂ ಒಮಿಕ್ರೋನ್ ವೈರಸ್ ಪರಿಸರದಲ್ಲಿ(Environment) ಹೆಚ್ಚು ಕಾಲ ಜೀವಂತವಾಗಿರುತ್ತದೆ. ಅದೇ ಕಾರಣದಿಂದ ಡೆಲ್ಟಾವನ್ನು(Delta) ಹಿಂದಿಕ್ಕಿ ವೇಗವಾಗಿ ಹರಡುತ್ತಿದೆ ಎಂದು ತಿಳಿಸಿದ್ದಾರೆ. ಅಧ್ಯಯನದ(Study) ಪ್ರಕಾರ ಪ್ಲಾಸ್ಟಿಕ್ ಮೇಲ್ಭಾಗ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾವೈರಸ್ ಕ್ರಮವಾಗಿ 56 ಗಂಟೆ, 191.3 ಗಂಟೆ, 156.6 ಗಂಟೆ ಮತ್ತು 114 ಗಂಟೆ ಜೀವಂತವಾಗಿದ್ದರೆ ಒಮಿಕ್ರೋನ್ 193.5 ಗಂಟೆಗಳ ಕಾಲ ಜೀವಂತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಒಮ್ಮೆ ಒಮಿಕ್ರೋನ್ ತಗಲಿದರೆ ಮತ್ತೆ ಕೋವಿಡ್ ಬರೋದಿಲ್ಲ?
ನವದೆಹಲಿ: ದೇಶಾದ್ಯಂತ(India) ಆತಂಕಕ್ಕೆ ಕಾರಣವಾಗಿರುವ ಒಮಿಕ್ರೋನ್ ಕೊರೋನಾ(Coronavirus) ತಳಿಯ ಸೋಂಕು ಒಮ್ಮೆ ತಗಲಿದರೆ ನಂತರ ಡೆಲ್ಟಾ ಸೇರಿದಂತೆ ಇನ್ನಿತರ ಕೊರೋನಾ ತಳಿಗಳಿಂದ ಸೋಂಕು ಉಂಟಾಗುವ ಸಾಧ್ಯತೆ ಬಹಳ ಕಡಿಮೆ ಎಂಬ ಮಹತ್ವದ ಸಂಗತಿ ಪತ್ತೆಯಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Medical Research Council) ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು, ಒಮಿಕ್ರೋನ್‌ನಿಂದ ದೇಹದಲ್ಲಿ ಕೊರೋನಾ ವೈರಸ್‌ಗಳ ವಿರುದ್ಧ ಹೋರಾಡುವ ಉತ್ಕೃಷ್ಟ ಗುಣಮಟ್ಟದ ರೋಗನಿರೋಧಕ ಶಕ್ತಿ(Immunity) ಉತ್ಪತ್ತಿಯಾಗುತ್ತದೆ ಎಂಬುದು ಕಂಡುಬಂದಿದೆ.‘ಒಮಿಕ್ರೋನ್ ಸೋಂಕು ತಗಲಿದರೆ ಅಪಾಯಕಾರಿ ಡೆಲ್ಟಾ ಸೇರಿದಂತೆ ಈವರೆಗೆ ಪತ್ತೆಯಾಗಿರುವ ಬಹುತೇಕ ಎಲ್ಲಾ ಕೋವಿಡ್
ತಳಿಗಳ ವಿರುದ್ಧವೂ ಯಶಸ್ವಿಯಾಗಿ ಹೋರಾಡುವ ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಸೋಂಕಿತ 39 ವ್ಯಕ್ತಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಇದು ಪತ್ತೆಯಾಗಿದೆ. ಇವರಲ್ಲಿ ಆರು ಮಂದಿಯನ್ನು ಬಿಟ್ಟು ಇನ್ನೆಲ್ಲರೂ ಎರಡು ಡೋಸ್ ಲಸಿಕೆ(Vaccine) ಪಡೆದಿದ್ದರು. ಇವರಲ್ಲಿ ಬಹುತೇಕರು ವಿದೇಶದಿಂದ ಬಂದವರು ಅಥವಾ ಅವರ ಸಂಪರ್ಕಿತರಾಗಿದ್ದರು. ಇವರೆಲ್ಲರಿಗೂ ಒಮಿಕ್ರೋನ್ ಸೋಂಕು ತಗಲಿತ್ತು’ ಎಂದು ಅಧ್ಯಯನ ನಡೆಸಿದ ಐಸಿಎಂಆರ್ ವಿಜ್ಞಾನಿ ಪ್ರಜ್ಞಾ ಡಿ.ಯಾದವ್ ತಂಡ ತಿಳಿಸಿದೆ.
Fact Check: ಕೊರೋನಾ, ವೈರಸ್ ಅಲ್ಲ, ಆಸ್ಪಿರಿನ್ ಬಳಸಿ ಚಿಕಿತ್ಸೆ ನೀಡಬಹುದಾದ ಬ್ಯಾಕ್ಟೀರಿಯಾ ಎಂಬುದು ಸುಳ್ಳು!
ಒಮಿಕ್ರೋನ್‌ನಿಂದ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿಯು ಇನ್ನೆಲ್ಲಾ ಕೊರೋನಾ ವೈರಸ್‌ಗಳನ್ನು ನಿಷ್ಕ್ರೀಯಗೊಳಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಲಸಿಕೆಯ ತಂತ್ರಗಾರಿಕೆಯನ್ನು ಮರುರೂಪಿಸುವ ಅಗತ್ಯವಿದೆ ಎಂಬ ವಾದ ಕೇಳಿಬಂದಿದೆ.
ಕಳೆದ ವಾರ 2 ಕೋಟಿ ಜನರಿಗೆ ಸೋಂಕು
ಜಿನಿವಾ(Geneva): ಕಳೆದ ವಾರ ವಿಶ್ವಾದ್ಯಂತ(World) 2.1 ಕೋಟಿ ಜನರಲ್ಲಿ ಹೊಸದಾಗಿ ಕೋವಿಡ್(Covid-19) ಸೋಂಕು ದೃಢಪಟ್ಟಿದೆ. ಇದು ಸಾಂಕ್ರಾಮಿಕ ಆರಂಭವಾದಗಿಂದಲೇ ಅತಿ ಗರಿಷ್ಠ ಪ್ರಮಾಣದ ವಾರದ ಪ್ರಕರಣವಾಗಿದೆ. 50000 ಸೋಂಕಿತರು ಸಾವಿಗೀಡಾಗಿದ್ದಾರೆ. ಸಾವಿನ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಕೋವಿಡ್ ಈ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಒಮಿಕ್ರೋನ್ ರೂಪಾಂತರಿಯೇ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳಿದೆ.
ಜ.17ರಿಂದ 23ರವರೆಗಿನ ವಾರದಲ್ಲಿ ಹೊಸ ಪ್ರಕರಣಗಳು ಶೇ.5ರಷ್ಟು ಹೆಚ್ಚಾಗಿದೆ.ಕಳೆದ ವಾರ ಅಮೆರಿಕದಲ್ಲಿ(America) ಅತಿ ಹೆಚ್ಚು 42.15 ಲಕ್ಷ, ಫ್ರಾನ್ಸ್‌ನಲ್ಲಿ(France) 24.43 ಲಕ್ಷ, ಭಾರತದಲ್ಲಿ 21.15 ಲಕ್ಷ, ಇಟಲಿಯಲ್ಲಿ(Italy) 12.31 ಲಕ್ಷ, ಬ್ರೆಜಿಲ್‌ನಲ್ಲಿ(Brazil) 8.24 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದವು.