
ಮೆಲ್ಬರ್ನ್(ಡಿ.09): ನ್ಯೂಜಿಲೆಂಡ್‌ನಲ್ಲಿ ಕಳೆದ ವರ್ಷ 51 ಮುಸ್ಲಿಮರ ನರಮೇಧ ಮಾಡಿದ ಆಸ್ಪ್ರೇಲಿಯಾ ಮೂಲದ ದಾಳಿಕೋರ ಬ್ರಂಟನ್ ಟರೆಂಟ್ ಭಾರತದಲ್ಲೂ 3 ತಿಂಗಳು ಕಾಲ ಕಳೆದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
792 ಪುಟಗಳ ರಾಯಲ್ ಕಮಿಶನ್ ತನಿಖಾ ವರದಿಯಲ್ಲಿ ಈ ಸ್ಪೋಟಕ ಮಾಹಿತಿ ಬಹಿರಂಗಪಡಿಸಲಾಗಿದೆ. ಮೊದಲು ಆಸ್ಪ್ರೇಲಿಯಾದಲ್ಲಿ ಜಿಮ್ ಟ್ರೈನರ್ ಆಗಿದ್ದ ಆತ 2012ರಲ್ಲಿ ಕೆಲಸ ಬಿಟ್ಟ. ನಂತರ 2014ರಿಂದ 2017ರವರೆಗೆ ವಿಶ್ವದ ವಿವಿಧ ಭಾಗಗಳಲ್ಲಿ ಸುತ್ತಾಡಿದ.
ಹಲಾಲ್ ಪ್ರಮಾಣೀಕೃತ ಕೊರೋನಾ ಲಸಿಕೆಗೆ ಮಾತ್ರ ಇಂಡೋನೇಷ್ಯಾದಲ್ಲಿ ಅವಕಾಶ!
ಈ ನಡುವೆ 2015ರ ನವೆಂಬರ್ 21ರಿಂದ 2016ರ ಫೆಬ್ರವರಿ 18ರವರೆಗೆ ಭಾರತದಲ್ಲೂ ಕಾಲ ಕಳೆದಿದ್ದ ಎಂದು ವರದಿ ಹೇಳಿದೆ. ಆದರೆ ಭಾರತದಲ್ಲಿ ಏನು ಮಾಡುತ್ತಿದ್ದ ಎಂಬ ಯಾವುದೇ ವಿವರವನ್ನು ವರದಿ ತಿಳಿಸಿಲ್ಲ.
ಆದರೆ, ವಿಶ್ವದ ವಿವಿಧ ಉಗ್ರ ಸಂಘಟನೆಗಳ ಜತೆ ಆತ ಸಂಪರ್ಕದಲ್ಲಿದ್ದ. ಈ ಅವಧಿಯಲ್ಲಿ ಉಗ್ರಗಾಮಿ ತರಬೇತಿ ಪಡೆದುಕೊಂಡು ಬಂದಿದ್ದ ಎಂದು ‘ನ್ಯೂಜಿಲೆಂಡ್ ಹೆರಾಲ್ಡ್’ ಪತ್ರಿಕೆ ವರದಿ ಮಾಡಿದೆ. ಅಲ್ಲದೆ, ಮುಸ್ಲಿಂ ವಿರೋಧಿ ಸಾಹಿತ್ಯಗಳನ್ನು ಓದಿಕೊಂಡಿದ್ದ ಎಂದು ತಿಳಿದುಬಂದಿದೆ. ಈಗ ಬಂಧಿಯಾಗಿರುವ ಟೆರಂಟ್ ಆಜೀವ ಜೈಲುವಾಸ ಅನುಭವಿಸುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ