ಮಾಸ್ಕ್ ಧರಿಸಲ್ಲ ಎಂದಾತನ ಪೊಲೀಸ್ ಠಾಣೆಗೊಯ್ದ ಕ್ಯಾಬ್ ಚಾಲಕ, ಬಿತ್ತು 50000 ರೂ. ದಂಡ!

By Suvarna NewsFirst Published Jan 6, 2021, 4:41 PM IST
Highlights

ಮಾಸ್ಕ್ ಧರಿಸಲು ಪ್ರಯಾಣಿಕನ ಹಿಂದೇಟು| ಕಿರುಕುಳ ನೀಡುತ್ತಿದ್ದ ಪ್ರಯಾಣಿಕನಿಗೆ ಬುದ್ಧಿ ಕಲಿಸಿದ ಚಾಲಕ| ಮಾಸ್ಕ್ ಧರಿಸದಾತನಿಗಗೆ  ದಂಬರೋಬ್ಬರಿ ಐವತ್ತು ಸಾವಿರ ರೂಪಾಯಿ ದಂಡ

ವಿಕ್ಡೋರಿಯಾ(ಜ.06) ಕೊರೋನಾ ಕಾಟ ಮುಂದುವರೆಯುತ್ತಲೇ ಇದೆ. ಆದರೆ ಹೊಸ ವರ್ಷ 2021 ರಲ್ಲಿ ಕೆಲ ಮಂದಿ ಕೊಂಚ ನಿರ್ಲಕ್ಷ್ಯ ತೋರಲಾರಂಭಿಸಿದ್ದಾರೆ. ಅನೇಕ ಮಂದಿ ಅಪಾಯವಿದ್ದರೂ ಮಾಸ್ಕ್‌ಗೆ ವಿದಾಯ ಹಾಡಿದ್ದಾರೆ. ಆದರೆ ಕೆನಡಾದಲ್ಲಿ ವ್ಯಕ್ತಿಯೊಬ್ಬ ಹೊಸ ವರ್ಷದ ಪಾರ್ಟಿಯಲ್ಲಿ ತೇಲಿ ಅಮಲಿನ ನಶೆಯಲ್ಲಿ ಮಾಸ್ಕ್ ಧರಿಸದೆಯೇ ಕಾರು ಏರಿದ್ದಾರೆ. ಕಗ್ಯಾಬ್ ಚಾಲಕ ಮಾಸ್ಲ್ ಧರಿಸುವಂತೆ ಮನವಿ ಮಾಡಿದರೂ ಉದ್ದಟತನ ತೋರಿದ್ದಾನೆ. ಇದರಿಂದ ಕೋಪಗೊಂಡ ಚಾಲಕ ಕಾರನ್ನು ನೇರವಾಗಿಒ ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದಾನೆ. ಆದರೆ ಇಲ್ಲಿ ಆತನನ್ನು ಪೊಲೀರು ವಧಶಕ್ಕೆ ಪಡೆದಿದ್ದು ಮಾತ್ರವಲ್ಲಿ ಆತನಿಗೆ ಭರ್ಜರಿ ದಂಡ ವಿಧಿಸಿದ್ದಾರೆ.

ಪದೇ ಪದೇ ಡ್ರೈವರ್ ಮುಖ ಮುಟ್ಟುತ್ತಿದ್ದ

ವರದಿಗಳನ್ವಯ ಕ್ಯಾಬ್ ಚಾಲಕ ವಿಕ್ಟೋರಿಯಾದವನಾಗಿದ್ದ. ಈಗಿರುವಾಗ ಆತ 911ಗೆ ಕರೆ ಮಾಡಿ ವ್ಯಕ್ತಿ ಮಾಸ್ಕ್ ಧರಿಸಲು ಹಿಂದೇಟು ಹಾಕುತ್ತಿದ್ದಾನೆಂದು ತಿಳಿಸಿದ್ದಾನೆ. ಅಲ್ಲದೇ ಪ್ರಯಾಣಿಕ ಪದೇ ಪದೇ ತನ್ನ ಮುಖ ಮುಟ್ಟಿ ಕಿರುಕುಳ ನೀಡುತ್ತಿದ್ದಾನೆಂದೂ ದೂರು ನೀಡಿದ್ದಾನೆ. ಹೀಗಿರುವಾಗ ಕೊರೋನಾ ನಿಯಮ ಉಲ್ಲಂಘಿಸಿದ ಕಾರಣ ಆತನಿಗೆ 690 ಡಾಲರ್(50,302ರೂ) ದಂಡ ವಿಧಿಸಿದ್ದಾರೆ.

ಪ್ರತಿಯೊಂದು ತಪ್ಪಿಗೂ ದಂಡ

ಇನ್ನು ಕ್ಯಾಬ್ ಪೊಲೀಸ್ ಠಾಣೆಗೆ ತಲುಪಿದಾಗ ಪೊಲೀಸ್ ಅಧಿಕಾರಿಗಳು ಕ್ಯಾಬ್ ಬಳಿ ತೆರಳಿದ್ದಾರೆ. ಹೀಗಿರುವಾಗ ಪ್ರಯಾಣಿಕ ಹೊರ ಬರಲು ನಿರಾಕರಿಸಿದ್ದಾನೆ. ಆದರೆ ಪೊಲೀಸರು ಆತನನ್ನು ಹೊರಗೆಳೆದು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆತ ಉಲ್ಲಂಘಿಸಿದ ಪ್ರತಿ ನಿಯಮಗಳಿಗೆ ದಂಡ ವಿಧಿಸಿದ್ದಾರೆ.

click me!