
ಬೀಜಿಂಗ್ (ಅ.01) ಆ್ಯಪಲ್ ಐಫೋನ್ ಖರೀದಿಗೆ ಜನರು ಮುಗಿ ಬೀಳುತ್ತಾರೆ. ಈಗ ಬಹುತೇಕರು ಇಎಂಐ ಮೂಲಕ ಐಫೋನ್ ಖರೀದಿಸುತ್ತಾರೆ. ಇತ್ತೀಚೆಗೆ ಐಫೋನ್ 17 ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿದೆ. ಐಫೋನ್ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತಿದೆ. ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಪೋಷಕರ ಗೋಳಾಡಿ ಐಫೋನ್ ಖರೀದಿಸಿದ ಘಟನೆ, ಐಫೋನ್‌ಗಾಗಿ ಜಗಳ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಆದರೆ 14 ವರ್ಷಗಳ ಹಿಂದೆ 17ರ ಬಾಲಕನೊಬ್ಬ ಐಫೋನ್ 4 ಹಾಗೂ ಐಪಾಡ್ 2 ಖರೀದಿಸಿದ್ದ. 17ರ ವಯಸ್ಸಿನಲ್ಲಿ ಐಫೋನ್ ಮೋಹಕ್ಕೆ ಬಿದ್ದ ಈತ ತನ್ನ ಕಿಡ್ನಿ ಮಾರಾಟ ಮಾಡಿ ಐಫೋನ್ 4 ಹಾಗೂ ಐಪಾಡ್ 2 ಖರೀದಿಸಿದ್ದ. ಈಗ ಆತನಿಗೆ 31 ವರ್ಷ. ಆತನ ಪರಿಸ್ಥಿತಿ ಯಾರಿಗೂ ಬೇಡ.
ಚೀನಾದ ವಾಂಗ್ ಶಾಂಗ್‌ಕೂನ್ ಚೀನಾ ಪ್ರಜೆ. ಈತ ಬಡ ಕುಟುಂಬದಲ್ಲಿ ಹುಟ್ಟಿದ್ದ. 17ರ ವಯಸ್ಸಿಗೆ ಈತನಿಗೆ ಅಂದರೆ 2011ರಲ್ಲಿ ಐಫೋನ್ ಖರೀದಿಸುವ ಬಯಕೆಯಾಗಿದೆ. ತನ್ನಲ್ಲೂ ಐಫೋನ್ ಇರಲೇಬೇಕು ಎಂದು ನಿರ್ಧರಿಸಿದ್ದ. ಬಡ ಕುಟುಂಬದ ಪೋಷಕರು ಮಗನಿಗೆ ಐಫೋನ್ ಕೊಡಿಸುವಷ್ಟು ಶಕ್ತಿ ಇರಲಿಲ್ಲ. ಇಷ್ಟೇ ಅಲ್ಲ ವಾಂಗ್ ಹಠ ಹಿಡಿದರೂ ಕೊಡಿಸಲು ಅಸಾಧ್ಯದ ಪರಿಸ್ಥಿತಿ ಇತ್ತು. ಹೀಗಾಗಿ ಈತ ಪೋಷಕರಿಗೂ ಹೇಳದೆ, ಯಾರಿಗೂ ಹೇಳದೆ ತನ್ನ ಕಿಡ್ನಿ ಮಾರಾಟ ಮಾಡಿ ಐಫೋನ್ ಖರೀದಿಗೆ ಮುಂದಾಗಿದ್ದ. ಬ್ಲಾಕ್ ಮಾರ್ಕೆಟ್‌ನಲ್ಲಿ ಕಿಡ್ನಿಯನ್ನು 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ.
ಈತನ ಪರಿಚಯಸ್ಥರೊಬ್ಬ ಹಿರಿಯ ವ್ಯಕ್ತಿಯ ಒಂದು ಕಿಡ್ನಿ ವೈಫಲ್ಯಗೊಂಡಿತ್ತು. ಮತ್ತೊಂದು ಕಿಡ್ನಿಯಲ್ಲಿ ಬದುಕು ಸಾಗಿಸುತ್ತಿದ್ದರು. ಇದನ್ನೇ ಮೂಲವಾಗಿಟ್ಟುಕೊಂಡು, ಬದುಕಲು ಒಂದು ಕಿಡ್ನಿ ಸಾಕು ಎಂದುಕೊಂಡು ಮತ್ತೊಂದು ಕಿಡ್ನಿ ಮಾರಾಟ ಮಾಡಿದ್ದ. ಅಕ್ರಮವಾಗಿ ಕಿಡ್ನಿ ಮಾರಾಟ ಜಾಲ ಸಂಪರ್ಕಿಸಿದ್ದ. ಮಾನವ ಕಳ್ಳಸಾಗಣೆ ಜಾಲದ ಮಾತಿನಂತೆ ಅಕ್ರಮವಾಗಿ, ಕಿಡ್ನಿ ಸರ್ಜರಿ ಮಾಡಿ ಮಾರಾಟ ಮಾಡಿದ್ದ.
ಸಣ್ಣ ಆಸ್ಪತ್ರೆಯಲ್ಲಿ ಯಾರಿಗೂ ತಿಳಿಯದಂತೆ ಕಿಡ್ನಿ ಆಪರೇಶನ್ ಮೂಲಕ ತೆಗೆಯಲಾಗಿತ್ತು. ಇತ್ತ ಹಣ ಪಡೆದು ಮರಳಿದ ಈತ ಐಫೋನ್ 4, ಐಪಾಡ್ 2 ಖರೀದಿಸಿ ಹಿರಿ ಹಿರಿ ಹಿಗ್ಗಿದ್ದ. ಐಫೋನ್ ಹಿಡಿದು ಎಲ್ಲೆಡೆ ಸುತ್ತಾಡಿದ್ದ. ಈತನ ಖುಷಿಗೆ ಪಾರವೇ ಇರಲಿಲ್ಲ.
ಐಫೋನ್ ಖರೀದಿಸದ ಕೆಲವೇ ವರ್ಷಗಳಲ್ಲಿ ಈತ ಹಾಸಿಗೆ ಹಿಡಿದಿದ್ದ. ಸರಿಯಾಗಿ ಸರ್ಜರಿ ಮಾಡದೆ, ಸರ್ಜರಿ ಬಳಿಕ ಆರೈಕೆ ಮಾಡದ ಕಾರಣ ಮತ್ತೊಂದು ಕಿಡ್ನಿಗೆ ಇನ್‌ಫೆಕ್ಷನ್ ಆಗಿತ್ತು. ಮತ್ತೊಂದು ಕಿಡ್ನಿ ಕಾರ್ಯನಿರ್ವಹಣೆ ಕ್ಷೀಣಿಸಿತ್ತು.ಪ್ರತಿ ದಿನ ಡಯಾಲಿಸ್ ಮಾಜಬೇಕಾದ ಅನಿವಾರ್ಯತೆ ಎದರಾಯತು. ಆಸ್ಪತ್ರೆ ದಾಖಲಾಗಿ ವರ್ಷವಿಡಿ ಚಿಕಿತ್ಸೆ ಪಡೆದ ಬಳಿಕ ಜೀವ ಬದುಕುಳಿಯಿತು.ಆದರೆ ಹಾಸಿಗೆ ತಪ್ಪಲಿಲ್ಲ. ಇದೀಗ ಎದ್ದು ನಡೆಯಲು ಸಾಧ್ಯವಾಗುತ್ತಿಲ್ಲ. ನರಕ ವೇದನೆ ಅನುಭವಿಸುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ