
ನವದೆಹಲಿ(ಮೇ 20): ಸೋಶಿಯಲ್ ಮಿಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ಸೌಂಡ್ ಮಾಡುತ್ತವೆ. ಇವು ನೆಟ್ಟಿಗರನ್ನು ಆಕರ್ಷಿಸುತ್ತವೆ. ಅದರಲ್ಲೂ ವಿಶೇಷವಾಗಿ, ಪ್ರಾಣಿಗಳ ಫೋಟೋ, ವಿಡಿಯೋಗಳು ಅತಿ ಹೆಚ್ಚು ವೈರಲ್ ಆಗುತ್ತವೆ. ಸದ್ಯ ಇಂತಹುದೇ ವಿಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ.. ಇದನ್ನು ನೋಡಿದವರೂ ಅಚ್ಚರಿಗೀಡಾಗಿದ್ದಾರೆ. ಯಾಕೆಂದರೆ ಇಲ್ಲಿ ಮೀನು ಹಿಡಿಯಲು ಹಾಕಿದ ಗಾಳಕ್ಕೆ ಮೊಸಳೆ ಬಿದ್ದಿದೆ.
ವೈರಲಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನದಿಯಲ್ಲಿ ಮೀನು ಹಿಡಿಯುವ ಸಲುವಾಗಿ ಮುಳ್ಳೊಂದನ್ನು ಹಾಕುತ್ತಾನೆ. ಇದಾದ ಕೆಲವೇ ಕ್ಷಣದಲ್ಲಿ ಆತ ಬಹಳ ಉತ್ಸಾಹದಿಂದ ತಾನು ಹಾಕಿದ ಗಾಳ ಹಿಂದಕ್ಕೆಳೆಯುತ್ತಾನೋ, ಮೊಸಳೆಯೊಂದು ಅಚಾನಕ್ಕಾಗಿ ಹೊರ ಬರುತ್ತದೆ. ಇದನ್ನು ನೋಡಿದ ವ್ಯಕ್ತಿ ಗಾಬರಿಗೀಡಾಗಿ ಕೈಯ್ಯಲ್ಲಿದ್ದ ಗಾಳವನ್ನು ಎಸೆದು ದೂರ ಸರಿಯುತ್ತಾನೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವೀಟ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಗಾಳ ಹಾಕಿದ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು ಎಂದು ಅನೇಕ ಮಂದಿ ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ