ಕೊರೋನಾ ವೈರಸ್ ಹರಡುವಿಕೆಯ ಮೂಲ ಕೇಂದ್ರವಾದ ಚೀನಾದ ವುಹಾನ್ ನಗರದ ವೈರಾಲಜಿ ಲ್ಯಾಬ್| ಚೀನಾದ ಲ್ಯಾಬಿನಿಂದ ಕೊರೋನಾ ಪರಾರಿ ಬಗ್ಗೆ ತನಿಖೆ ಆರಂಭ|
ವಾಷಿಂಗ್ಟನ್(ಏ.19): ಕೊರೋನಾ ವೈರಸ್ ಹರಡುವಿಕೆಯ ಮೂಲ ಕೇಂದ್ರವಾದ ಚೀನಾದ ವುಹಾನ್ ನಗರದ ವೈರಾಲಜಿ ಲ್ಯಾಬ್‌ನಿಂದ ವೈರಾಣು ‘ಪರಾರಿ’ ಆಗಿರಬಹುದೇ ಎಂಬ ಬಗ್ಗೆ ಅಮೆರಿಕ ತನಿಖೆ ಆರಂಭಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘ವುಹಾನ್ ವೈರಾಲಜಿ ಇನ್‌ಸ್ಟಿಟ್ಯೂಟ್‌ನಿಂದ ವೈರಾಣು ಪರಾರಿ ಆಯಿತೇ ಎಂಬ ಬಗ್ಗೆ ಅಮೆರಿಕ ತನಿಖೆ ಆರಂಭಿಸಿದೆ. ಈ ಲ್ಯಾಬ್ ಬಗ್ಗೆ ಗುಪ್ತಚರರು ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಅನೇಕ ಜನರು ಈ ವಿಷಯ ಪರಿಶೀಲಿಸುತ್ತಿದ್ದಾರೆ. ನಾವೂ ಪರಿಶೀಲಿಸುತ್ತಿದ್ದೇವೆ’ ಎಂದರು.
ಸರ್ಜಿಕಲ್ ಗೌನ್‌ಗೆ ಬರ: ಏಪ್ರನ್ ಧರಿಸಲು ವೈದ್ಯರಿಗೆ ಸೂಚನೆ!
‘ಬಾವಲಿಯೊಂದರ ಮೂಲಕ ಕೊರೋನಾ ಬಂದಿದೆ ಎಂದು ಅವರು (ಚೀನಾ) ಹೇಳುತ್ತಿದ್ದಾರೆ. ಆದರೆ ಕೊರೋನಾ ಉದ್ಭವವಾದ ಪ್ರದೇಶದಲ್ಲಿ ಆ ಬಾವಲಿ ಇರಲೇ ಇಲ್ಲ. ಅದು ಅಲ್ಲಿ ಮಾರಾಟ ಆಗಿರಲಿಲ್ಲ. ಅಲ್ಲಿಂದ 40 ಮೈಲಿ ದೂರದಲ್ಲಿ ಅದು ಇತ್ತು. ಅನೇಕ ವಿಚಿತ್ರಗಳು ನಡೆಯುತ್ತಿವೆ. ಈ ಬಗ್ಗೆ ತನಿಖೆ ನಡೆದಿದೆ’ ಎಂದು ಟ್ರಂಪ್ ಹೇಳಿದರು.