
ನ್ಯೂಯಾರ್ಕ್: ಇತ್ತೀಚೆಗೆ ವಿದೇಶಗಳಲ್ಲಿರುವ ಹಿಂದೂ ದೇವಸ್ಥಾನಗಳ ಮೇಲೆ ಪದೆ ಪದೆ ದಾಳಿ ನಡೆಸುತ್ತಿರುವ ಖಲಿಸ್ತಾನಿ ಬೆಂಬಲಿಗರು ಅಮೆರಿಕದಲ್ಲಿ ಮತ್ತೊಂದು ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಿದ್ದಾರೆ. ಕ್ಯಾಲಿಫೋನಿರ್ಯಾದ ನೆವಾರ್ಕ್ ನಗರದಲ್ಲಿರುವ ಸ್ವಾಮಿ ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಹಾಗೂ ಖಲಿಸ್ತಾನಿ ಪರ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಲಾಗಿದೆ.
ಶುಕ್ರವಾರ ಮುಂಜಾನೆ 8 ಗಂಟೆಗೆ ದೇವಸ್ಥಾನವನ್ನು ವಿರೂಪಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೆನಡಾದಲ್ಲಿ 55 ಅಡಿಯ ಹನುಮಾನ್ ಪ್ರತಿಮೆಗೆ ಖಲಿಸ್ತಾನಿಗಳ ತೀವ್ರ ವಿರೋಧ: ಬಿಗಿ ಭದ್ರತೆ
ಕೃತ್ಯಕ್ಕೆ ಭಾರತ ಭಾರೀ ಖಂಡನೆ:
ದೇವಸ್ಥಾನ ವಿರೂಪಗೊಳಿಸಿದ ಘಟನೆ ವಿರುದ್ಧ ಭಾರತೀಯರಿಂದ ಆಕ್ರೋಶ ವ್ಯಕ್ತವಾಗಿದ್ದು ಇಂಥ ಕೃತ್ಯ ಎಸಗುವವರಿಗೆ ದೇಶದಲ್ಲಿ ಜಾಗ ನೀಡಬಾರದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಮೆರಿಕ ಮತ್ತು ಕೆನಡಾಗಳ ಕುರಿತು ಕಿಡಿಕಾರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ‘ಇಂತಹ ಉಗ್ರರ ಚಟುವಟಿಕೆಗೆ ಯಾರೂ ಅವಕಾಶ ನೀಡಬಾರದು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವು ಈಗಾಗಲೇ ಅಮೆರಿಕದ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದು ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.
ಖಲಿಸ್ತಾನಿ ಉಗ್ರನ ಹತ್ಯೆ: ಭಾರತಕ್ಕೇ ವಾರ್ನಿಂಗ್ ಕೊಡ್ತಾ ಅಮೆರಿಕಾ? ಭಾರತದ ಪ್ರತ್ಯುತ್ತರವೇನು?
ಈ ಹಿಂದೆಯೂ ಅಮೆರಿಕದ ಅನೇಕ ದೇವಸ್ಥಾನಗಳ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದರು. ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಇಂಥ ಘಟನೆಗಳು ಹೆಚ್ಚಾಗಿವೆ. ಕಳೆದ ಜುಲೈನಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ದೂತಾವಾಸ ಕಚೇರಿ ಮೇಲೂ ಖಲಿಸ್ತಾನಿಗಳು ದಾಳಿ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ