US ಕಂಪನಿಯ ಸಿಂಗಲ್ ಡೋಸ್ ಕೊರೋನಾ ವ್ಯಾಕ್ಸಿನ್: ಭಾರತದಲ್ಲಿ ಪ್ರಯೋಗ

By Suvarna NewsFirst Published Apr 9, 2021, 12:40 PM IST
Highlights

ಅಮೆರಿಕ ಮೂಲಕದ ಜಾನ್ಸನ್ & ಜಾನ್ಸನ್‌ನಿಂದ ಸಿಂಗ್ಲ ಡೋಸ್ ಕೊರೋನಾ ವ್ಯಾಕ್ಸೀನ್ | ಭಾರತದಲ್ಲಿ ಟ್ರಯಲ್ ರನ್

ಭಾರತದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯಿಂದ ಸಿಂಗಲ್ ಡೊಸ್ ವ್ಯಾಕ್ಸಿನ್ ಪ್ರಯೋಗ ಶೀಘ್ರ ನಡೆಯುವ ಸಾಧ್ಯತೆ ಇದೆ. ಕೊವಿಡ್ ನಿಯಂತ್ರಣಕ್ಕಾಗಿ ಸದ್ಯ ಎರಡು ಹಂತದಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಆದರೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯಿಂದ ಒಂದೇ ಡೋಸ್ ಲಸಿಕೆಗೆ ಟ್ರಯಲ್ ರನ್ ನಡೆಯುವ ಸಾಧ್ಯತೆ ಇದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಅಮೆರಿಕ ಮೂಲಕ ಜಾನ್ಸನ್ & ಜಾನ್ಸನ್ ಕಂಪನಿ ಭಾರತದಲ್ಲಿ ಲಸಿಕೆ ಕೊರತೆ ಇದ್ದು, ಸಿಂಗಲ್ ಡೋಸ್ ಲಸಿಕೆ ಪ್ರಯೋಗಕ್ಕೆ ಅನುಮತಿಯನ್ನು ಕೇಳಿದೆ. ಭಾರತದಲ್ಲಿ ಪ್ರಯೋಗ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಜಾನ್ಸನ್ & ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ವ್ಯಾಕ್ಸೀನ್‌ಗೆ ಭಾರತ ಮಾರುಕಟ್ಟೆಯಾಗಲಿದೆ.

ಕೊರೋನಾ ಲಸಿಕೆ ಕೊರತೆ: 700ಕ್ಕೂ ಹೆಚ್ಚು ವ್ಯಾಕ್ಸಿನ್ ಸೆಂಟರ್‌ಗೆ ಬೀಗ

ಜಾನ್ಸನ್ & ಜಾನ್ಸನ್ ಕಂಪನಿ ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆಗೆ ಪತ್ರ ಬರೆದಿದ್ದು, ಭಾರತದಲ್ಲಿ ಶೀಘ್ರವೇ ವ್ಯಾಕ್ಸಿನ್ ಪ್ರಯೋಗಕ್ಕೆ ಅನುಮತಿ ಕೋರಲಿದೆ ಎನ್ನಲಾಗಿದೆ

ದೇಶದಲ್ಲಿ ಕೊರೋನವೈರಸ್ ಎರಡನೇ ಅಲೆಯ ಉಲ್ಬಣದಿಂದಾಗಿ ವ್ಯಾಕ್ಸೀನ್‌ಗೆ ಹೆಚ್ಚಿನ ಬೇಡಿಕೆಯ ಮಧ್ಯೆ ಭಾರತ ತನ್ನ ಲಸಿಕೆ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಹಲವಾರು ರಾಜ್ಯಗಳಲ್ಲಿ ವ್ಯಾಕ್ಸೀನ್ ಸರಬರಾಜು ಮುಗಿದಿದೆ ಎಂದು ಹೇಳಿದೆ.

click me!