
ನವದೆಹಲಿ (ಜ.7): ಜಪಾನ್ ರಾಜಧಾನಿ ಟೋಕಿಯೊದ ಟೊಯೊಸು ಮೀನು ಮಾರುಕಟ್ಟೆಯಲ್ಲಿ ನಡೆದ ವಾರ್ಷಿಕ ಹೊಸ ವರ್ಷದ ಹರಾಜಿನಲ್ಲಿ 243 ಕೆಜಿ ತೂಕದ ಸರಿಸುಮಾರು ಒಂದು ಬೈಕ್‌ನಷ್ಟು ದೊಡ್ಡದಾಗಿದ್ದ ಬೃಹತ್ ಬ್ಲೂಫಿನ್ ಟ್ಯೂನ ಮೀನು ದಾಖಲೆಯ 510.3 ಮಿಲಿಯನ್ ಯೆನ್‌ಗೆ (ಸುಮಾರು ರೂ. 28.7 ಕೋಟಿ) ಮಾರಾಟವಾಯಿತು. ಸುಶಿ ಚೈನ್ ಮಾಲೀಕ, ಜಪಾನ್‌ನ "ಟ್ಯೂನ ಕಿಂಗ್" ಎಂದು ಜನಪ್ರಿಯವಾಗಿರುವ ಕಿಯೋಶಿ ಕಿಮುರಾ ವಿಜೇತ ಬಿಡ್ಡರ್ ಆಗಿದ್ದರು. ಈ ಮೀನು ತನ್ನ ರೆಸ್ಟೋರೆಂಟ್‌ಗಳಲ್ಲಿ ಪ್ರತಿ ಕೆಜಿಗೆ ರೂ. 11 ಲಕ್ಷದವರೆಗೆ ಮಾರಾಟವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಕಿಯೋಮುರಾ ಕಾರ್ಪ್ ಅಡಿಯಲ್ಲಿ ಸುಶಿ ಜನ್ಮೈ ರೆಸ್ಟೋರೆಂಟ್ ಚೈನ್ ನಿರ್ವಹಿಸುತ್ತಿರುವ ಕಿಮುರಾ, ಈ ಅಮೂಲ್ಯವಾದ ಮೀನನ್ನು ಪಡೆಯಲು ಸಾಕಷ್ಟು ಇತರ ಬಿಡ್ಡರ್‌ಗಳನ್ನು ಹಿಂದಿಕ್ಕಿದರು. ಈ ಖರೀದಿಯು 2019ರಲ್ಲಿ ನಿರ್ಮಾಣವಾಗಿದ್ದ ದಾಖಲೆ ಮುರಿದೆ. ಅಂದು 278 ಕೆಜಿ ತೂಕದ ಟ್ಯೂನ ಮೀನು ಖರೀದಿಸಲು ಸುಮಾರು $2.1 ಮಿಲಿಯನ್ (ರೂ. 17 ಕೋಟಿ) ಪಾವತಿ ಮಾಡಲಾಗಿತ್ತು.
ಹರಾಜಿನ ನಂತರ ಮಾತನಾಡಿದ ಕಿಮುರಾ, "ಈ ಮೀನು ನಮ್ಮಲ್ಲಿ ಅದೃಷ್ಟ. ಆದರೆ ನಾನು ಚೆನ್ನಾಗಿ ಕಾಣುವ ಟ್ಯೂನ ಮೀನುಗಳನ್ನು ನೋಡಿದಾಗ ಅದನ್ನು ಖರೀದಿಸದೇ ಇರಲು ಸಾಧ್ಯವಿಲ್ಲ. ಈ ಮೀನಿನ ಟೇಸ್ಟ್ ಸ್ಯಾಂಪಲ್‌ಅನ್ನೂ ಇನ್ನೂ ಮಾಡಿಲ್ಲ. ಆದರೆ, ಇದು ರುಚಿಕರವಾಗಿರುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಜಪಾನ್‌ನಲ್ಲಿ, ಬ್ಲೂಫಿನ್ ಟ್ಯೂನ ಮೀನುಗಳನ್ನು ಪ್ರತಿಷ್ಠೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಇದನ್ನು ಹೆಚ್ಚಾಗಿ ಶ್ರೀಮಂತ ಗ್ರಾಹಕರಿಗೆ ಮಾತ್ರ ಮೀಸಲಿಡಲಾಗುತ್ತದೆ. ಮೀನು ಸಂಘದ ಪ್ರಕಾರ, ಇದು ದೇಶದ ಪಾಕಶಾಲೆಯ ಸಂಸ್ಕೃತಿಯಲ್ಲಿ ಅತ್ಯಂತ ಬೇಡಿಕೆಯ ಖಾದ್ಯಗಳಲ್ಲಿ ಒಂದಾಗಿದೆ.
ಜಪಾನ್‌ನ ಅತ್ಯುತ್ತಮ ಮೀನುಗಳನ್ನು ಉತ್ಪಾದಿಸಲು ಹೆಸರುವಾಸಿಯಾದ ಅಮೋರಿ ಪ್ರಿಫೆಕ್ಚರ್‌ನ ಓಮಾ ಕರಾವಳಿಯಲ್ಲಿ ದಾಖಲೆಯ ಟ್ಯೂನ ಮೀನು ಹಿಡಿಯಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಪ್ರೀಮಿಯಂ-ಗುಣಮಟ್ಟದ ಸಮುದ್ರಾಹಾರವನ್ನು ಪೋಷಿಸುವ ಶೀತ ಮತ್ತು ಬೆಚ್ಚಗಿನ ಪ್ರವಾಹಗಳ ವಿಶಿಷ್ಟ ಮಿಶ್ರಣದಿಂದಾಗಿ ಓಮಾದ ಟ್ಯೂನ ಮೀನುಗಳು ನಿರಂತರವಾಗಿ ಹೆಚ್ಚಿನ ಬೆಲೆಯನ್ನು ಪಡೆಯುತ್ತವೆ.
ವಾರ್ಷಿಕ ಹರಾಜು ಪ್ರಮುಖ ಸುಶಿ ಚೈನ್‌ಗಳ ನಡುವಿನ ತೀವ್ರ ಸ್ಪರ್ಧೆಗೆ ಹೆಸರುವಾಸಿಯಾಗಿದೆ. ಕಳೆದ ವರ್ಷ, ಹಲವಾರು ಮೈಕೆಲಿನ್-ಸ್ಟಾರ್ ಹೊಂದಿದ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುವ ಒನೊಡೆರಾ ಗ್ರೂಪ್, 608 ಪೌಂಡ್‌ಗಳ ಟ್ಯೂನ ಮೀನುಗಳನ್ನು ಪಡೆದುಕೊಂಡಿತು. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಬಿಡ್‌ಗಳನ್ನು ಪಡೆದ ಈ ಗುಂಪು ಕಿಮುರಾ ಜೊತೆ ಮುಖಾಮುಖಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ