
ರೋಮ್(ನ.30): ಇಟಲಿಯಲ್ಲಿ ತೀವ್ರತರವಾದ ಭೂಕಂಪ ಸಂಭವಿಸಿದ್ದು, ಈ ಕುರಿತು ಸಂಸತ್ತಿನಲ್ಲಿ ಪರಿಹಾರ ಕಾರ್ಯಗಳ ಕುರಿತು ಚರ್ಚೆ ನಡೆಯುತ್ತಿದೆ.
ಆದರೆ ಚರ್ಚೆಯ ನಡುವೆಯೇ ಸಂದನೋರ್ವ ತಮ್ಮ ಗರ್ಲ್‌ಫ್ರೆಂಡ್‌ಗೆ ಮದುವೆಯ ಪ್ರಪೋಸ್ ಮಾಡಿದ್ದು, ಅಧ್ಯಕ್ಷರ ಕೋಪಕ್ಕೆ ಗುರಿಯಾದ ಘಟನೆಯೂ ನಡೆದಿದೆ.
ಫಾರ್ ರೈಟ್ ಲೀಗ್ ಪಕ್ಷದ ಫ್ಲೆವಿಯೋ ಡಿ ಮುರೋ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಗೆಳತಿ ಎಲಿಸಾ ಡೆ ಲಿಯೋ ಅವರಿಗೆ ಕಲಾಪದ ನಡುವೆಯೇ ಮದುವೆಯ ಪ್ರಪೋಸ್ ಮಾಡಿದರು.
ಫ್ಲೆವಿಯೋ ಪ್ರಪೋಸ್ ಮಾಡಿದಾಕ್ಷಣ ಹಲವು ಸಂಸದರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆದರೆ ಫ್ಲೆವಿಯೋ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸತ್ ಅಧ್ಯಕ್ಷ ರಾಬರ್ಟ್ ಫಿಕೋ, ಗಂಭಿರ ಚರಚೆಯ ನಡುವೆ ಇದರ ಅಗತ್ಯವಿರಲಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ