ಗಾಜಾ ಪ್ರಜೆಗಳ ಮೊಬೈಲ್‌ ಹ್ಯಾಕ್‌ ಮಾಡಿ, ನೆತನ್ಯಾಹು ವಿಶ್ವಸಂಸ್ಥೆ ಭಾಷಣ ಪ್ರಸಾರ ಮಾಡಿದ ಇಸ್ರೇಲ್‌ ಸೇನೆ!

Published : Sep 26, 2025, 11:15 PM IST
 Israeli PM Netanyahu israel gaza phone

ಸಾರಾಂಶ

IDF Hacks Gaza Phones to Stream Netanyahu UN Speech Amid UN Walkout ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ. 

ನವದೆಹಲಿ (ಸೆ.26): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ತಮ್ಮ ದೇಶವು ಗಾಜಾದಲ್ಲಿ ಹಮಾಸ್ ವಿರುದ್ಧದ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಮುಖ ಭಾಷಣದಲ್ಲಿ, ಅವರು ಗಾಜಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಯಾವ ಇಚ್ಛೆಯೂ ನಮಗಿಲ್ಲ ಎಂದು ಹೇಳಿದರು. ಇನ್ನೊಂದೆಡೆ ಬೆಂಜಮಿನ್‌ ನೆತನ್ಯಾಹು ಭಾಷಣ ಮಾಡುತ್ತಿದ್ದರೆ, ಹೆಚ್ಚಿನ ದೇಶದ ಪ್ರತಿನಿಧಿಗಳು ಹಾಲ್‌ಅನ್ನು ತೊರೆದಿದ್ದರು. ಇದರಿಂದಾಗಿ ಅವರು ಬಹುತೇಕ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಬೇಕಾಯಿತು.

ಇನ್ನೊಂದೆಡೆ ಇತ್ತ ಇಸ್ರೇಲ್‌ನಲ್ಲಿ ಸ್ಥಳೀಯ ಸರ್ಕಾರ, ಗಾಜಾದ ನಾಗರೀಕರು, ಹಮಾಸ್‌ ಉಗ್ರರು ಹಾಗೂ ಹಮಾಸ್‌ನಿಂದ ಒತ್ತೆಯಾಳುಗಳಾಗಿರುವ ಇಸ್ರೇಲ್‌ನ ಪ್ರಜೆಗಳು, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮಾಡಿದ ಭಾಷಣವನ್ನು ಕೇಳಲು ಸಾಧ್ಯವಾಗುವಂತೆ ವಿವಿಧ ಆಧುನಿಕ ತಂತ್ರಗಳನ್ನು ಬಳಸಿದ್ದರು. ಇಸ್ರೇಲ್‌ ಹಾಗೂ ಗಾಜಾ ಗಡಿಯಲ್ಲಿ ಇಸ್ರೇಲ್‌ ಸೇನೆ ದೊಡ್ಡ ದೊಡ್ಡ ಲೌಡ್‌ಸ್ಪೀಕರ್‌ಗಳನ್ನು ಇರಿಸಿತ್ತು. ಆ ಮೂಲಕ ನೆತನ್ಯಾಹು ಆಡಿದ ಮಾತುಗಳು ಎಲ್ಲರಿಗೂ ಉದ್ದೇಶಪೂವರ್ಕವಾಗಿ ಕೇಳುವಂತೆ ಮಾಡಿದ್ದರು.

ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಪ್ರಧಾನ ಮಂತ್ರಿ ಕಚೇರಿಯು ಈಗಾಗಲೇ ಅಭೂತಪೂರ್ವ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಹೇಳಿದೆ. ವರದಿಯ ಪ್ರಕಾರ, ಇಸ್ರೇಲ್‌ ಸೇನೆಯು ಗಾಜಾದ ನಿವಾಸಿಗಳು ಹಾಗೂ ಹಮಾಸ್‌ ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್‌ ಮಾಡಿದ್ದು, ನೆತನ್ಯಾಹು ಅವರ ಭಾಷಣವನ್ನು ಅವರ ಮೊಬೈಲ್‌ನಲ್ಲಿಯೇ ನೇರಪ್ರಸಾರ ಮಾಡಲಾಗಿದೆ.

"ಪ್ರಧಾನ ಮಂತ್ರಿಗಳ ಕಚೇರಿಯು, ಐಡಿಎಫ್ ಸಹಕಾರದೊಂದಿಗೆ, ಗಾಜಾ ಗಡಿಯ ಇಸ್ರೇಲ್ ಬದಿಯಲ್ಲಿ ಟ್ರಕ್‌ಗಳಲ್ಲಿ ಧ್ವನಿವರ್ಧಕಗಳನ್ನು ಇರಿಸಲು ನಾಗರಿಕ ಸಂಸ್ಥೆಗಳಿಗೆ ಸೂಚನೆ ನೀಡಿದೆ" ಎಂದು ಪಿಎಂಒ ಹೇಳಿದೆ, "ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನೆತನ್ಯಾಹು ಅವರ ಐತಿಹಾಸಿಕ ಭಾಷಣವನ್ನು ಗಾಜಾ ಪಟ್ಟಿಯಲ್ಲಿ ಪ್ರಸಾರ ಮಾಡುವ ಉದ್ದೇಶದಿಂದ ಮಾಡಿದ ಕೆಲಸ' ಎಂದು ತಿಳಿಸಿದೆ.

ಯಾವುದೇ ಒತ್ತಡಕ್ಕೂ ಇಸ್ರೇಲ್‌ ಮಣಿಯೋದಿಲ್ಲ

ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣ ಆರಂಭಿಸುತ್ತಿದ್ದಂತೆ, ಡಜನ್‌ಗಟ್ಟಲೆ ಪ್ರತಿನಿಧಿಗಳು ಸಾಮೂಹಿಕವಾಗಿ ಹಾಲ್‌ನಿಂದ ಹೊರನಡೆದರು. ಅವರ ಭಾಷಣದ ಸಮಯದಲ್ಲಿಯೂ ಇಡೀ ಹಾಲ್‌ನಲ್ಲಿ ಘೋಷಣೆಗಳು ಪ್ರತಿಧ್ವನಿಸುತ್ತಿದ್ದವು.

"ಪಾಶ್ಚಿಮಾತ್ಯ ನಾಯಕರು ಒತ್ತಡಕ್ಕೆ ಮಣಿದಿರಬಹುದು. ಆದರೆ, ನಾನು ನಿಮಗೆ ಒಂದು ವಿಚಾರ ಹೇಳುತ್ತೇನೆ. ಆದರೆ, ಇಸ್ರೇಲ್‌ ಯಾವುದೇ ಒತ್ತಡಕ್ಕೂ ಮಣಿಯೋದಿಲ್ಲ' ಎಂದು ದೃಢವಾಗಿ ಹೇಳಿದ್ದಾರೆ.

ಗಾಜಾ ಸಂಘರ್ಷವನ್ನು ಕೊನೆಗೊಳಿಸಲು ಒತ್ತಡ ಹೇರಲಾಗುತ್ತಿರುವ ನಡುವೆಯೇ ಇಸ್ರೇಲಿ ಪ್ರಧಾನಿಯ ಮೇಲೆ ಯುದ್ಧ ಅಪರಾಧಗಳ ಆರೋಪ ಹೊರಿಸಲಾಗಿದೆ. ಶುಕ್ರವಾರದ ಭಾಷಣವು ಅಂತರರಾಷ್ಟ್ರೀಯ ಸಮುದಾಯದ ಅತಿದೊಡ್ಡ ವೇದಿಕೆಯನ್ನು ಈ ವಿಚಾರದಲ್ಲಿ ಹಿಂದಕ್ಕೆ ತಳ್ಳಲು ದೊಡ್ಡ ಅವಕಾಶವಾಗಿತ್ತು.

2023ರ ಅಕ್ಟೋಬರ್‌ 7 ರಂದು ಹಮಾಸ್‌ ದಾಳಿ ಮಾಡಿದ್ದ ಘಟನೆಯ ಪ್ರದೇಶಕ್ಕೆ ಕರೆದೊಯ್ಯುವ QR ಕೋಡ್‌ನೊಂದಿಗೆ ವಿಶೇಷ ಒತ್ತೆಯಾಳು ಪಿನ್ ಅನ್ನು ಧರಿಸಿದ್ದರು ಮತ್ತು "ದಿ ಕರ್ಸ್" ಎಂಬ ಶೀರ್ಷಿಕೆಯ ಪ್ರದೇಶದ ನಕ್ಷೆಯನ್ನು ಕೂಡ ಅವರು ಹಿಡಿದಿದ್ದರು.

"ಯೆಹೂದ್ಯ ವಿರೋಧಿತ್ವವು ತೀವ್ರವಾಗಿ ಸಾಯುತ್ತದೆ. ವಾಸ್ತವವಾಗಿ, ಅದು ಸಾಯುವುದೇ ಇಲ್ಲ" ಎಂದು ನೆತನ್ಯಾಹು ಹೇಳಿದರು. ಈಗ, 150 ದೇಶಗಳು ಪ್ಯಾಲೆಸ್ಟೈನ್ ಅನ್ನು ದೇಶವಾಗಿ ಗುರುತಿಸುತ್ತವೆ, ಆದರೆ ಅಮೆರಿಕ ಅದನ್ನು ಗುರುತಿಸುವುದಿಲ್ಲ. ಇದರ ಹೊರತಾಗಿಯೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!