Israel election results 2026: ಇಸ್ರೇಲ್ ಸಂಸತ್ ಚುನಾವಣೆಯಲ್ಲಿ 93% ಮತ ಎಣಿಕೆ ಪೂರ್ಣ, ಯಾರಿಗೆ ಅಧಿಕಾರ? ನೆತನ್ಯಾಹುಗೆ ಸಂಕಷ್ಟ?

Published : Oct 29, 2026, 07:31 AM ISTUpdated : Oct 29, 2026, 07:41 AM IST
Israel Election results 2026

ಸಾರಾಂಶ

ಇಸ್ರೇಲ್ ಸಂಸತ್ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಅತಂತ್ರ ಸಂಸತ್ ನಿರ್ಮಾಣವಾಗುವ ಮುನ್ಸೂಚನೆ ಸಿಕ್ಕಿದೆ. ಬೆಂಜಮಿನ್ ನೆತನ್ಯಾಹು ಮತ್ತು ವಿರೋಧ ಪಕ್ಷದ ಗಾಡಿ ಐಸೆನ್‌ಕೋಟ್ ಇಬ್ಬರಿಗೂ ಬಹುಮತ ಸಿಗುವ ಸಾಧ್ಯತೆ ಇಲ್ಲ. ಅರಬ್ ಪಕ್ಷಗಳ ಬೆಂಬಲದೊಂದಿಗೆ ಐಸೆನ್‌ಕೋಟ್ ಸರ್ಕಾರ ರಚಿಸುವ ಸಾಧ್ಯತೆಯೂ ಇದೆ.

Israel election results 2026: ಇಸ್ರೇಲ್‌ ಸಂಸತ್ತಿನ 120 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮುಂದುವರಿದ್ದು, ಅತಂತ್ರ ಸಂಸತ್‌ ರಚನೆಯ ಮುನ್ಸೂಚನೆ ಸಿಕ್ಕಿದೆ.

ಹಾಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಪಕ್ಷ 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅವರ ಎದುರಾಳಿ ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಬಣವು 48 ಸ್ಥಾನ, ಅರಬ್‌ ಪಕ್ಷ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಹುಮತಕ್ಕೆ ಅಗತ್ಯವಾದ 61 ಸ್ಥಾನ ಗೆಲ್ಲುವ ಸಾಧ್ಯತೆ ನೆತನ್ಯಾಹು ಮತ್ತು ಐಸೆನ್‌ಕೋಟ್‌ ಅವರ ಪಕ್ಷಗಳಿಗಿಲ್ಲ. ಹೀಗಾದರೆ ಅರಬ್‌ ಪಕ್ಷಗಳ ಜೊತೆ ಸೇರಿ ಐಸೆನ್‌ಕೋಟ್‌ ಅವರ ಪಕ್ಷ ಸರ್ಕಾರ ರಚಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ನೆತನ್ಯಾಹು ಅಧಿಕಾರ ಕಳೆದುಕೊಳ್ಳಲಿದ್ದಾರೆ. ಅಂತಿಮ ಫಲಿತಾಂಶ ನ.4ರಂದು ಹೊರ ಬೀಳುವ ಸಾಧ್ಯತೆಯಿದೆ.

ಇಸ್ರೇಲ್‌ನಲ್ಲಿ 93% ಮತಗಳು ಎಣಿಕೆ

ಇಲ್ಲಿಯವರೆಗೆ ಇಸ್ರೇಲ್‌ನಲ್ಲಿ ಶೇ 93 ರಷ್ಟು ಮತಗಳನ್ನು ಎಣಿಕೆಯಾಗಿದೆ. ನೆತನ್ಯಾಹು ಅವರ ಬಣವು ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಒಕ್ಕೂಟಕ್ಕಿಂತ ಮುಂದಿದೆ. ಆದರೆ ಎರಡೂ ಬಣಗಳು ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಿರುವ 61 ಸ್ಥಾನಗಳನ್ನು ತಲುಪುತ್ತಿಲ್ಲ. ಹೀಗಾಗಿ ನೆತನ್ಯಾಹು ಅವರ ಬಣವು 53 ಸ್ಥಾನಗಳನ್ನು ಗೆದ್ದರೆ ಇದು ಮ್ಯಾಜಿಕ್ ನಂಬರ್ ತಲುಪಲು ಎಂಟು ಸಂಖ್ಯೆ ಕಡಿಮೆಯಾಗಲಿದೆ. ಇದೇ ವೇಳೆ ಐಸೆನ್‌ಕೋಟ್ ಅವರ ಒಕ್ಕೂಟವು 48 ಗೆಲ್ಲಲಿದ್ದು. ಅದು ಅರಬ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ, ಅಂದರೆ 48+19 ಒಟ್ಟಾಗಿ ಸೇರಿ ಆಡಳಿತ ರಚಿಸುವ ಸಾಧ್ಯತೆಯಿದೆ.

ಇಸ್ರೇಲ್ ಚುನಾವಣಾ ಫಲಿತಾಂಶದ ಬಗ್ಗೆ ಟ್ರಂಪ್ ಪ್ರತಿಕ್ರಿಯೆ

ಇಸ್ರೇಲ್‌ ಸಂಸತ್ ಚುನಾವಣಾ ಫಲಿತಾಂಶ ಅತಂತ್ರ ಸ್ಥಿತಿಗೆ ತಲುಪಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದೆ ಇದ್ದಾರೆ. ನನ್ನ ಬೆಂಬಲ ನೆತನ್ಯಾಹುಗೆ ಎಂದು ಟ್ರಂಪ್ ಬಹಿರಂಗವಾಗಿ ಬೆಂಬಲಿಸಿದ್ದಾರೆ.

ಈ ಬಗ್ಗೆ ಆಕ್ಸಿಯಾಸ್ ಜೊತೆ ಮಾತನಾಡಿದ ಟ್ರಂಪ್, ನೆತನ್ಯಾಹುಗೆ ನನ್ನ ಬೆಂಬಲದಿಂದ ಚುನಾವಣೆಯಲ್ಲಿ ಲಾಭವಾಗಿದೆ ಎಂದು ನಾನು ಕೇಳಿದ್ದೇನೆ. ನೆತನ್ಯಾಹು ಅವರ ಚುನಾವಣಾ ಫಲಿತಾಂಶಗಳ ಬಗ್ಗೆ ಆರಂಭದಲ್ಲಿ ತುಂಬಾ ಕೆಟ್ಟ ಸುದ್ದಿ ಬಂತಾದರೂ ಈಗ ಇತ್ತೀಚಿನ ಅಪ್ಡೇಟ್‌ ನೋಡಿದರೆ ಅವರು ಇಸ್ರೇಲ್‌ ಪ್ರಧಾನಿಯವರ ಸ್ಥಾನ ಉತ್ತಮವಾಗಿದೆ ಎಂದಿದ್ದಾರೆ.

ಇಸ್ರೇಲ್‌ನಲ್ಲಿ 93% ಮತಗಳು ಎಣಿಕೆ ಮುಗಿದಿದ್ದು, ಇಲ್ಲಿಯವರೆಗೆ ಇಸ್ರೇಲ್‌ನಲ್ಲಿ ಶೇ 93 ರಷ್ಟು ಮತಗಳನ್ನು ಎಣಿಕೆಯಾಗಿದೆ. ನೆತನ್ಯಾಹು ಅವರ ಬಣವು ಗಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ಒಕ್ಕೂಟಕ್ಕಿಂತ ಮುಂದಿದೆ. ಇಸ್ರೇಲ್‌ನಲ್ಲಿ ಇನ್ನೂ ಅರ್ಧ ಮಿಲಿಯನ್ ಮತ ಎಣಿಕೆ ಬಾಕಿಯಿದೆ. ಅಂದರೆ ಸುಮಾರು 500,000 ಮತಗಳನ್ನು ಎಣಿಕೆ ಮಾಡಲು ಬಾಕಿಯಿದೆ. ಇವುಗಳಲ್ಲಿ ಸೈನಿಕರು, ರಾಜತಾಂತ್ರಿಕರು, ಕೈದಿಗಳ ಮತಗಳು ಸೇರಿವೆ. ಈ ಉಳಿದ ಮತಗಳು ವಿವಿಧ ಬಣಗಳು ಪಡೆದ ಸ್ಥಾನಗಳ ಸಂಖ್ಯೆಯನ್ನು ಬದಲಾಯಿಸಬಹುದು. ಒಟ್ಟಾರೆ ಅಧಿಕಾರ ಬದಲಾಯಿಸುವಷ್ಟು ಪರಿಣಾಮಕಾರಿಯೇನಲ್ಲ. ಈ ಹಿಂದೆ ಟ್ರಂಪ್ ಟ್ರುತ್‌ಸೋಷಿಯಲ್‌ನಲ್ಲಿ ನೆತನ್ಯಾಹು ಅವರ ಕಾರ್ಯಕ್ಷಮತೆಗೆ ಮೆಚ್ಚುಗೆ ಸೂಚಿಸಿದ್ದರು. ಈ ಚುನಾವಣೆಯಲ್ಲಿ ನೆತನ್ಯಾಹುಗೆ ಟ್ರಂಪ್ ಬೆಂಬಲ ಕೂಡ ಫಲಿತಾಂಶದಲ್ಲಿ ಪ್ರಮುಖ ಪಾತ್ರವಹಿಸಿದೆ. ಬಹುಶಃ ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬರಲಿರುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Ramayana Release: ಭಾರತ ಮಾತ್ರವಲ್ಲ, ಭಾರತೀಯ ಮಹಾಕಾವ್ಯ 'ರಾಮಾಯಣ' ಸಿನಿಮಾ ನೋಡಲಿವೆ 100ಕ್ಕೂ ಹೆಚ್ಚು ದೇಶಗಳು!
YASH in US: ಅಮೆರಿಕಾದಲ್ಲಿ ಕನ್ನಡ ನಟ ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದು ಕೇಳಿ ಇಡೀ ಜಗತ್ತೇ ಬೆರಗಾಯ್ತು!