1000ಕ್ಕೂ ಹೆಚ್ಚು ಜನರನ್ನು ಗಾಜಾ ನಗರದ ಏಕೈಕ ಕ್ಯಾನ್ಸರ್ ಆಸ್ಪತ್ರೆ ಆಲ-ರಂತಿಸಿಯಲ್ಲಿ ಒತ್ತೆಯಿಟ್ಟುಕೊಂಡಿದ್ದ ಹಮಾಸ್ ಕಮಾಂಡರ್ ಅಹ್ಮದ್ ಸಿಯಾಂನನ್ನು ಇಸ್ರೇಲಿ ಸೇನಾ ಪಡೆಗಳು ವಾಯುದಾಳಿ ಮೂಲಕ ಹೊಡೆದುರುಳಿಸಿವೆ.
ಗಾಜಾ: 1000ಕ್ಕೂ ಹೆಚ್ಚು ಜನರನ್ನು ಗಾಜಾ ನಗರದ ಏಕೈಕ ಕ್ಯಾನ್ಸರ್ ಆಸ್ಪತ್ರೆ ಆಲ-ರಂತಿಸಿಯಲ್ಲಿ ಒತ್ತೆಯಿಟ್ಟುಕೊಂಡಿದ್ದ ಹಮಾಸ್ ಕಮಾಂಡರ್ ಅಹ್ಮದ್ ಸಿಯಾಂನನ್ನು ಇಸ್ರೇಲಿ ಸೇನಾ ಪಡೆಗಳು ವಾಯುದಾಳಿ ಮೂಲಕ ಹೊಡೆದುರುಳಿಸಿವೆ. ಈ ವಿಷಯವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಇಸ್ರೇಲ್ ಸೇನಾ ಸಂಸ್ಥೆ, ಗಾಜಾ ನಗರದ ರಂತಿಸಿ ಆಸ್ಪತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಒತ್ತೆಯಾಗಿಟ್ಟುಕೊಂಡು ಅದರ ಕೆಳಗಿನ ಸುರಂಗದ ಮೂಲಕ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದ ಹಮಾಸ್ ನಾಸಿರ್ ರದ್ವಾನ್ ಕಂಪನಿ ಕಮಾಂಡರ್ ಅಹ್ಮದ್ ಸಿಯಾಂನನ್ನು ವಾಯುದಾಳಿಯ ಮೂಲಕ ಹೊಡೆದುರುಳಿಸಲಾಗಿದೆ. ನಮ್ಮ ಗುಪ್ತಚರ ಸಂಸ್ಥೆಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಸಿಯಾಂ ಅಡಗಿ ಕುಳಿತಿದ್ದ ಶಾಲೆಯ ಮೇಲೆ ವಾಯುದಾಳಿ ಮಾಡುವ ಮೂಲಕ ಅವನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ.
ಆಲ್‌ಶಿಫಾ ಆಸ್ಪತ್ರೆಯಿಂದ ಸಾವಿರಾರು ಮಂದಿ ಪಲಾಯನ: ಇಂಧನವಿಲ್ಲದೆ ಸಾವಿನಂಚಿನಲ್ಲಿರುವ ನೂರಾರು ಶಿಶುಗಳು
ಗಾಜಾದ ಆಲ್-ಶಿಫಾ ಆಸ್ಪತ್ರೆಯನ್ನು ಇಸ್ರೇಲಿ ಸೇನಾ ಪಡೆಗಳು ಸುತ್ತುವರೆದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯೊಳಗಿದ್ದ ಸಾವಿರಾರು ಮಂದಿ ಪಲಾಯನಗೈದಿದ್ದಾರೆ. ಮತ್ತೊಂದೆಡೆ ಸರಿಯಾದ ಇಂಧನ ಪೂರೈಕೆಯಿಲ್ಲದೆ ನೂರಾರು ಶಿಶುಗಳು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿವೆ. ಆದರೆ ಇಸ್ರೇಲಿ ಸೇನಾ ಪಡೆಗಳು ಇಂಧನ ಪೂರೈಕೆ ಸ್ಥಗಿತ ವಿಚಾರವನ್ನು ಅಲ್ಲಗಳೆದಿದ್ದು, ಅಸ್ಪತ್ರೆಯ ಪರಿಧಿಯಲ್ಲೇ 79 ಗ್ಯಾಲನ್ (300 ಲೀಟರ್) ಇಂಧನ ಶೇಖರಿಸಿಟ್ಟಿರುವುದಾಗಿ ತಿಳಿಸಿದೆ. ಆದರೆ ಹಮಾಸ್ ಬಂಡುಕೋರರು ತಮಗೆ ಅದನ್ನು ಸಿಗದ ರೀತಿಯಲ್ಲಿ ಅಡಗಿಸಿಟ್ಟಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ಆಲ್-ಶಿಫಾ ಆಸ್ಪತ್ರೆಯಲ್ಲಿ ಇನ್ನೂ ಅಶಕ್ತರು, ನವಜಾತ ಶಿಶುಗಳೂ ಸೇರಿದಂತೆ ನೂರಾರು ಮಂದಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಭಾರತದ ಅಚ್ಚರಿಯ ನಡೆ: ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ
80 ಒತ್ತೆಯಾಳುಗಳ ಬಿಡುಗಡೆಗೆ ಡೀಲ್ ಇಸ್ರೇಲ್ ಹಮಾಸ್ ಡೀಲ್
ತನ್ನ ದೇಶದೊಳಕ್ಕೆ ನುಗ್ಗಿ ದಾಳಿ ನಡೆಸಿ, 240 ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಹಮಾಸ್ ಉಗ್ರರನ್ನು ಹೆಡೆಮುರಿ ಕಟ್ಟಲು ಪಣ ತೊಟ್ಟಿರುವ ಇಸ್ರೇಲ್, ಇದೀಗ ತನ್ನ ಯೋಧರನ್ನು ಗಾಜಾಪಟ್ಟಿಯ ಶಿಫಾ ಆಸತ್ರೆ ಹೊರಗೆ ಜಮಾಯಿಸಿದೆ. 15 ರಿಂದ 20 ಸಾವಿರ ನಿರಾಶ್ರಿತರು, 1500 ರೋಗಿಗಳು ಹಾಗೂ ಅಷ್ಟೇ ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ ತಂಗಿರುವ ಈ ಆಸ್ಪತ್ರೆಯ ಹೊರಗೆ ದೊಡ್ಡ ಕದನವೇ ನಡೆಯುತ್ತಿದೆ. ಗಾಜಾ ನಗರ ಅದರಲ್ಲೂ ಶಿಫಾ ಆಸ್ಪತ್ರೆ ಇರುವ ಪ್ರದೇಶದಲ್ಲಿ ರಾತ್ರಿಯಿಡೀ ವಾಯುದಾಳಿ ಹಾಗೂ ಶೆಲ್ ದಾಳಿಗಳು ನಡೆದಿವೆ. ಯಾವುದೇ ಕ್ಷಣದಲ್ಲಿ ಇಸ್ರೇಲ್ ಯೋಧರು ಒಳಗೆ ನುಗ್ಗಬಹುದು ಎಂಬ ಭೀತಿಯೊಂದಿಗೇ ಆಸತ್ರೆಯಲ್ಲಿ ಜನ ಸಮಯ ದೂಡುತ್ತಿದ್ದಾರೆ.
ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ, ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ ಮನವಿ!
ಶಿಫಾ ಆಸತ್ರೆಯ ಒಳಗೆ ಹಮಾಸ್ ಉಗ್ರರು ಕಮಾಂಡ್ ಪೋಸ್ಟ್ ಹೊಂದಿದ್ದಾರೆ ಎಂದು ಆರೋಪಿಸಿ ಇಸ್ರೇಲ್ ಈ ದಾಳಿ ನಡೆಸುತ್ತಿದೆ. ಆದರೆ ಈ ಆರೋಪವನ್ನು ಹಮಾಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ತಿರಸ್ಕರಿಸಿದ್ದಾರೆ. ಈ ನಡುವೆ, ರಾಷ್ಟ್ರವನ್ನುದೇಶಿಸಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ಹಮಾಸ್ ತನ್ನ ವಶದಲ್ಲಿಟ್ಟುಕೊಂಡಿರುವ 240 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಕದನ ವಿರಾಮ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಗಾಜಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಇನ್‌ಕ್ಯುಬೇಟರ್‌ಗಳಲ್ಲಿರುವ 39 ಶಿಶುಗಳ ಹೋರಾಟ
ಶಿಶುಗಳ ರಕ್ಷಣೆ: ಇಸ್ರೇಲ್ ಭರವಸೆ
ಇಸ್ರೇಲ್ ಯೋಧರು ಹಾಗೂ ಹಮಾಸ್ ಉಗ್ರರ ನಡುವಣ ರಣಾಂಗಣವಾಗಿರುವ ಗಾಜಾದ ಅಲ್ - ಶಿಫಾ ಆಸ್ಪತ್ರೆಯಲ್ಲಿ ಸಿಲುಕಿರುವ ಶಿಶುಗಳನ್ನು ತೆರವುಗೊಳಿಸಲು ಸಹಾಯ ಮಾಡುವುದಾಗಿ ಇಸ್ರೇಲ್ ರಕ್ಷಣಾ ಪಡೆ (Israel Defense Forces) ಘೋಷಿಸಿದೆ. ಅಲ್ - ಶಿಫಾ ಆಸ್ಪತ್ರೆಯಿಂದ (Al-Shifa hospital) ತನಗೆ ಇದ್ದ ನಂಟು ಕಡಿತಗೊಂಡಿದೆ. ಅಲ್ಲಿ ಇದ್ದ ವ್ಯಕ್ತಿಗಳು ಆಸತ್ರೆ ತೊರೆದಿದ್ದಾರೆ. ಆ ಆಸ್ಪತ್ರೆಯಲ್ಲಿ ಮಕ್ಕಳು ಹಾಗೂ ವೃದ್ಧರು ಇಸ್ರೇಲ್ ದಾಳಿಯಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಈ ಘೋಷಣೆ ಮಾಡಿದೆ.