ಇರಾನ್‌ ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ: ಟ್ರಂಪ್

Kannadaprabha News   | Kannada Prabha
Published : Apr 17, 2026, 09:32 AM IST
Iran agreed to provide enriched uranium says Trump rav

ಸಾರಾಂಶ

ಇಸ್ರೇಲ್‌- ಲೆಬನಾನ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಇರಾನ್‌ ಸಂಘರ್ಷದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಇರಾನ್‌ ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ’ ಎಂದಿದ್ದು ಕುತೂಹಲಕ್ಕೆ ಕಾರಣವಾಗಿ

ವಾಷಿಂಗ್ಟನ್‌: ಇಸ್ರೇಲ್‌- ಲೆಬನಾನ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಇರಾನ್‌ ಸಂಘರ್ಷದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಇರಾನ್‌ ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ’ ಎಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಶ್ವೇತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್‌, ‘ಇರಾನ್‌ ನಮಗೆ ಸಂಸ್ಕರಿಸಿದ ಯುರೇನಿಯಂ ನೀಡಲು ಒಪ್ಪಿದೆ. ಹೀಗಾಗಿ ನಾವು ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ’ ಎಂದರು. ಕಳೆದ ವಾರ ಇಸ್ಲಾಮಾಬಾದ್‌ ಮಾತುಕತೆ ವೇಳೆ ಅಮೆರಿಕ ಇರಾನ್‌ ಬಳಿ 20 ವರ್ಷ ಯುರೇನಿಯಂ ಸ್ಥಗಿತಕ್ಕೆ ಬೇಡಿಕೆಯಿಟ್ಟಿತ್ತು. ಆದರೆ ಇರಾನ್‌ 5 ವರ್ಷಕಷ್ಟೇ ಸಮ್ಮತಿಸಿತ್ತು. ಇದೇ ಕಾರಣಕ್ಕೆ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು ಎಂದು ವರದಿಯಾಗಿತ್ತು.

ಇರಾನ್‌ನಿಂದ ಯುರೇನಿಯಂ?

ರಷ್ಯಾ, ಇರಾನ್‌ ತೈಲ ನಿರ್ಬಂಧದ ವಿನಾಯಿತಿ ವಿಸ್ತರಣೆ ಇಲ್ಲ: ಅಮೆರಿಕ ಕಳೆದ ತಿಂಗಳು ನೀಡಲಾಗಿದ್ದ ರಷ್ಯಾ ಮತ್ತು ಇರಾನ್ ತೈಲದ ಮೇಲಿನ ನಿರ್ಬಂಧಗಳ ವಿನಾಯಿತಿ ವಿಸ್ತರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಹೋರ್ಮುಜ್‌ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದು, ಇದು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್, ‘ರಷ್ಯಾ ಮತ್ತು ಇರಾನ್‌ ತೈಲದ ಮೇಲಿನ ಸಾಮಾನ್ಯ ಪರವಾನಗಿ ನವೀಕರಿಸುವುದಿಲ್ಲ. ಮಾರ್ಚ್‌ನಲ್ಲಿ ತಾತ್ಕಾಲಿಕವಾಗಿ ನೀಡಲಾದ ವಿನಾಯಿತಿಗಳು ಯುದ್ಧದಿಂದ ಉಂಟಾದ ತೈಲ ಸರಬರಾಜು ಸಮಸ್ಯೆಯನ್ನು ಸರಿಪಡಿಸುವ ಉದ್ದೇಶ ಹೊಂದಿದ್ದವು. ಇರಾನ್ ತೈಲಕ್ಕೆ ನೀಡಲಾದ ವಿನಾಯಿತಿ ಈ ವಾರ ಮುಗಿಯುತ್ತಿದೆ. ರಷ್ಯಾದ್ದು ಕಳೆದ ವಾರಾಂತ್ಯವೇ ಅಂತ್ಯಗೊಂಡಿದೆ. ಇವನ್ನು ಮತ್ತೆ ವಿಸ್ತರಿಸುವುದಿಲ್ಲ’ ಎಂದು ಘೋಷಿಸಿದ್ದಾರೆ. ಭಾರತವನ್ನು ‘ಅತ್ಯಂತ ಮುಖ್ಯ ಪಾಲುದಾರ’ ಎಂದು ಕರೆದಿರುವ ಅವರು, ಅಮೆರಿಕದ ತೈಲವನ್ನು ಹೆಚ್ಚು ಖರೀದಿಸುವಂತೆ ಸಲಹೆ ನೀಡಿದ್ದಾರೆ

ಮಾ.12ರಂದು ಅಮೆರಿಕ ಭಾರತಕ್ಕೆ ರಷ್ಯಾ ತೈಲ ಖರೀದಿಸಲು ವಿಶೇಷ 30 ದಿನಗಳ ವಿನಾಯಿತಿ ನೀಡಿತ್ತು. ಇರಾನ್ ತೈಲಕ್ಕೆ ನೀಡಲಾದ ವಿನಾಯಿತಿ ಸುಮಾರು 14 ಕೋಟಿ ಬ್ಯಾರೆಲ್ ತೈಲವನ್ನು ಒಳಗೊಂಡಿತ್ತು. ಭಾರತ ಈ ವಿನಾಯಿತಿಯಿಂದ ಗಣನೀಯ ಲಾಭ ಪಡೆದಿದ್ದು, ಸುಮಾರು 3 ಕೋಟಿ ಬ್ಯಾರೆಲ್ ರಷ್ಯಾ ತೈಲವನ್ನು ಆರ್ಡರ್ ಮಾಡಿತ್ತು. ಆದರೆ ಈಗ ಈ ಕ್ರಮವನ್ನು ಮುಂದುವರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಈ ನಿರ್ಧಾರದಿಂದ ಭಾರತಕ್ಕೆ ರಿಯಾಯಿತಿಯಲ್ಲಿ ತೈಲ ಸಿಗುವುದು ಕಷ್ಟವಾಗಬಹುದು ಮತ್ತು ಜಾಗತಿಕ ತೈಲ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ IISC ದಾಳಿಕೋರ ಉಗ್ರನ ಹಮ್ಜಾ ಮೇಲೆ ದಾಳಿ ನಡೆಸಿದ ಅನಾಮಿಕ ಯಾರು?
34 ವರ್ಷಗಳ ನಂತರ ಇಸ್ರೇಲ್-ಲೆಬನಾನ್ ಮಾತುಕತೆ: 10 ದಿನಗಳ ಕದನ ವಿರಾಮ ಘೋಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!