International Yoga Day 2024: ಜಿನಿವಾದಲ್ಲಿ ಯೋಗ ದಿನಾಚರಣೆಯನ್ನು ನಡೆಸಿಕೊಟ್ಟ ರವಿಶಂಕರ್ ಗುರೂಜಿ!

By Suvarna News  |  First Published Jun 21, 2024, 4:32 PM IST

ಜಾಗತಿಕ ಮಾನವತಾವಾದಿಗಳಾದ, ಆಧ್ಯಾತ್ಮಿಕ ಗುರುಗಳಾದ, ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಸಂಯುಕ್ತ ರಾಷ್ಟ್ರಗಳ ಮುಖ್ಯ ಕಚೇರಿಯಾದ ಜಿನಿವಾದಲ್ಲಿ ಯೋಗ ದಿನಾಚರಣೆಯನ್ನು ಜೂನ್ 20 ಮತ್ತು 21ರಂದು ನಡೆಸಿಕೊಟ್ಟರು. 


ಬೆಂಗಳೂರು (ಜೂ.21): ಜಾಗತಿಕ ಮಾನವತಾವಾದಿಗಳಾದ, ಆಧ್ಯಾತ್ಮಿಕ ಗುರುಗಳಾದ, ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಸಂಯುಕ್ತ ರಾಷ್ಟ್ರಗಳ ಮುಖ್ಯ ಕಚೇರಿಯಾದ ಜಿನಿವಾದಲ್ಲಿ ಯೋಗ ದಿನಾಚರಣೆಯನ್ನು ಜೂನ್ 20 ಮತ್ತು 21ರಂದು ನಡೆಸಿಕೊಟ್ಟರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಆಯುಷ್ಯ ಮಂತ್ರಾಲಯದೊಡನೆ ಭಾರತದ ಅನೇಕ ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿತು. ಭಾರತದ  ಚೀನಾ-ಭೂತಾನ್ ಗಡಿಯಿಂದ ಗುಜರಾತಿನ ವಿಮಾನ ನಿಲ್ದಾಣದ ವರೆಗೆ; ದೆಹಲಿಯ ನೆಹರು ಪಾರ್ಕ್ ನಿಂದ, ಚೈನ್ನೈನ ಬೀಚ್ ನವರೆಗೆ, ಹೀಗೆ ಭಾರತದ ಉದ್ದಗಲಕ್ಕೂ ಆರ್ಟ್ ಆಫ್ ಲಿವಿಂಗ್ ನ ನುರಿತ ಯೋಗ ಶಿಕ್ಷಕರು ಉದಯಕಾಲದಲ್ಲಿ 10 ನೆಯ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು. ಜಗತ್ತೆಲ್ಲವೂ ಭಾರತದ ಈ ಪ್ರಾಚೀನ ಉಡುಗೊರೆಯನ್ನು ಆನಂದಿಸಿತು.     

ಜೂನ್ 20 ರಂದು ಸಂಯುಕ್ತ ರಾಷ್ಟ್ರಗಳಲ್ಲಿ ಉದ್ದೇಶಿಸಿ ಮಾತನಾಡುತ್ತಾ ಗುರುದೇವರು, "ಆಂತರ್ಯದ ಈ ಪ್ರಾಚೀನ ಕಲೆಯು ಅರಳಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುವ ಸಮಯ ಬಂದಾಗಿದೆ. ಯೋಗವು ಜಗತ್ತಿಗೆ ದೊರೆತ ವರವಾಗಿದೆ. ಯೋಗದಿಂದ ಖಾಯಿಲೆಗಳು ಗುಣಮುಖವಾಗುತ್ತವೆ, ಸಮಸ್ಯೆಗಳು ನಿವಾರಣೆಯಾಗುತ್ತವೆ, ಸಹನಾಶಕ್ತಿ ಹೆಚ್ಚುತ್ತದೆ, ಮನಸ್ಸು ಸಂತೋಷವಾಗಿರುತ್ತದೆ, ಬುದ್ಧಿಯು ತೀಕ್ಷ್ಣವಾಗುತ್ತದೆ. ಯೋಗವನ್ನು ಪ್ರಾಣಾಯಾಮ, ಧ್ಯಾನದೊಡನೆ ಮಾಡಬೇಕು. ಇವುಗಳಿಲ್ಲದೆ ಕೇವಲ ಯೋಗಾಸನಗಳನ್ನು ಮಾಡಿದರೆ ಅದು ಕೇವಲ ವ್ಯಾಯಾಮವಾಗುತ್ತದೆ" ಎಂದರು.     

Tap to resize

Latest Videos

undefined

ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಲು ಯೋಗ ಅತ್ಯಗತ್ಯ, ಯೋಗ ಮಾಡಿ, ಆರೋಗ್ಯ ಚನ್ನಾಗಿಟ್ಕೊಳ್ಳಿ

ಕೇವಲ ಸಾರ್ವಜನಿಕ ಉದ್ಯಾನವನಗಳು, ಕಾರ್ಪೊರೇಟ್ ಕಚೇರಿಗಳು, ಸಭಾಂಗಣಗಳು ಮಾತ್ರವಲ್ಲದೆ, ಕಾರಾಗೃಹಗಳಲ್ಲಿ ಸಾವಿರಾರು ಕೈದಿಗಳೂ ಯೋಗವನ್ನು ಮಾಡಿದರು. ನ್ಯಾಯಾಲಯಗಳಲ್ಲಿ ನ್ಯಾಯಾಧೀಶರೂ ಶಕ್ತಿಯುತವಾದ ಯೋಗವನ್ನು ಮಾಡಿದರು. ಅನೇಕ ಮಂತ್ರಾಲಯಗಳಲ್ಲಿ, ಅನೇಕ ಸರ್ಕಾರಿ ಕಚೇರಿಗಳಲ್ಲಿ, ಪರಿಸರ ಹಾಗೂ ಅರಣ್ಯ ಇಲಾಖೆ, ಭಾರತೀಯ ಕರ ವಿಭಾಗ, ಸೇನೆ, ನೌಕೆ, ವಿಮಾನ ಪಡೆಗಳು, ಪಾರಾಮಿಲಿಟರಿ ಪಡೆಗಳು, ಜವಳಿ ಮಂತ್ರಾಲಯ, ಪೊಲೀಸ್, ಹೋಮ್ ಗಾರ್ಡ್, ಭಾರತೀಯ ಕೋಸ್ಟ್ ಗಾರ್ಡ್, ಆರ್ಥಿಕ ಹಾಗೂ ಸ್ಟಾಟಿಸ್ಟಿಕ್ಸ್ ವಿಭಾಗ, ಇವರೆಲ್ಲರೂ ಭಾಗವಹಿಸಿದರು.

ದೇಶಾದ್ಯಂತ ನಡೆದ ಆರ್ಟ್ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಮುಖ್ಯಾಂಶಗಳು: 

• ಅರಣಾಚಲಪ್ರದೇಶದ ತಾರಾದೇವಿಯ ಡೋಲ್ಮಲಖಂಗ್, ಲುಮ್ಲ ಬೌದ್ಧ ದೇವಾಲಯ, ಸೂರತ್ ಮತ್ತು ದುರ್ಗಾಪುರ ವಿಮಾನ ನಿಲ್ದಾಣಗಳಲ್ಲಿ ನೂರಾರು ಜನರು ಧ್ಯಾನ ಮತ್ತು ಆಸನಗಳನ್ನು ಮಾಡಿದರು. 
• ಪಾಟಲಿಪುತ್ರ ಸಭಾಂಗಣಕ್ಕೆ ಸಾವಿರಾರು ಜನರು ಯೋಗ ಕಾರ್ಯಕ್ರಮಕ್ಕೆ ಸೇರಿದರು. 
• ಪಾಟ್ನಾದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಅಧಿಕಾರಿಗಳು, ರಾಜ್ಯಪಾಲರಾದ ಸನ್ಮಾನ್ಯ ವಿಶ್ವನಾಥ ಅರ್ಲೇಕರ್, ಇವರೂ ಸೇರಿದರು. 
• ರಾಜಸ್ತಾನದ 12 ಪೊಲೀಸ್ ತರಬೇತಿ ಕೇಂದ್ರಗಳಲ್ಲಿ, 18 ಆರ್ ಎ ಸಿ ಬಟಾಲಿಯನ್, ಕಾರಾಗೃಹದ ಮುಖ್ಯ ಕಚೇರಿ, ರಾಜಸ್ಥಾನದ 103 ಕಾರಾಗೃಹಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ನಡೆಸಲಾಯಿತು.      
• ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ 1200 ಪೊಲೀಸರು ಯೋಗ ಮಾಡಿದರು. 
• 3000 ಜನರು ಮುಂಬಯಿಯ ಸಿಡ್ಕೊದಲ್ಲಿ ಸೇರಿದ್ದರು. 
• ಹರ್ಯಾಣ ಮತ್ತು ಗುಜರಾತಿನ ಕಾರಾಗೃಹಗಳಲ್ಲಿ ಸಾವಿರಾರು ಖೈದಿಗಳು ಯೋಗ ಮಾಡಿದರು. 
• ಪಶ್ಚಿಮ ಬಂಗಾಳದ ಬಾಂಗಾಂನ್ ಮತ್ತು ಗೈಘಾಟ್ನ ಗ್ರಾಮೀಣ ಜಿಲ್ಲೆಗಳಲ್ಲಿ 80 ಶಾಲೆಗಳು ಭಾಗವಹಿಸಿದವು. 
• ಪ್ರಖ್ಯಾತ ಭಾರತೀಯ ವಸ್ತುಪ್ರದರ್ಶನಾಲಯ, ಫೋರ್ಟ್ ವಿಲ್ಲಿಯಮ್, ಸಿಎಸ್ ಐಆರ್, ಸಿಎಂಇಆರ್ ಐಯ ಹಿನ್ನೆಲೆಯಲ್ಲಿ ಸಾವಿರಾರು ಯೋಗೋತ್ಸಾಹಿಗಳು ಮುಗುಳ್ನಗುತ್ತಾ ಕಾಲ್ಕೊತ್ತದಲ್ಲಿ ಯೋಗವನ್ನು ಮಾಡಿದರು. 
• 16 ಪಿವಿಆರ್ ನ ಸಿನಿಮಾ ಥಿಯೇಟರ್ ಗಳಲ್ಲಿ ಒಂದು ಗಂಟೆ ಅವಧಿಯ ಯೋಗವನ್ನು ಆರ್ಟ್ ಆಫ್ ಲಿವಿಂಗ್ ನಡೆಸಿತು. 
• ಮಲೇಷ್ಯಾ, ತೈವಾನ್, ಆಸ್ಟ್ರೇಲಿಯಾ, ಸ್ವೀಡೆನ್, ಐಸ್ ಲ್ಯಾಂಡ್, ನ್ಯೂಝೀಲ್ಯಾಂಡ್ ನಲ್ಲಿ ಆರ್ಟ್ ಆಫ್ ಲಿವಿಂಗ್ ನೊಡನೆ ಯೋಗವನ್ನು ಮಾಡಿದರು. 
• ಕೋಪೆನ್ಹಾಗೆನ್ ನ ಭಾರತೀಯ ದೂತಾವಾಸ, ಟಾಲಿನ್, ಮತ್ತಿನ್ನಿತರ ಯೂರೋಪಿನ  ದೇಶಗಳಲ್ಲೂ ಯೋಗದಿನವನ್ನು  ಆಚರಿಸಲಾಯಿತು.           

click me!