ರಷ್ಯಾಗೆ 200 ಕೋಟಿ ಡಾಲರ್‌ ವಸ್ತು ರಫ್ತು: ಭಾರತ ಚಿಂತನೆ

Published : Apr 13, 2022, 11:09 AM IST
ರಷ್ಯಾಗೆ 200 ಕೋಟಿ ಡಾಲರ್‌ ವಸ್ತು ರಫ್ತು: ಭಾರತ ಚಿಂತನೆ

ಸಾರಾಂಶ

* ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅನೇಕ ಪಾಶ್ಚಿಮಾತ್ಯ ದೇಶಗಳ ವ್ಯಾಪಾರ ನಿರ್ಬಂಧ  * ರಷ್ಯಾಗೆ 200 ಕೋಟಿ ಡಾಲರ್‌ ವಸ್ತು ರಫ್ತು: ಭಾರತ ಚಿಂತನೆ * ಪಾಶ್ಚಿಮಾತ್ಯ ನಿರ್ಬಂಧದ ಕಾರಣ ಭಾರತದ ನೆರವಿನ ಹಸ್ತ

ನವದೆಹಲಿ(ಏ.13): ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅನೇಕ ಪಾಶ್ಚಿಮಾತ್ಯ ದೇಶಗಳು ವ್ಯಾಪಾರ ನಿರ್ಬಂಧ ಹೇರಿರುವ ಮಧ್ಯೆಯೇ, ರಷ್ಯಾಗೆ 200 ಕೋಟಿ ಡಾಲರ್‌ (15,218 ಕೋಟಿ ರು.) ಮೌಲ್ಯದ ಸರಕುಗಳನ್ನು ರಫ್ತು ಮಾಡಲು ಭಾರತ ಚಿಂತನೆ ನಡೆಸಿದೆ. ರಷ್ಯಾ ಮೇಲೆ ಅನೇಕ ದೇಶಗಳು ನಿರ್ಬಂಧ ಹೇರಿರುವ ಕಾರಣ ಆ ದೇಶಕ್ಕೆ ಸಮಸ್ಯೆಯಾಗಿದೆ. ಹೀಗಾಗಿ ಭಾರತ ಈ ಕ್ರಮಕ್ಕೆ ಮುಂದಾಗಿದೆ.

ದ್ವಿಪಕ್ಷೀಯ ವ್ಯಾಪಾರವನ್ನು ಮುಂದುವರಿಸಲು ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ವ್ಯವಸ್ಥೆಗೆ ಭಾರತ ಮತ್ತು ರಷ್ಯಾ ಅವಕಾಶ ನೀಡಲು ಯೋಜನೆ ಸಿದ್ಧಪಡಿಸಿರುವುದರಿಂದ ಈ ಚಿಂತನೆ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸಂಬಂಧ ಭಾರತದ ವಿವಿಧ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆಪ್ರವೇಶವನ್ನು ಸಡಿಲಗೊಳಿಸುವಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಷ್ಯಾ ಜೊತೆ ಖಾಸಗಿಯಾಗಿ ಮಾತುಕತೆ ನಡೆಸಿದೆ. ರಷ್ಯಾದ ಸರಕುಗಳ ದೊಡ್ಡ ಆಮದುದಾರನಾಗಿರುವ ಭಾರತದ ಜತೆಗಿನ ವ್ಯಾಪಾರದಲ್ಲಿ ಸಮತೋಲನ ಸಾಧಿಸಲು ರುಪಾಯಿ ಹಾಗೂ ರೂಬೆಲ್ ಕರೆನ್ಸಿಗಳಲ್ಲಿ ವ್ಯಾಪಾರ ಚಟುವಟಿಕೆ ನಡೆಸಲು ಎರಡೂ ದೇಶಗಳು ಜತೆಗೂಡಿ ಕೆಲಸ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿವೆ.

ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿದ ಬಳಿಕ ವಿವಿಧ ದೇಶಗಳಿಂದ ರಷ್ಯಾಗೆ ಪೂರೈಕೆಯಾಗುತ್ತಿದ್ದ ಸರಕುಗಳಿಗೆ ತಡೆ ಬಿದ್ದಿದೆ. ಈ ಸರಕುಗಳನ್ನು ರಫ್ತು ಮಾಡಲು ಭಾರತ ಆಸಕ್ತಿ ತೋರಿಸಿದೆ. ಔಷಧ ಉತ್ಪನ್ನಗಳು, ಪ್ಲಾಸ್ಟಿಕ್‌ಗಳು, ಸಾವಯವ ಮತ್ತು ರಾಸಾಯನಿಕಗಳು, ಗೃಹ ಉತ್ಪನ್ನಗಳು, ಅಕ್ಕಿ, ಟೀ ಮತ್ತು ಕಾಫಿಯಂತಹ ಪಾನೀಯಗಳು, ಹಾಲು ಉತ್ಪನ್ನಗಳು ಮತ್ತು ಗೋ ಉತ್ಪನ್ನಗಳು ಈ ಪಟ್ಟಿಯಲ್ಲಿವೆ.

ಅಂತಾರಾಷ್ಟ್ರೀಯ ಒತ್ತಡದ ನಡುವೆಯೂ ರಷ್ಯಾದಿಂದ ಭಾರೀ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತವನ್ನು ಅನೇಕ ದೇಶಗಳು ಟೀಕಿಸಿವೆ. ಸೋಮವಾರ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ‘ರಷ್ಯಾದಿಂದ ಹೆಚ್ಚಿನ ತೈಲ ಖರೀದಿ ಭಾರತದ ಹಿತಾಸಕ್ತಿಗೆ ಒಳ್ಳೆಯದಲ್ಲ. ಭಾರತ ಹೆಚ್ಚಿನ ತೈಲ ಅಗತ್ಯವನ್ನು ಪೂರೈಸಲು ಅಮೆರಿಕ ಸಿದ್ಧ ಎಂದಿದ್ದಾರೆ.

ಸದ್ಯ ಭಾರತ ಅಮೆರಿಕಕ್ಕೆ 68 ಬಿಲಿಯನ್‌ ಡಾಲರ್‌ಗೂ ಹೆಚ್ಚಿನ ಮೊತ್ತದ ವಸ್ತುಗಳನ್ನು ರಫ್ತು ಮಾಡುತ್ತದೆ. ರಷ್ಯಾಗೆ 300 ಡಾಲರ್‌ ಮೌಲ್ಯದ ಸರಕುಗಳನ್ನು ಆಮದು ಮಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!