ಶಾಲೆ ಆರಂಭ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ಕೊರೋನಾ ಸೋಂಕು!

By Kannadaprabha NewsFirst Published Jun 4, 2020, 7:11 AM IST
Highlights

ಶಾಲೆ ಆರಂಭ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ಕೊರೋನಾ ಸೋಂಕು!| ಫ್ರಾನ್ಸ್‌, ಬ್ರಿಟನ್‌, ಇಟಲಿಯಲ್ಲಿ ಸೋಂಕು| ಫ್ರಾನ್ಸ್‌ ಶಾಲೆಯಲ್ಲಿ 70 ಕೇಸ್‌ ಪತ್ತೆ| ಇಸ್ರೇಲ್‌ನಲ್ಲಿ 200 ಮಕ್ಕಳು, ಶಿಕ್ಷಕರಿಗೆ ಸೋಂಕು

ಲಂಡನ್(ಜೂ.04)‌: ಹಂತ ಹಂತವಾಗಿ ಲಾಕ್‌ಡೌನ್‌ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳು ಸಿದ್ಧತೆ ಆರಂಭಿಸಿವೆ. ಆದರೆ, ಶಾಲೆಗಳು ಆರಂಭವಾದ ಬಳಿಕ ಬ್ರಿಟನ್‌, ಫ್ರಾನ್ಸ್‌, ಇಸ್ರೇಲ್‌ ಹಾಗೂ ಇನ್ನಿತರ ದೇಶಗಳಲ್ಲಿ ಮಕ್ಕಳು ಹಾಗೂ ಶಿಕ್ಷಕರಿಗೆ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

ಬ್ರಿಟನ್‌ನ ಡರ್ಬಿಯಲ್ಲಿನ ಪ್ರಾಥಮಿಕ ಶಾಲೆಯೊಂದರಲ್ಲಿ ಏಳು ಮಂದಿ ಸಿಬ್ಬಂದಿಗೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನ ಶಾಲೆಗಳಲ್ಲಿ ಇನ್ನಷ್ಟುಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲಾಗುತ್ತಿದೆ.

ಇದೇ ವೇಳೆ ಫ್ರಾನ್ಸ್‌ನಲ್ಲಿ ಕಳೆದ ವಾರದಿಂದ ಶಾಲೆಗಳು ಆರಂಭವಾಗಿದ್ದು, ವಿವಿಧ ಶಾಲೆಗಳಲ್ಲಿ 70 ಕೊರೋನಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ಹಲವು ಮಕ್ಕಳಿಗೂ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಇಸ್ರೇಲ್‌ನಲ್ಲಿಯೂ ಶಾಲೆಗಳು ಆರಂಭವಾದ ಬಳಿಕ ಕೊರೋನಾ ವೈರಸ್‌ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಲ್ಲಿ 220 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರೋನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

click me!