ಇಸ್ರೇಲ್‌ ಯುದ್ಧ ತೀವ್ರಗೊಂಡರೆ ತೈಲ ಬೆಲೆ ಇನ್ನಷ್ಟು ಏರಿಕೆ?

By Kannadaprabha NewsFirst Published Oct 9, 2023, 9:42 AM IST
Highlights

ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರ ನಡುವಿನ ಯುದ್ಧವು ಪಶ್ಚಿಮ ಏಷ್ಯಾಕ್ಕೆ (ಕೊಲ್ಲಿ ದೇಶಗಳಿಗೆ) ಹರಡಿದರೆ ಭಾರತಕ್ಕೆ ತೈಲ ಪೂರೈಕೆಯ ಸಮಸ್ಯೆ ಎದುರಾಗಬಹುದು. ಅದು ರುಪಾಯಿ ಕುಸಿತ ಹಾಗೂ ಹಣದುಬ್ಬರ ಏರಿಕೆಗೂ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ.

ಚೆನ್ನೈ: ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರ ನಡುವಿನ ಯುದ್ಧವು ಪಶ್ಚಿಮ ಏಷ್ಯಾಕ್ಕೆ (ಕೊಲ್ಲಿ ದೇಶಗಳಿಗೆ) ಹರಡಿದರೆ ಭಾರತಕ್ಕೆ ತೈಲ ಪೂರೈಕೆಯ ಸಮಸ್ಯೆ ಎದುರಾಗಬಹುದು. ಅದು ರುಪಾಯಿ ಕುಸಿತ ಹಾಗೂ ಹಣದುಬ್ಬರ ಏರಿಕೆಗೂ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ.

ಈಗಲೇ ಏನನ್ನೂ ಹೇಳಲು ಆಗುವುದಿಲ್ಲ. ಆದರೆ ಯುದ್ಧವು ಭಾರತಕ್ಕೆ ತೈಲ ಪೂರೈಸುವ ಸೌದಿ ಅರೇಬಿಯಾ (Saudi Arebia) ಮುಂತಾದ ‘ಒಪೆಕ್‌’ (ತೈಲ ಉತ್ಪಾದಿಸುವ ದೇಶಗಳು) ದೇಶಗಳಿಗೆ ಹರಡಿದರೆ ಭಾರತಕ್ಕೆ ಖಂಡಿತ ಸಮಸ್ಯೆಯಾಗುತ್ತದೆ. ಈಗಾಗಲೇ ಏರಿಕೆಯಾಗುತ್ತಿರುವ ತೈಲ ದರ ಇನ್ನಷ್ಟು ಏರಬಹುದು. ಅದರಿಂದ ರುಪಾಯಿ ಮೌಲ್ಯ ಕುಸಿಯಬಹುದು. ಪರಿಣಾಮ, ಹಣದುಬ್ಬರ (Inflation) ಇನ್ನಷ್ಟು ಹೆಚ್ಚಾಗಬಹುದು’ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಸಿಲುಕಿದ್ದ ಏರ್‌ ಇಂಡಿಯಾ ಸಿಬ್ಬಂದಿ ರಕ್ಷಣೆ: ಅ.14ರವರೆಗೆ ವಿಮಾನ ಸಂಚಾರ ರದ್ದು

ಯುದ್ಧವು ಇಸ್ರೇಲ್‌ ಹಾಗೂ ಹಮಾಸ್‌ಗೆ ಸೀಮಿತವಾಗುತ್ತಿದ್ದರೆ ಭಾರತಕ್ಕೆ ಹೆಚ್ಚಿನ ಪರಿಣಾಮ ಆಗುವುದಿಲ್ಲ. ಏಕೆಂದರೆ ಇಸ್ರೇಲ್‌ ಜೊತೆ ಭಾರತದ ವ್ಯಾಪಾರ ಹೆಚ್ಚೇನೂ ಇಲ್ಲ. ಭಾರತ-ಇಸ್ರೇಲ್‌ ನಡುವೆ ವರ್ಷಕ್ಕೆ ಸುಮಾರು 10 ಬಿಲಿಯನ್‌ ಡಾಲರ್‌ (ಸುಮಾರು 83 ಸಾವಿರ ಕೋಟಿ ರು.) ನಷ್ಟು ವ್ಯಾಪಾರ ನಡೆಯುತ್ತದೆ. ಅದರಲ್ಲಿ ಭಾರತದಿಂದ ಇಸ್ರೇಲ್‌ಗೆ ಆಗುವ ರಫ್ತು 8.5 ಬಿಲಿಯನ್‌ ಡಾಲರ್‌ (ಸುಮಾರು 70 ಸಾವಿರ ಕೋಟಿ ರು.) ಮತ್ತು ಇಸ್ರೇಲ್‌ನಿಂದ ಭಾರತಕ್ಕಾಗುವ ಆಮದು 2.3 ಬಿಲಿಯನ್‌ ಡಾಲರ್‌ (19 ಸಾವಿರ ಕೋಟಿ ರು.) ನಷ್ಟಿದೆ. ಯುದ್ಧಕ್ಕೆ ಸುತ್ತಮುತ್ತಲಿನ ಇಸ್ಲಾಮಿಕ್‌ ದೇಶಗಳ ಪ್ರವೇಶವಾದರೆ ಆಗ ಭಾರತಕ್ಕೆ ಸಮಸ್ಯೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಹಮಾಸ್ ಉಗ್ರರಿಂದ ಯುವತಿಯ ಕಿಡ್ನಾಪ್ : ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

 

click me!