ಚೀನಾದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಭಾರೀ ಆತಂಕ: ವಿಮಾನ ರದ್ದು, ಶಾಲೆ ಬಂದ್‌!

By Suvarna News  |  First Published Oct 22, 2021, 7:50 AM IST

* ಇಬ್ಬರು ಪ್ರವಾಸಿಗರಿಗೆ ವೈರಸ್‌: 5 ಪ್ರಾಂತ್ಯಗಳಲ್ಲಿ ಆತಂಕ

* ಚೀನಾದಲ್ಲಿ ಕೋವಿಡ್‌ ಸ್ಫೋಟ: ವಿಮಾನ ರದ್ದು, ಶಾಲೆ ಬಂದ್‌!

* ಪ್ರವಾಸಿ ತಾಣಗಳು, ಮನರಂಜನಾ ಕೇಂದ್ರಗಳೂ ಬಂದ್‌

* ಇಬ್ಬರು ಪ್ರವಾಸಿಗರಿಂದ ಚೀನಾದಲ್ಲಿ ಕೋವಿಡ್‌ ಆತಂಕ


ಬೀಜಿಂಗ್‌(ಅ.22): ಇಡೀ ವಿಶ್ವಕ್ಕೆ ಮಹಾಮಾರಿ ಕೊರೋನಾ(Covid 19) ಹಂಚಿದ ನೆರೆಯ ಚೀನಾದಲ್ಲಿ ಮತ್ತೆ ಭಯಾನಕ ವೈರಸ್‌ ಹರಡುವಿಕೆಯ ಸುಳಿವು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನೂರಾರು ವಿಮಾನಗಳನ್ನು(Flights) ರದ್ದುಗೊಳಿಸಿರುವ ಚೀನಾ ಸರ್ಕಾರ(China Govt), ಶಾಲೆ-ಕಾಲೇಜುಗಳನ್ನು(Schools and Colleges) ಬಂದ್‌ ಮಾಡಿದೆ. ದೇಶದಲ್ಲಿ ವ್ಯಾಪಕವಾಗಬಹುದಾದ ಸೋಂಕಿನ ನಿಯಂತ್ರಣಕ್ಕೆ ಗುರುವಾರದಿಂದಲೇ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು(Mass Covid Test) ತೀವ್ರಗೊಳಿಸಲಾಗಿದೆ.

ಕೋವಿಡ್‌ ಬಗ್ಗೆ ಚೀನಾದಲ್ಲಿ ಈಗ ‘ಶೂನ್ಯ ಸಹಿಷ್ಣುತೆ’ ಇದೆ. ಹೀಗಾಗಿ ಗಡಿಗಳಲ್ಲಿ ನಿರ್ಬಂಧಗಳಿವೆ. ಕೇಸು ವರದಿಯಾದರೆ ತಕ್ಷಣವೇ ಲಾಕ್‌ಡೌನ್‌(Lockdown) ಘೋಷಿಸಲಾಗುತ್ತದೆ. ವಿದೇಶ ಪ್ರಯಾಣಿಕರಿಗೆ ಹಲವು ದೇಶಗಳು ನಿರ್ಬಂಧ ಸಡಿಲಿಸಿದ್ದರೂ ಚೀನಾ ಸಡಿಲಿಸಿಲ್ಲ.

Tap to resize

Latest Videos

undefined

ಇಂಥದ್ದರಲ್ಲಿ, ಇತ್ತೀಚೆಗೆ ಪ್ರವಾಸಿಗರಾಗಿ(Tourists) ಬಂದಿದ್ದ ಇಬ್ಬರು ಹಿರಿಯ ನಾಗರಿಕರಲ್ಲಿ ಕೊರೋನಾ ವೈರಸ್‌(Covid 19) ಕಂಡುಬಂದಿದ್ದು, ಇವರು ಕ್ಸಿಯಾನ್‌, ಗನ್ಶು ಪ್ರಾಂತ್ಯ ಮತ್ತು ಒಳ ಮಂಗೋಲಿಯಾ ಪ್ರಾಂತ್ಯದಲ್ಲಿ ಸುತ್ತಾಡಿ ಬಂದಿದ್ದಾರೆ. ಇವರ ಜತೆ ನಿಕಟವರ್ತಿಗಳಾಗಿದ್ದವರಿಂದ ಚೀನಾದ ರಾಜಧಾನಿ ಬೀಜಿಂಗ್‌(Beijing) ಸೇರಿದಂತೆ 5 ಪ್ರಾಂತ್ಯಗಳಿಗೆ ಕೋವಿಡ್‌ ಹಬ್ಬಿದೆ ಎಂಬ ಮಾಹಿತಿ ಸಿಕ್ಕಿದೆ. ಕಳೆದ 5 ದಿನಗಳಿಂದ ಚೀನಾದ ಉತ್ತರ ಮತ್ತು ವಾಯುವ್ಯ ಭಾಗಗಳಲ್ಲಿ ಕೊರೋನಾ ವೈರಸ್‌ ಹಬ್ಬುವಿಕೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಈ ಪ್ರಕಾರ ವೈರಸ್‌ ಹಬ್ಬುತ್ತಿರುವ ಭಾಗಗಳಲ್ಲಿ ಶಾಲಾ-ಕಾಲೇಜುಗಳು, ಪ್ರವಾಸಿ ತಾಣಗಳು(Tourist Places), ಚಿತ್ರಮಂದಿರಗಳು(Theatres) ಸೇರಿದಂತೆ ಮನರಂಜನೆ ಸ್ಥಳಗಳನ್ನು ಮುಚ್ಚಲಾಗಿದೆ. ಅಲ್ಲದೆ ಕೆಲ ಮನೆಗಳ ಕಾಂಪೌಂಡ್‌ಗಳ ಮೇಲೂ ನಿರ್ದಿಷ್ಟ ಲಾಕ್‌ಡೌನ್‌(Lockdown) ಹೇರಲಾಗಿದೆ. ಈ ಪ್ರಕಾರ ವಾಯುವ್ಯ ಚೀನಾದಲ್ಲಿರುವ ಲಾಂಝುವಾ ನಗರ ಸೇರಿದಂತೆ ಇನ್ನಿತರ ನಗರಗಳಲ್ಲಿ ಜನ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗುವಂತಿಲ್ಲ. ಒಂದು ವೇಳೆ ಹೋಗಬೇಕೆಂದಿದ್ದರೆ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಕೋವಿಡ್‌ ತಪಾಸಣೆ ವ್ಯಾಪಕಗೊಳಿಸಲಾಗಿದೆ.

ಸೋಂಕು ವ್ಯಾಪಕವಾಗಿರುವ ಭಾಗಗಳಿಂದ ಚೀನಾದ ಇತರೆ ನಗರಗಳಿಗೆ ತೆರಳಬೇಕಿದ್ದ ನೂರಾರು ವಿಮಾನಗಳನ್ನು ಚೀನಾ ಸರ್ಕಾರ ರದ್ದುಗೊಳಿಸಿದೆ. ಕ್ಸಿಯಾನ್‌ ಮತ್ತು ಲಂಝುವಾ ವಿಮಾನ(Flight) ನಿಲ್ದಾಣಗಳಿಂದಲೇ ಶೇ.60ರಷ್ಟು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಎಂದು ವಿಮಾನಯಾನ ದತ್ತಾಂಶ ಒದಗಿಸುವ ‘ವೇರಿಫ್ಲೈಟ್‌’ ಸಂಸ್ಥೆ ಹೇಳಿದೆ.

click me!