
ಫ್ಲೋರಿಡಾ (ಜು.01) ಪತಿ, ಪತ್ನಿ ಹಾಗೂ 5 ವರ್ಷದ ಹೆಣ್ಣು ಮಗು ಹಡಗಿನ ಮೂಲಕ ಪ್ರಯಾಣ ಮಾಡುತ್ತಿದ್ದ ವೇಲೆ ಅವಘಡವೊಂದು ಸಂಭವಿಸಿದೆ. ಹಡಗಿನ 4ನೇ ಮಹಡಿಯಲ್ಲಿದ್ದ ಈ ಕುಟುಂಬ ಎಲ್ಲರಂತೆ ಸಂಭ್ರಮದಿಂದ ಪ್ರಯಾಣದಲ್ಲಿ ಮುಳುಗಿತ್ತು. ಆದರೆ ಅಚಾನಕ್ಕಾಗಿ 5 ವರ್ಷದ ಮಗಳು ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾಳೆ. ಹಡಗಿನ ನಾಲ್ಕನೇ ಮಹಡಿಯಿಂದ ಮಗಳು ಆಳ ಸಮುದ್ರಕ್ಕೆ ಬಿದ್ದಿದ್ದಾಳೆ. ಕೆಲ ಅಂತರದಲ್ಲಿದ್ದ ತಂದೆ ಮಗಳನ್ನು ರಕ್ಷಿಸಲು ಅದೇ ನಾಲ್ಕನೇ ಮಹಡಿಯಿಂದ ನೇರವಾಗಿ ಸಮುದ್ರಕ್ಕೆ ಜಿಗಿದಿದ್ದಾರೆ. ಮುಳುಗುತ್ತಿದ್ದ ಮಗಳನ್ನು ರಕ್ಷಿಸಿ ಮತ್ತೊಂದು ಬೋಟ್ ಬರುವವರೆಗೆ ಸಮದ್ರದಲ್ಲೇ ಈಜಾಡಿದ ಘಟನೆ ದಕ್ಷಿಣ ಫ್ಲೋರಿಡಾದಲ್ಲಿ ನಡೆದಿದೆ. ಈ ರೋಚಕ ರಕ್ಷಣಾ ಕಾರ್ಯಾಚರಣ ವಿಡಿಯೋ ಸೆರೆಯಾಗಿದೆ.
ಕಾಲು ಜಾರಿ ಬಿದ್ದ ಮಗಳು
ಡಿಸ್ನಿ ಡ್ರೀಮ್ ಕ್ರೂಸ್ ಶಿಪ್ ಸೌತ್ ಫ್ಲೋರಿಡಾಗೆ ಪ್ರಯಾಣ ಬೆಳೆಸಿತ್ತು. ಸಮುದ್ರದ ಭಾರಿ ಏರಿಳಿತದ ನಡುವೆ ಹಡಗು ಸಾಗಿತ್ತು. ಬಿರುಸಾದ ಗಾಳಿ ಹಾಗೂ ನೀರಿನ ಒತ್ತಡದ ನಡುವೆ ಹಡಗು ಸಾಗಿತ್ತು.ಈ ಕುಟುಂಬ ಸಮುದ್ರ ಪ್ರಯಾಣವನ್ನು ಆನಂದಿಸುತ್ತಾ ಸಾಗಿತ್ತು. ಹಲವು ಪ್ರಯಾಣಿಕರು ಈ ಹಡಗಿನಲ್ಲಿದ್ದಾರೆ. ಎಲ್ಲರೂ ಅಕ್ಕ ಪಕ್ಕ ಇರುವಾಗಲೇ 5 ವರ್ಷದ ಮಗಳು ಆಯ ತಪ್ಪಿ ಹಡಗಿನ 4ನೇ ಡೆಕ್‌ನಿಂದ ಸಮುದ್ರಕ್ಕೆ ಬಿದ್ದಿದ್ದಾಳೆ.
ರಕ್ಷಣೆಗೆ ಕೂಗಿಕೊಂಡ ಕುಟುಂಬ
ಹಡಗು ವೇಗವಾಗಿ ಸಾಗುತ್ತಿತ್ತು. ಇದೇ ವೇಳೆ ಪೋಷಕರು ಪಕ್ಕದಲ್ಲಿರುವಾಗಲೇ ಮಗಳು ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾಳೆ. ತಕ್ಷಣವೇ ಕುಟುಂಬ ಮಗಳನ್ನು ರಕ್ಷಿಸಲು ಕೂಗಿಕೊಂಡಿದೆ. ಇತ್ತ ತಂದೆ ಮಗಳನ್ನು ಹೇಗಾದರೂ ಮಾಡಿ ರಕ್ಷಿಸಲು ಮುಂದಾಗಿದ್ದಾನೆ. ಒಂದು ಕ್ಷಣವೂ ತಡ ಮಾಡದೇ ತಂದೆ ನೇರವಾಗಿ 4ನೇ ಡೆಕ್‌ನಿಂದ ಸಮುದ್ರಕ್ಕೆ ಜಿಗಿದಿದ್ದಾರೆ. ಇತ್ತ ವೇಗವಾಗಿ ಸಾಗುತ್ತಿದ್ದ ಹಡಗು ಕೆಲ ದೂರ ಮುಂದೆ ಸಾಗಿದೆ. ಮುಳುಗುತ್ತಿದ್ದ ಮಗಳ ಬಳಿ ಈಜುತ್ತಾ ಸಾಗಿದ ತಂದೆ ಆಕೆಯನ್ನು ರಕ್ಷಿಸಿದ್ದಾರೆ. ಅಷ್ಟರಲ್ಲೇ ಮಗಳು ಅಸ್ವಸ್ಥಗೊಂಡಿದ್ದಾಳೆ.
ಸಮುದ್ರದಲ್ಲಿ ಈಜುತ್ತಾ ಮಗಳ ರಕ್ಷಿಸಿದ ತಂದೆ
ಇತ್ತ ಹಡಗಿನಲ್ಲಿ ಅಲರಾಂ ಬಡಿದುಕೊಂಡಿದೆ. ಕ್ಯಾಪ್ಟನ್ ಹಡಗು ನಿಧಾನ ಮಾಡಿದ್ದಾರೆ. ಹಡಗಿನಲ್ಲಿದ್ದ ರಕ್ಷಣಾ ತಂಡ ತಕ್ಷವೇ ಸಣ್ಣ ಬೋಟ್ ಮೂಲಕ ಸಮುದ್ರಕ್ಕೆ ಇಳಿದು ಅಪ್ಪ-ಮಗಳು ಇರುವ ಕಡೆ ವೇಗವಾಗಿ ಸಾಗಿತ್ತು. ಇತ್ತ ತಂದೆ ಮಗಳನ್ನು ಆದಷ್ಟು ಬೇಗ ದಡ ಸೇರಿಸಲು ಹಡಗಿನತ್ತ ಈಜಲು ಆರಂಭಿಸಿದ್ದಾನೆ. ಆದರೆ ಬಿದ್ದ ರಭಸ ಹಾಗೂ ನೀರು ಕುಡಿದಿದ್ದ ಕಾರಣ ಮಗಳು ಅಸ್ವಸ್ಥಗೊಂಡಿದ್ದಳು. ಇದು ತಂದೆಯ ಆತಂಕಕ್ಕೆ ಕಾರಣವಾಗಿತ್ತು. ಆದರೆ ರಕ್ಷಣಾ ತಂಡ ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ರಕ್ಷಿಸಿ ಕರೆತಂದಿದೆ.
ಹಡಗಿನಲ್ಲಿ ಚಿಕಿತ್ಸೆ ನೀಡಿದ ತಂಡ
ರಕ್ಷಣಾ ತಂಡದ ಬೋಟ್ ಇಬ್ಬರನ್ನು ರಕ್ಷಿಸಿ ಹಡಗಿನತ್ತ ಧಾವಿಸಿದೆ. ಬಳಿಕ ಇಬ್ಬರನ್ನು ಹಡಿಗಿಗೆ ಶಿಫ್ಟ್ ಮಾಡಲಾಗಿತ್ತು. ಇದೇ ವೇಳೆ ವೈದ್ಯರ ತಂಡ ಹಡಗಿನಲ್ಲಿ 5 ವರ್ಷದ ಹೆಣ್ಣುಮಗಳಿಗೆ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಮಗಳು ಚೇತರಿಸಿಕೊಂಡಿದ್ದಾಳೆ. ಇತ್ತ ಮಗಳನ್ನು ರಕ್ಷಿಸಿ ಹಡಗಿಗೆ ಕರೆತರುವರೆಗೆ ಕಣ್ಣೀರಿಟ್ಟ ತಾಯಿ, ಒಂದು ಕ್ಷಣ ನಿಟ್ಟುಸಿರು ಬಿಟ್ಟಿದ್ದಾಳೆ. ತಂದೆ ಒಂದು ಕ್ಷಣ ತಡ ಮಾಡದೇ ಸಮುದ್ರಕ್ಕೆ ಜಿಗಿದು ಮಗಳನ್ನು ರಕ್ಷಿಸಿದ್ದಾರೆ. ಮಗಳನ್ನು ರಕ್ಷಿಸಲು ತಂದೆ ಎಲ್ಲಾ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.
ಹಡಿನ ರಕ್ಷಣಾ ತಂಡ ಕೂಡ ತಕ್ಷಣ ಕಾರ್ಯಪ್ರವೃತ್ತರಾದ ಕಾರಣ ಬೋಟ್ ಮೂಲಕ ಅಪ್ಪ-ಮಗಳ ಬಳಿ ತಲುಪಲು ಸಾಧ್ಯವಾಗಿದೆ. ಹೀಗಾಗಿ ಇಬ್ಬರನ್ನು ಸಮುದ್ರದಿಂದ ರಕ್ಷಿಸಿ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ