2020ರ ನವೆಂಬರ್ ಮೊದಲ ಮಂಗಳವಾರ ರೂಢಿಯಂತೆ ಅಧ್ಯಕ್ಷೀಯ ಚುನಾವಣೆ ನಡೆಯಿತು. 435 ಜನತಾ ಪ್ರತಿನಿಧಿಗಳ ಕಾಂಗ್ರೆಸ್‌ನಲ್ಲಿ ಡೆಮಾಕ್ರೆಟಿಕ್ ಪಾರ್ಟಿ 232 ಮತ್ತು ರಿಪಬ್ಲಿಕನ್ ಪಾರ್ಟಿ 201 ಸೀಟ್ ಗೆದ್ದವು. ಇದೀಗ ಚುನಾವಣೆ ಮುಗಿದರೂ ಇಲ್ಲಿ ಇನ್ನೂ ಹೋರಾಟ ಮಾತ್ರ ಮುಗಿದಂತೆ ಕಾಣುತ್ತಿಲ್ಲ
ವರದಿ : ರವಿ ಕೃಷ್ಣಪ್ಪ, ಅಮೆರಿಕ
ನ್ಯೂಯಾರ್ಕ್ (ನ.15) : ಅಮೆರಿಕದ ರಾಜಕೀಯದ ಬಗ್ಗೆ ಅನೇಕ ರೀತಿಯಲ್ಲಿ ಬರೆಯಬಹುದು. ಇಲ್ಲಿ ಹುಟ್ಟಿಬೆಳೆದ ಜನರಲ್ಲೇ ಪರಸ್ಪರ ನಂಬಿಕೆ ಕಡಿಮೆಯಾಗಿ ಅಸಹನೀಯತೆ ಹೆಚ್ಚುತ್ತಿದೆ. ಮತ ಹಾಕುವವರು ಮತದ್ವೇಷಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಮೂರು ಅಧಿಕಾರದ ಅಂಗಗಳಿವೆ. ದೇಶದ ಮುಖ್ಯ ಆಡಳಿತಾಧಿಕಾರಿಯಾಗಿ ಪ್ರೆಸಿಡೆಂಟ್, ಜನರ ಪ್ರತಿನಿಧಿಗಳಾಗಿ ಕಾನೂನು ಮಾಡುವವರು ಮತ್ತು ಸುಪ್ರೀಂಕೋರ್ಟ್. ಕಾನೂನು ಮಾಡುವವರು ಎರಡು ವಿಧ. ಎರಡು ವರ್ಷಕೊಮ್ಮೆ ಆಯ್ಕೆಯಾಗುವ 435 ಕಾಂಗ್ರೆಸ್ ಪ್ರತಿನಿಧಿಗಳು ಮತ್ತು 6 ವರ್ಷ ಅಧಿಕಾರದಲ್ಲಿ ಇರುವ 100 ಸೆನೆಟ್ ಸದಸ್ಯರು. ಮೂರೂ ಅಂಗಗಳು ಇದ್ದರೆ ಸತ್ಯ ಮತ್ತು ನ್ಯಾಯ ಇರುತ್ತದೆ ಎಂದು ಈ ದೇಶದ ನಂಬಿಕೆ.
2020ರ ನವೆಂಬರ್ ಮೊದಲ ಮಂಗಳವಾರ ರೂಢಿಯಂತೆ ಅಧ್ಯಕ್ಷೀಯ ಚುನಾವಣೆ ನಡೆಯಿತು. 435 ಜನತಾ ಪ್ರತಿನಿಧಿಗಳ ಕಾಂಗ್ರೆಸ್‌ನಲ್ಲಿ ಡೆಮಾಕ್ರೆಟಿಕ್ ಪಾರ್ಟಿ 232 ಮತ್ತು ರಿಪಬ್ಲಿಕನ್ ಪಾರ್ಟಿ 201 ಸೀಟ್ ಗೆದ್ದವು. ಕಾನೂನುಗಳನ್ನು ಮಾಡುವಾಗ ಮತ್ತು ಹಣಕಾಸು ವಿಂಗಡಣೆ ಸಲಹೆ ಕೊಡುವಾಗ ಆಗುವ ಪ್ರತಿ ಘಟ್ಟದಲ್ಲೂ ಸಾಮಾನ್ಯ ಬಹುಮತ ಇದ್ದವರು ಗೆಲ್ಲುತ್ತಾರೆ. ಹಾಗಾಗಿ ಡೆಮಾಕ್ರೆಟಿಕ್ ಪಾರ್ಟಿ ಮತ್ತೆರಡು ವರ್ಷ ಅಧಿಕಾರದಲ್ಲಿ ಇರುತ್ತದೆ.
ಸೋಲೊಪ್ಪಿಕೊಳ್ಳಲು ಮನಸ್ಸು ಮಾಡುತ್ತಿರುವ ಟ್ರಂಪ್, ಬೈಡೆನ್‌ಗೆ ಚೀನಾ ಶುಭಾಶಯ
ಸೆನೆಟ್ ಸಹ ಕಾಂಗ್ರೆಸ್ ರೀತಿ ಆದರೂ ಅದರ ಜವಾಬ್ದಾರಿ ಹೆಚ್ಚು. ಅಮೆರಿಕ 50 ಗಣರಾಜ್ಯಗಳ ಒಕ್ಕೂಟ. ಪ್ರತಿ ಗಣರಾಜ್ಯಕ್ಕೂ ಎರಡು ಸೆನೆಟ್ ಸೀಟುಗಳು. ಪ್ರತಿ ಎರಡು ವರ್ಷಕ್ಕೆ 33-33-34 ಸೆನೆಟ್ ಸೀಟುಗಳು ಚುನಾವಣೆಗೆ ಬರುತ್ತವೆ. ಈ ಸಲ ರಿಪಬ್ಲಿಕನ್ ಪಾರ್ಟಿ 51 ಸೀಟ್ ಗೆಲ್ಲಬಹುದು (ರೀಕೌಂಟ್ ನಡೆಯುತ್ತಿದೆ). ಸೆನೆಟ್ ಜವಾಬ್ದಾರಿಯಲ್ಲಿ ಅತಿಮುಖ್ಯವಾದದ್ದು ಅಧಿಕಾರಿಗಳ ಆಯ್ಕೆ. ರಾಷ್ಟ್ರದ ಆಡಳಿತ ಅಂಗ, ನ್ಯಾಯಾಧೀಶರು, ಮಿಲಿಟರಿ ಮತ್ತು ಗೌಪ್ಯ ಸಂಸ್ಥೆಗಳ ಅಧಿಕಾರಿಗಳನ್ನು, ರಾಯಭಾರಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಸೆನೆಟ್‌ದು. ರಾಷ್ಟ್ರದ ಅಧ್ಯಕ್ಷ ತಪ್ಪು ಮಾಡಿದ್ದರೆ ಸೆನೆಟ್ ನ್ಯಾಯಾಲಯದಂತೆ ಕೆಲಸ ಮಾಡುತ್ತದೆ. 100 ಸದಸ್ಯರೂ ನ್ಯಾಯಾಧೀಶರು; ಅಧ್ಯಕ್ಷ ಸ್ಥಾನ ಬಹಳ ಪ್ರಭಾವಶಾಲಿ. ಪ್ರಜಾ ಪ್ರತಿನಿಧಿಗಳು ಮಾಡುವ ಕಾನೂನುಗಳನ್ನು ಒಪ್ಪುವ ಮತ್ತು ತಿರಸ್ಕರಿಸುವ ಅಂತಿಮ ಅಧಿಕಾರ ಅಧ್ಯಕ್ಷನಿಗೆ ಇರುತ್ತದೆ. ಚುನಾವಣೆಯಲ್ಲಿ ಗೆದ್ದರೆ 4 ವರ್ಷಗಳ ಅಧಿಕಾರ. ಒಬ್ಬ ವ್ಯಕ್ತಿ ಎರಡು ಸಲ ಅಧ್ಯಕ್ಷ ಆಗಬಹುದು. ಇದಕ್ಕೆ ನಿಯಮಿತ ಅವಧಿ ಅಧಿಕಾರ ಅನ್ನುತ್ತಾರೆ.
ಇಲ್ಲೂ ಇದೆ ರಾಜಕೀಯದ ಕೆಸರು
ಅಮೆರಿಕದಲ್ಲೂ ರಾಜಕೀಯವನ್ನೇ ನಂಬಿಕೊಂಡು ಜೀವನ ಮಾಡುವ ಅನೇಕ ಕುಟುಂಬಗಳು ಇವೆ. ರಾಜಧಾನಿಯ ಕೊಚ್ಚೆ ಕೆಸರು ಪ್ರಭಾವ ಕೂಟದಲ್ಲಿ ಈ ಕುಟುಂಬಗಳು ಹಾಸುಹೊಕ್ಕಾಗಿ ಬೇರೂರಿರುತ್ತವೆ. ಪ್ರತಿ ವರ್ಷ ಸರ್ಕಾರ ಖರ್ಚು ಮಾಡುವ 5 ಟ್ರಿಲಿಯನ್ (ಒಂದು ಟ್ರಿಲಿಯನ್ ಅಂದರೆ ಒಂದು ಲಕ್ಷ ಕೋಟಿ ಡಾಲರ್, 70 ಲಕ್ಷ ಕೋಟಿ ರುಪಾಯಿ) ಹಣದಲ್ಲಿ ಸೋರುವ ರಂಧ್ರಗಳ ಸ್ವಾಮ್ಯತೆ ಈ ಕೊಚ್ಚೆ ಕೆಸರು ಪುಡಾರಿಗಳದ್ದು. ಈ ಪುಡಾರಿಗಳಿಗೂ ಜನರಿಂದ ಚುನಾಯಿತರಾದವರಿಗೂ ಪರಸ್ಪರ ಹೊಂದಾಣಿಕೆ ಇರುತ್ತದೆ.
ಅಮೆರಿಕ ಅಧ್ಯಕ್ಷಗೆ ಭದ್ರತೆ ಕೊಡುವ ಸೀಕ್ರೆಟ್ ಸರ್ವಿಸ್‌ನಲ್ಲಿ ಕೊರೋನಾ, 130 ಸಿಬ್ಬಂದಿಗೆ ಸೋಂಕು! ..
ಈ ಅಧಿಕಾರ ಮತ್ತು ಹಣದಾಹದ ಪ್ರಭಾವಿ ವಲಯವನ್ನು ಬಲಿಹಾಕುತ್ತೇನೆ ಎಂದು ಹೇಳಿದ ಡೊನಾಲ್ಡ… ಟ್ರಂಪ್, 2016ರಲ್ಲಿ ರಾಜಕೀಯ ಕುಟುಂಬದ ಹಿಲ್ಲರಿ ಕ್ಲಿಂಟನ್ ಅನ್ನು ಸೋಲಿಸಿದರು. ಸುಮಾರು ಎಂಟು ವರ್ಷ ಅಧಿಕಾರದಲ್ಲಿ ಇದ್ದ ಬರಾಕ್ ಒಬಾಮ ಏನೂ ಮಾಡಲಿಲ್ಲ ಎಂದು ಜನರಿಗೆ ಅನ್ನಿಸಿತ್ತು. ಹಿಲ್ಲರಿ ಕ್ಲಿಂಟನ್ ಗೆದ್ದೇ ಗೆಲ್ಲುತ್ತಾಳೆ ಎಂದುಕೊಂಡಿದ್ದ ಡೆಮಾಕ್ರಟಿಕ್ ಅಧಿಕಾರ ವಲಯಕ್ಕೆ ಹೊಸಬ ಟ್ರಂಪ್ ಗೆದ್ದಿದ್ದು ಹೊಟ್ಟೆಉರಿದುಹೋಯಿತು.
ಭಾರತದ ಮಾದರಿಯಲ್ಲಿ ಟ್ರಂಪ್
ಟ್ರಂಪ್ ಬಹುಶಃ ಭಾರತದ ರಾಜಕೀಯವನ್ನು ಆಳವಾಗಿ ಅಭ್ಯಾಸ ಮಾಡಿರಬಹುದು. ಎನ್‌ಟಿ ರಾಮರಾವ್, ಎಂಜಿ ರಾಮಚಂದ್ರನ್, ರಾಮಕೃಷ್ಣ ಹೆಗ್ಗಡೆ ಮತ್ತು ನರೇಂದ್ರ ಮೋದಿ ಮಾಡಿದ ಸ್ವಾಭಿಮಾನದ ಘೋಷಣೆಯನ್ನು ಅನುಸರಿಸಿ ಟ್ರಂಪ್ ಸಹ ದೇಶಾಭಿಮಾನದ ಘೋಷಣೆಗಳನ್ನು ಮಾಡಿದರು. ಟ್ರಂಪ್ ಘೋಷಣೆ ಎಂಎಜಿಎ (ಮೇಕ್ ಅಮೆರಿಕ ಗ್ರೇಟ್ ಅಗೇನ್) ಎಲ್ಲರಲ್ಲೂ ಉತ್ಸಾಹ ತಂದಿತ್ತು. ಕಾರ್ಖಾನೆಗಳು ವಾಪಸ್ ಬರಬೇಕು, ಚೀನಾ ದೇಶ ಸಂಪೂರ್ಣ ನಾಶ ಮಾಡಿದ್ದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಚೀನಾ ಕದ್ದು ಉಪಯೋಗಿಸುತ್ತಿದ್ದ ತಂತ್ರಜ್ಞಾನಕ್ಕೆ ಚೀನಾ ಹಣ ಕೊಡಬೇಕು, ಅನುಮತಿ ಇಲ್ಲದೆ ಅಮೆರಿಕಗೆ ಬಂದು ಕೆಲಸ ಮಾಡುತ್ತಿರುವವರು ವಾಪಸ್ ಹೋಗಬೇಕು, ವ್ಯಾಪಾರ-ವ್ಯವಹಾರಕ್ಕೆ ತೊಂದರೆ ಕೊಡುವ ಕಾನೂನುಗಳನ್ನು ರದ್ದು ಮಾಡಬೇಕು, ಎಚ್-1ಬಿ ಎನ್ನುವ ವೀಸಾ ದುರುಪಯೋಗಿಸಿ ಅಮೆರಿಕನ್ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಎಂದೆಲ್ಲ ಟ್ರಂಪ್ ಹೇಳಿದ್ದು ಎಲ್ಲರಿಗೂ ಇಷ್ಟವಾಯಿತು.
ಬಹಿರಂಗವಾಗಿ ಟ್ರಂಪ್ ಜತೆ ಅಂತರ ಕಾಯ್ದ ಪತ್ನಿ: ವಿಚ್ಛೇದನ ಸುದ್ದಿಗೆ ಪುಷ್ಟಿ! .
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಹೋಯಿತು. ಅಮೆರಿಕ ಇತಿಹಾಸದಲ್ಲೇ ಕಾಣದಷ್ಟುನಿರುದ್ಯೋಗಿಗಳ ಸಂಖ್ಯೆ 3%ಗಿಂತ ಕಡಿಮೆಯಾಯಿತು. 1,50,000 ಹೊಸ ಉದ್ಯಮಗಳು ಹುಟ್ಟುಕೊಂಡವು. ಟ್ರಂಪ್ (ಪಾಲಿಸಿ) ಸದಾ ಇರಲಿ ಎನ್ನುವ ಜನಾಭಿಪ್ರಾಯ ಶುರುವಾಯಿತು.
ಟ್ರಂಪ್‌ಗೆ ಮುಳುವಾಗಿದ್ದು ಕೊರೋನಾ
ಡೆಮಾಕ್ರಟಿಕ್ ಪಾರ್ಟಿ ಹತಾಶರಾಗಿ ಬಳಲಿದ್ದಾಗ ಅದೃಷ್ಟಲಕ್ಷ್ಮೇ ಕೊರೋನಾ ವೈರಸ್ ಮೂಲಕ ಬಂತು. ಚೀನೀ ಆಮದು ಕುಂಠಿತಗೊಳಿಸಿದ್ದ ಟ್ರಂಪ್ ದೇಶಕ್ಕೆ ಚೀನಾದಿಂದ ವೈರಸ್ ಬಂದು ಹರಡಿತು. ಅಪೂರ್ವವಾದ ಗುಣಗಳುಳ್ಳ ವೈರಸ್ ಇದು. ಇದನ್ನು ಹತೋಟಿಗೆ ತರಲು ದೇಶವನ್ನೇ ಮುಚ್ಚಬೇಕು ಎಂದು ಹೇಳಿದರು. 70 ಮಿಲಿಯನ್ ನಿರುದ್ಯೋಗಿಗಳಾದರು. ಮಾಚ್‌ರ್ 2019ಕ್ಕೆ ದೇಶದಲ್ಲಿ ವೈರಸ್ ಭಯ ಹರಡಲು ಡೆಮಾಕ್ರೆಟಿಕ್ ಪಾರ್ಟಿ ನಿರ್ಧರಿಸಿತು. ಪ್ರತಿ ಸಾವನ್ನೂ ಎತ್ತಿ ಹಿಡಿದು ಪ್ರತಿ ಸಾವಿಗೂ ಟ್ರಂಪ್ ಕಾರಣ ಎಂದು ಪ್ರಚಾರ ಮಾಡಲು ಶುರುಮಾಡಿದರು.
ಟ್ರಂಪ್ ವೈರಸ್‌ನಿಂದ ಭಯ ಪಡುವ ಬದಲು ಧೈರ್ಯದಿಂದ ಎದುರಿಸೋಣ ಎಂದಿದ್ದನ್ನು ಅವನ ವಿರುದ್ಧ ಪ್ರಯೋಗಿಸಿದರು. ಎಂಎಜಿಎ ಘೋಷಣೆ ಕಪ್ಪು ಜನರನ್ನು ತಿರಸ್ಕರಿಸುವ ವರ್ಣಭೇದ ನೀತಿ ಎಂದು ಹೇಳಿ ಬಿಎಲ್‌ಎಂ (ಬ್ಲಾಕ್ ಲೈವ್‌್ಸ ಮ್ಯಾಟರ್) ಎಂಬ ಆಂದೋಲನ ಮಾಡಿ ಕಪ್ಪು ಜನರ ಮನ ಗೆದ್ದರು. ಕಪ್ಪು ಜನರ ಮತ ಗಳಿಸಲು ಕಮಲಾ ಹ್ಯಾರೀಸ್ ಎಂಬಾಕೆಯನ್ನು ಚುನಾವಣೆಗೆ ನಿಲ್ಲಿಸಿದರು. ಕಮಲಾ ಹಿಂದೆ ಬೀಳಲು ಮುಂದೆ ಇದ್ದ ಜೋ ಬೈಡೆನ್ ಎನ್ನುವ ಮಾಜಿ ಉಪಾಧ್ಯಕ್ಷನಿಗೆ ಕಮಲ ಹ್ಯಾರೀಸ್ ಅನ್ನು ಚುನಾವಣಾ ಸಂಗಾತಿಯಾಗಿ ಮಾಡಿಸಿದರು.
ನವೆಂಬರ್ ಚುನಾವಣೆಯಲ್ಲಿ ಪೋಸ್ಟಲ… ಮತ ಚಲಾಯಿಸಲು ಡೆಮಾಕ್ರೆಟಿಕ್ ಪಾರ್ಟಿ ಹಠ ಹಿಡಿಯಿತು. ಟ್ರಂಪ್‌ಗೆ ಇದರಲ್ಲೇನೋ ಕುತಂತ್ರವಿದೆ ಎನಿಸಿತು. ಕೊರೋನಾ ಕಾರಣ ಪೋಸ್ಟಲ… ಮತ ಚಲಾವಣೆ ಎಂದು ಹೇಳಿದರು. ಟ್ರಂಪ್ ತನ್ನ ಬೆಂಬಲಿಗರಿಗೆ ಮತಗಟ್ಟೆಗೆ ಹೋಗಿ ಮತ ಹಾಕಲು ಹೇಳಿದರು. ಚುನಾವಣೆ ಫಲಿತಾಂಶ ಬಂದು ಜೋ ಬೈಡೆನ್ ಗೆದ್ದಿರುವರು ಎಂದು ನವಂಬರ್ 7, 2020ರಂದು ಹೇಳಿದರು. ಟ್ರಂಪ್ ಇದನ್ನು ಒಪ್ಪಿಕೊಂಡಿಲ್ಲ. ಅಂಚೆ ಮತದಾನದಲ್ಲಿ ಮೋಸ ಮಾಡಿದ್ದಾರೆ ಎಂದು ಟ್ರಂಪ್ ಹೇಳುತ್ತಿದ್ದಾರೆ.
ಟ್ರಂಪ್ ಗೆದ್ದರೆ ಎಂದೂ ಕಾಣದ ಹಿಂಸಾಚಾರ ಆಗುತ್ತದೆ ಎಂದು ಎಲ್ಲರೂ ಹೆದರಿದ್ದರು. ಅಂಗಡಿಗಳ ಕಿಟಕಿ ಬಾಗಿಲುಗಳಿಗೆ ಪ್ಲೈವುಡ್ ಮೊಳೆ ಹೊಡೆದು ಲೂಟಿ ಮತ್ತು ಬೆಂಕಿಯಿಂದ ರಕ್ಷಿಸಿಕೊಳ್ಳಲು ಪೂರ್ಣಸಿದ್ಧತೆ ನಡೆಸಿದ್ದರು. ಡೆಮಾಕ್ರೆಟಿಕ್ ಪಾರ್ಟಿ ಬೆಂಬಲಿಗರು ರಸ್ತೆರಸ್ತೆಯಲ್ಲೂ ಹೋರಾಟ ಮಾಡುತ್ತೇವೆ ಎಂದು ಹೆದರಿಸುತ್ತಿದ್ದರು. ಜೋ ಬೈಡೆನ್ ಗೆದ್ದಿರುವುದರಿಂದ ಬೆಂಬಲಿಗರು ಸುಮ್ಮನಿದ್ದಾರೆ ಎಂದು ಹೇಳುತ್ತಾರೆ.
ಅಮೆರಿಕ ಈಗ ಎರಡು ಗುಂಪು
ಚುನಾವಣೆ ಬರುತ್ತದೆ, ಹೋಗುತ್ತದೆ ಆದರೆ ರಾಜಕೀಯವೇ ಜೀವನ ಮಾಡಿಕೊಂಡಿರುವ ಜನರಿಗೆ ಮತದಾರರನ್ನು ಹೇಗಾದರೂ ಒಲಿಸಿಕೊಂಡು ಅಧಿಕಾರದಲ್ಲಿ ಇರಲು ಸತತ ಹವಣಿಕೆ ಅಗತ್ಯ. ಅಮೆರಿಕ ಈಗ ಎರಡು ಗುಂಪಾಗಿದೆ. ಎಡ ಪಂಥೀಯ ಸೋಷಿಯಲಿಸ್ಟ್ ಡೆಮಾಕ್ರೆಟಿಕ್ ಬೆಂಬಲಿಗರು ಮತ್ತು ಬಲ ಪಂಥೀಯ ಫ್ರೀ ಮಾರ್ಕೆಟ್ ರಿಪಬ್ಲಿಕನ್ ಬೆಂಬಲಿಗರು. ಒಂದು ಗುಂಪನ್ನು ಕಂಡರೆ ಇನ್ನೊಂದು ಗುಂಪಿಗೆ ಸಹಿಸಲಾಗದ ಕೋಪ.
ಬೈಡೆನ್ ಅಧಿಕಾರಕ್ಕೆ ಬಂದರೂ ಆಂದೋಲನ ಮುಗಿಯುವುದಿಲ್ಲ. ಆತನಿಗೆ ಡೆಮಾಕ್ರೆಟಿಕ್ ಪಾರ್ಟಿಯಲ್ಲೇ ಶತ್ರುಗಳು ಇದ್ದಾರೆ. ಜೋ ಬೈಡೆನ್ ಉಪ ಅಧ್ಯಕ್ಷೆ ಆತನ ರಾಜಕೀಯ ಪ್ರತಿಸ್ಪರ್ಧಿ ಸಹ. ಶ್ವೇತಭವನದಲ್ಲೇ ಒಳಒಳಗೇ ಜಗಳ ಆಗುತ್ತದೆ ಎನ್ನುತ್ತಾರೆ. ನಮ್ಮ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ಮಧ್ಯೆ ಅಧಿಕಾರ ಹಂಚಿಕೆಯಲ್ಲಿ ಆದ ಜಗಳಕ್ಕಿಂತ ಜಾಸ್ತಿ ತಾಪಮಾನ ಇರುತ್ತದೆ. ಸಾವಿರಾರು ಪದವಿಗಳಿಗೆ ಅವರವರ ಬೆಂಬಲಿಗರನ್ನು ನೇಮಕ ಮಾಡಲು ಜೋ ತಂಡಕ್ಕೂ, ಕಮಲಾ ತಂಡಕ್ಕೂ ಹಣಾಹಣಿ ನಡೆಯುತ್ತದೆ.
ಹೀಗಾಗಿ 2016 ಮತ್ತು 2020ರ ಚುನಾವಣೆಗಳು ಅಮೆರಿಕದ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಅಸಹನೀಯತೆ ಕಡಿಮೆ ಮಾಡಿ ಎಲ್ಲರನ್ನು ಒಂದಾಗಿಸುವ ಜನನಾಯಕರು ಬರಬೇಕು. ರಾಜಕೀಯ ಕುಟುಂಬಗಳ ಪ್ರಭಾವ ಮತ್ತು ಕೊಚ್ಚೆ ಕೆಸರು ಪುಡಾರಿಗಳ ಪ್ರಭಾವ ಕಡಿಮೆಯಾಗಬೇಕು. ದೇಶದ ಹಿತಕ್ಕೆ ಹೋರಾಡುವ ನಿಸ್ವಾರ್ಥ ರಾಜಕೀಯ ಯುವ