
ತೆಹ್ರಾನ್ (ಜೂ.22) ಇರಾನ್ ನ್ಯೂಕ್ಲಿಯರ್ ಘಟಕಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸುವ ಮೂಲಕ ಯುದ್ಧಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ಇರಾನ್ ಶಾಂತಿ ಬಯಸಿದ್ದರೆ ಮತ್ತಷ್ಟು ದಾಳಿಗಳು ನಡೆಯಲಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಇರಾನ್ ಮೇಲೆ ಅಮರಿಕ ನಡೆಸಿದ ದಾಳಿ ಇದೀಗ ವಿಶ್ವ ಮಹಾಯುದ್ಧಕ್ಕೆ ಮುನ್ನಡಿ ಬರೆಯಲಿದೆ ಎಂದು ಹೇಳಲಾಗುತ್ತಿದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ದಾಳಿಯಿಂದ ಕೆರಳಿರುವ ಇರಾನ್ ಪ್ರತಿ ದಾಳಿಗೆ ಸಜ್ಜಾಗುತ್ತಿದೆ. ಇದೀಗ ಇರಾನ್‌ಗೆ ರಹಸ್ಯವಾಗಿ ಕೆಲ ರಾಷ್ಟ್ರಗಳು ಬೆಂಬಲ ನೀಡುವ ಸಾಧ್ಯತೆ ಇದೆ. ಇದರಿಂದ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದರ ನಡುವೆ ಇರಾನ್‌ನಲ್ಲಿ ಘೋಷವಾಕ್ಯಗಳು ಮೊಳಗುತ್ತಿದೆ. ಅಮೆರಿಕ ದಾಳಿ ಮಾಡಿ ತಪ್ಪು ಮಾಡಿದೆ. ಇದೀಗ ಅಮೆರಿಕದ ಪ್ರತಿಯೊಬ್ಬ ಪ್ರಜೆ ನಮ್ಮ ಟಾರ್ಗೆಟ್ ಅನ್ನೋ ಎಚ್ಚರಿಕೆಗಳು ಬರುತ್ತಿದೆ.
ಅಮೆರಿಕ ಪ್ರಜೆ, ಅಮೆರಿಕ ಮಿಲಿಟರಿ ಟಾರ್ಗೆಟ್
ಅಮೆರಿಕ ದಾಳಿಯನ್ನು ಇರಾನ್ ಟಿವಿ ಮಾಧ್ಯಮಗಳು ಖಂಡಿಸಿದೆ. ಇದು ಅಮೆರಿಕ ಮಾಡಿದ ಅತೀ ದೊಡ್ಡ ತಪ್ಪು ಎಂದಿದೆ. ಇದೇ ವೇಳೆ ಟಿವಿ ಮಾಧ್ಯಮಗಳು ಈ ದಾಳಿಗೆ ಪ್ರತಿಯಾಗಿ ಇರಾನ್ ಅಮೆರಿಕದ ಪ್ರತಿಯೊಬ್ಬ ಪ್ರಜೆಯನ್ನು ಟಾರ್ಗೆಟ್ ಮಾಡಲಿದೆ ಎಂದಿದೆ. ಇರಾನ್ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ಅಮರಿಕದ ಪ್ರಜೆ, ಅಮೆರಿಕ ಮಿಲಿಟರಿಯ ಪ್ರತಿಯೊಬ್ಬ ಯೋಧನು ಇರಾನಿಗಳ ಟಾರ್ಗೆಟ್. ಈ ಯುದ್ಧ ಮತ್ತೊಂದು ಹಂತಕ್ಕೆ ಸಾಗಲಿದೆ ಎಂದು ಇರಾನ್ ಮಾಧ್ಯಮಗಳು ಎಚ್ಚರಿಕೆ ನೀಡಿದೆ.
ಯುದ್ಧ ಆರಂಭಗೊಂಡಿದೆ ಮಿಸ್ಟರ್ ಟ್ರಂಪ್
ಇರಾನ್ ಟಿವಿ ಮಾಧ್ಯಮಗಳು ಇದೀಗ ಅಮೆರಿಕದ ಮೇಲೆ ಯುದ್ಧ ಸಾರಿದೆ. ಮಿಸ್ಟರ್ ಟ್ರಂಪ್ ಯುದ್ಧ ಆರಂಭಗೊಂಡಿದೆ. ಈ ಯುದ್ಧದ ನಡುವೆ ಅನಗತ್ಯವಾಗಿ ತೂರಿ ಬಂದಿದ್ದೀರಿ. ಈಗ ನೀವು ಶಾಂತಿಯ ಮಾತನಾಡುತ್ತಿದ್ದೀರಿ. ನೀವು ಮಾಡಿದ ತಪ್ಪಿಗೆ ಬೆಲೆ ತೆರಬೇಕು ಎಂದು ಇರಾನ್ ಮಾಧ್ಯಮಗಳು ಮಾತಿನ ಯುದ್ಧ ಆರಂಭಿಸಿದೆ.
ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಆಗ್ರಹಿಸಿದ ಭಾರತ
ಇಸ್ರೇಲ್ ಹಾಗೂ ಇರಾನ್ ಯುದ್ಧ ಆರಂಭಗೊಂಡ ಬೆನ್ನಲ್ಲೇ ಭಾರತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಆಗ್ರಹಿಸಿತ್ತು. ಇರಾನ್ ಹಾಗೂ ಇಸ್ರೇಲ್ ಜೊತೆ ಭಾರತ ಆತ್ಮೀಯ ಸಂಬಂಧ ಹೊಂದಿದೆ. ಎರಡುರಾಷ್ಟ್ರಗಳ ಜೊತೆ ಭಾರತ ಹಲವು ದ್ವಿಪಕ್ಷೀಯ ಒಪ್ಪಂದ, ವ್ಯಾಪಾರ ವಹಿವಾಟು ನಡೆಸುತ್ತಿದೆ.
ಅಮೆರಿಕ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ನಂತರ ಶೀಘ್ರದಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ ಎಂದು ಇಸ್ರೇಲ್ ರಾಜ್ಯ ಮಾಧ್ಯಮವು ಭಾನುವಾರ ವರದಿ ಮಾಡಿದೆ. ಇದಲ್ಲದೆ, ಇರಾನ್‌ನ ಪರಮಾಣು ಸ್ಥಾವರಗಳ ಮೇಲಿನ ದಾಳಿಯ ನಂತರ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿದೆ. ಇಸ್ರೇಲ್‌ನ TPS ಸುದ್ದಿ ಸಂಸ್ಥೆಯ ಪ್ರಕಾರ, ವೈಟ್‌ಹೌಸ್ ಅಧಿಕಾರಿಯೊಬ್ಬರು ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ಮುಕ್ತಾಯಗೊಂಡ ನಂತರ ಟ್ರಂಪ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.ಏತನ್ಮಧ್ಯೆ, ಇರಾನ್ ವಿರುದ್ಧದ ದಾಳಿಯನ್ನು ಸುಮಾರು ಒಂದು ವರ್ಷದ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಎರಡೂ ಅಭ್ಯಾಸ ಮಾಡಿದ್ದವು ಎಂದು ABC ವರದಿ ಹೇಳಿದೆ. ಇರಾನ್‌ನ ಪರಮಾಣು ಕಾರ್ಯಕ್ರಮದ ವಿರುದ್ಧ ಆಕ್ರಮಣಕಾರಿ ದಾಳಿಯನ್ನು ಯುದ್ಧ-ಆಟವನ್ನಾಗಿ ಮಾಡಿದ ಮೊದಲ ವ್ಯಾಯಾಮ ಇದಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ