ಬಿಸಿಗಾಳಿಗೆ ನದಿಗಳೇ ಬಿಸಿ, ಫ್ರಾನ್ಸ್‌ನಲ್ಲಿ 1300ಕ್ಕೂಅಧಿಕ ಸಾವು; ತತ್ತರಿಸಿದ ಯುರೋಪ್

Published : Jun 29, 2026, 05:33 AM IST
Heatwave

ಸಾರಾಂಶ

ಯುರೋಪ್ ದೇಶಗಳು ಕಳೆದ ಎರಡು ವಾರಗಳಿಂದ ತೀವ್ರ ಬಿಸಿಗಾಳಿಯಿಂದ ತತ್ತರಿಸಿದ್ದು, ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಈ ಐತಿಹಾಸಿಕ ಉಷ್ಣಾಂಶದಿಂದಾಗಿ ಫ್ರಾನ್ಸ್ ಸೇರಿದಂತೆ ಹಲವೆಡೆ 1300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಅಣು ಸ್ಥಾವರವನ್ನು ಸ್ಥಗಿತಗೊಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ಯಾರಿಸ್‌: ಐರೋಪ್ಯ ದೇಶಗಳ ಪಾಲಿಗೆ ಈ ವರ್ಷದ ಬೇಸಿಗೆಯು ಘೋರವಾಗಿದ್ದು, ಸುಮಾರು 40ರಿಂದ 44 ಡಿಗ್ರಿವರೆಗಿನ ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಜೂ.21ರ ನಂತರ ಫ್ರಾನ್ಸ್ ಒಂದರಲ್ಲೇ ಈವರೆಗೆ 1 ಸಾವಿರಕ್ಕೂ ಹೆಚ್ಚು ಮಂದಿ ಸೇರಿ, ಯುರೋಪ್‌ನಾದ್ಯಂತ 1300 ಜನ ಬಿಸಿಲಿನಿಂದಾಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಬಹುತೇಕರು 65 ವರ್ಷ ಮೇಲ್ಪಟ್ಟವರು. ಇದು ವಾಡಿಕೆಯ ಸಾವಿಗಿಂತ ಬಹು ಅಧಿಕವಾಗಿದೆ.

ಅತ್ತ ಸ್ಕ್ಯಾಂಡಿನೇವಿಯಾ ಮತ್ತು ಆಲ್ಪ್ಸ್ ಪ್ರದೇಶದಲ್ಲಿ ತಾಪಮಾನ 40 ಡಿ.ಸೆ.ಗಿಂತಲೂ ಮೇಲೇರಿದೆ. ಸ್ವಿಸ್ ಹಿಮನದಿಗಳು ವೇಗವಾಗಿ ಕರಗಲು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸಮುದ್ರ ಮಟ್ಟ ಹೆಚ್ಚಳ, ಹಠಾತ್‌ ಪ್ರವಾಹಗಳು ಸಂಭವಿಸುವ ಆತಂಕ ಮನೆಮಾಡಿದೆ. ಅತ್ತ 40 ಡಿಗ್ರಿಯಷ್ಟು ತಾಪ ಅನುಭವಿಸಿದ ಡೆನ್ಮಾರ್ಕ್‌ ಪಾಲಿಗೆ ಶನಿವಾರವು ಅತಿಹೆಚ್ಚು ಬಿಸಿ ದಿನವಾಗಿತ್ತು.

ಜಲಫಿರಂಗಿ ಬಳಕೆ:

ಸಾಮಾನ್ಯವಾಗಿ ಗುಂಪುಗೂಡಿರುವ ಜನರನ್ನು ಚದುರಿಸಲು ಬಳಸಲಾಗುವ ಜಲಫಿರಂಗಿಗಳನ್ನು (ವಾಟರ್‌ ಕೆನಾನ್) ಜರ್ಮನಿ ಪೊಲೀಸರು ಬೇಸಿಗೆಯ ವಿರುದ್ಧ ಸೆಣೆಸಲು ಬಳಕೆ ಮಾಡುವ ಸ್ಥಿತಿ ಬಂದೊದಗಿದೆ. ಬಿಸಿಲಿನಿಂತ ತತ್ತರಿಸಿರುವ ಬರ್ಲಿನ್‌ ನಗರಕ್ಕೆ ತಂಪೆರೆಯಲು ಜಲಫಿರಂಗಿಗಳ ಮೂಲಕ ನೀರನ್ನು ಚಿಮ್ಮಿಸಲಾಗುತ್ತಿದೆ.

ಅತ್ತ ಪ್ಯಾರಿಸ್‌ನಲ್ಲಿ ಫ್ಯಾನ್‌ಗಳ ಬೇಡಿಕೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಸ್ಪತ್ರೆಗಳಿಗೆ ಬರುತ್ತಿರುವ ತುರ್ತು ಕರೆಗಳ ಪ್ರಮಾಣದಲ್ಲಿ ಶೇ.80ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಟಲಿಯ 18 ನಗರಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಅಣು ಸ್ಥಾವರ ಸ್ಥಗಿತ:

ಅಣು ವಿದ್ಯುತ್‌ ಸ್ಥಾವರಗಳ ರಿಯಾಕ್ಟರ್‌ಗಳನ್ನು ತಣ್ಣಗಾಗಿಸಲು ನೀರನ್ನು ಬಳಸಲಾಗುತ್ತದೆ. ಆದರೆ ಇದೀಗ ಸ್ವಿಜರ್ಲೆಂಡ್‌ನ ಆರೆ ನದಿಯ ನೀರೇ ಬಿಸಿಯಾಗಿರುವ ಕಾರಣ, ಯುರೋಪಿನ ಅತ್ಯಂತ ಹಳೆಯ ಅಣು ವಿದ್ಯುತ್‌ ಸ್ಥಾವರದಲ್ಲಿ ಶುಕ್ರವಾರದಿಂದ ಕೆಲಸವನ್ನೇ ನಿಲ್ಲಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

68 ಸಾವಿರ ಮಂದಿ ನಾಪತ್ತೆ,ವೆನಿಜುವೆಲಾ ಭೂಕಂಪದ ಅವಶೇಷಗಳಡಿಯಿಂದ ಕೇಳಿಸುತ್ತಿದೆ ಆರ್ತನಾದ
14 ಮಂದಿ ಸಂಚರಿಸುತ್ತಿದ್ದ ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ಪತನ, ಅನುಮಾನ ಹುಟ್ಟಿಸಿದ ಅಪಘಾತ