ಆನೆ ತನ್ನ ದೇಹ ಕೆರೆದುಕೊಳ್ಳಲು ಹೋಗಿ ಕಾರನ್ನೇ ಹಾಳುಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಹಾಗೂ 47 ಸಾವಿರಕ್ಕೂ ಹೆಚ್ಚು ಲೈಕ್‌ಗಳು ದೊರೆತಿವೆ. ಈ ವೈರಲ್ ವಿಡಿಯೋವನ್ನು ನೀವೇ ನೋಡಿ..
ಸಾಮಾಜಿಕ ಜಾಲತಾಣಗಳಲ್ಲಿ (Social Media) ಪ್ರಾಣಿಗಳ ವಿಡಿಯೋ ಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತದೆ ಹಾಗೂ ಪ್ರಾಣಿ ಪ್ರಿಯರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ ಅಥವಾ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ, ಪಶ್ಚಿಮ ಬಂಗಾಳದ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಗೆ ಆನೆಗಳು ನುಗ್ಗಿ, ಈ ಪೈಕಿ ಒಂದು ಆನೆ ಗೋಧಿ ಹಿಟ್ಟನ್ನು ತೆಗೆದುಕೊಂಡ ವಿಡಿಯೋ ವೈರಲ್ ಆಗಿತ್ತು. ಈಗ ಟ್ವಿಟ್ಟರ್‌ನಲ್ಲಿ ಆನೆಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅದೇನಪ್ಪಾ ಅಂತೀರಾ..? ಕಾಡಾನೆಯೊಂದು ನಡುರಸ್ತೆಯಲ್ಲಿ ಕಾರಿನ ಮೇಲೆ ತನ್ನ ದೇಹವನ್ನು ಉಜ್ಜುತ್ತಿರುವುದನ್ನು ತೋರಿಸುವ ಭಯಾನಕ ಮತ್ತು ಉಲ್ಲಾಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕೆ ಸಾಕಷ್ಟು ಲೈಕ್‌ಗಳು ಹಾಗೂ ಕಮೆಂಟ್‌ಗಳು ಹರಿದುಬರುತ್ತಿದೆ.
Buitengebieden ಎಂಬ ಟ್ವಿಟ್ಟರ್ ಬಳಕೆದಾರ ಕಾಡಾನೆಯ (Wild Elephant) ಈ ವೈರಲ್ ವಿಡಿಯೋವನ್ನು (Viral Video) ಹಂಚಿಕೊಂಡಿದ್ದು, ಈ ವಿಡಿಯೋವನ್ನು 23 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 47 ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಗಳಿಸಿದೆ. ‘’ನಿಮಗೆ ತುರಿಕೆಯಾದರೆ ಮತ್ತು ನೀವು ಆನೆಯಾಗಿದ್ದರೆ ನೀವು ಏನು ಮಾಡುತ್ತೀರಿ?" ಎಂದು ಈ ಪೋಸ್ಟ್‌ಗೆ ಶೀರ್ಷಿಕೆಯನ್ನು ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಗೆ ನುಗ್ಗಿದ ಆನೆಗಳ ಹಿಂಡು: Viral Video ನೋಡಿ..
ಕೆಳಗಿನ ವಿಡಿಯೋವನ್ನು ವೀಕ್ಷಿಸಿ:
What do you do when you’re itchy and you’re an elephant? 😂 pic.twitter.com/fYUMYdlO5z
— Buitengebieden (@buitengebieden)ಈ ಕ್ಲಿಪ್‌ನಲ್ಲಿ, ಆನೆಯೊಂದು ಕಾಡಿನ ಮೂಲಕ ಹಾದುಹೋಗುವ ರಸ್ತೆಯಲ್ಲಿ ಹೊರಬರುತ್ತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ದೈತ್ಯ ಆನೆಯು ವಾಹನದ ಮೇಲೆ ತನ್ನನ್ನು ತಾನೇ ಉಜ್ಜಿಕೊಳ್ಳುವುದು ಕಂಡುಬರುತ್ತದೆ. ಮೊದಲಿಗೆ, ಅದು ಕಾರಿನ ಟೈರ್ ಮೇಲೆ ಒಂದು ಕಾಲಿನಿಂದ ಏರಲು ಪ್ರಯತ್ನಿಸುತ್ತದೆ. ಅದರ ನಂತರ, ಆನೆ ನಾಲ್ಕು ಚಕ್ರದ ಬಾನೆಟ್ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ.. ಆನೆಯು ಕಾರಿನ ಮೇಲೆ ಹತ್ತುತ್ತದೆ ಮತ್ತು ವಾಹನದ ಮುಂಭಾಗ ಹಾಗೂ ಸೈಡ್ ವ್ಯೂ ಮಿರರ್ ಅನ್ನು ಒಡೆದು ನಂತರ ಕೆಳಕ್ಕೆ ಇಳಿಯುತ್ತದೆ. ದೈತ್ಯ ಆನೆಯಿಂದ ಕಾರಿಗೆ ಉಂಟಾದ ವಿನಾಶವು ವಿಡಿಯೋದ ಕೊನೆಯಲ್ಲಿ ಕಂಡುಬರುತ್ತದೆ.
ಈ ಕ್ಲಿಪ್ ಅನ್ನು ಶೇರ್ ಮಾಡಿಕೊಂಡಾಗಿನಿಂದ, ಈ ವೈರಲ್ ವಿಡಿಯೋ ಕ್ಲಿಪ್ ಇಂಟರ್ನೆಟ್ ಬಳಕೆದಾರರರು (Internet Users) ವಿಭಿನ್ನವಾದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಬ್ಬರು ಬಳಕೆದಾರರು ನಾನು ಇದನ್ನು ವಿಮಾ ಕಂಪನಿಗೆ ವಿವರಿಸಲು ಊಹಿಸುತ್ತಿದ್ದೇನೆ." ಎಂದು ತಮಾಷೆಯಾಗಿ ಬರೆದಿದ್ದಾರೆ, "ಮತ್ತೊಬ್ಬರು, "ಆನೆಯು ತಮ್ಮ ಕಾರಿನ ಮೇಲೆ ತನ್ನ ಬುಡವನ್ನು ಗೀಚಿದೆ ಎಂದು ಯಾರಾದರೂ ಹೇಗೆ ನಂಬುವುದಿಲ್ಲ?’’ ಎಂದು ಬರೆದುಕೊಂಡಿದ್ದಾರೆ. ಹಾಗೆ, ಮೂರನೆಯವರು, "ಆನೆಯು ಕಾರನ್ನು ಟಾಯ್ಲೆಟ್ ಪೇಪರ್ ಆಗಿ ಬಳಸುತ್ತಿದೆ" ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಹಾಗೂ ಯಾವಾಗ ನಡೆದಿದೆ ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿ ತಿಳಿದುಬಂದಿಲ್ಲ.
ಇದನ್ನೂ ಓದಿ: Instagram Reels ಮಾಡಲು ಹೋಗಿ ರೈಲು ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕ
ಇದೇ ರೀತಿ, ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ನುಗ್ಗುವ ಅನೇಕ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಕಾಣಿಸಿಕೊಳ್ಳುತ್ತಿರುತ್ತದೆ ಹಾಗೂ ವೈರಲ್ ಆಗುತ್ತಿರುತ್ತದೆ. ಇದು ನಿವಾಸಿಗಳಲ್ಲಿ ಸಾಕಷ್ಟು ಭೀತಿ ಉಂಟು ಮಾಡುತ್ತದೆ. ಇಂತಹದ್ದೊಂದು ಘಟನೆಯಲ್ಲಿ ಪಶ್ಚಿಮ ಬಂಗಾಳದ (West Bengal) ಜಲ್ಪೈಗುರಿ (Cantnment) ಜಿಲ್ಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ (Army Cantonment Hospital) ಆನೆಗಳು ನುಗ್ಗಿ ನಡೆಯುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಪ್ರಾಣಿಗಳು ಆಸ್ಪತ್ರೆಯ ಕಟ್ಟಡದ ಸುತ್ತಲೂ ಮುಕ್ತವಾಗಿ ಚಲಿಸುವುದನ್ನು ಕಾಣಬಹುದು. ಈ ಸೇನಾ ಕಂಟೋನ್ಮೆಂಟ್ ಆಸ್ಪತ್ರೆಯ ಒಳಗಿದ್ದ ಜನರು ದೂರದಿಂದಲೇ ಆನೆಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿರುತ್ತಿದ್ದರು.