ಇರಾನ್‌-ಅಮೆರಿಕ ಯುದ್ಧದಲ್ಲಿ ಸೌದಿ ಡಬಲ್‌ ಗೇಂ?

Kannadaprabha News   | Kannada Prabha
Published : Mar 03, 2026, 05:44 AM IST
Soudi Arabia

ಸಾರಾಂಶ

ಇಸ್ರೇಲ್‌-ಅಮೆರಿಕ ಜಂಟಿಯಾಗಿ ಶಿಯಾ ದೇಶ ಇರಾನ್‌ ಮೇಲೆ ಮುಗಿಬಿದ್ದಿರುವ ಹೊತ್ತಿನಲ್ಲಿ ಸೌದಿ ಅರೇಬಿಯಾ ಡಬಲ್‌ ಗೇಂ ಆಡಿದ ಗಂಭೀರ ಆರೋಪ ಕೇಳಿಬಂದಿದೆ. ಒಂದೆಡೆ ನಮ್ಮ ಭೂಮಿ ಬಳಸಲು ಬಿಡಲ್ಲ ಎಂದು ಇರಾನ್‌ಗೆ ಭರವಸೆ ನೀಡಿದ್ದ ಸೌದಿ ಅರೇಬಿಯಾ, ಮತ್ತೊಂದೆಡೆ ಇರಾನ್‌ ಮೇಲೆ ದಾಳಿಗೆ ಅಮೆರಿಕಕ್ಕೆ ಪ್ರಚೋದನೆ

ವಾಷಿಂಗ್ಟನ್‌: ಇಸ್ರೇಲ್‌-ಅಮೆರಿಕ ಜಂಟಿಯಾಗಿ ಶಿಯಾ ದೇಶ ಇರಾನ್‌ ಮೇಲೆ ಮುಗಿಬಿದ್ದಿರುವ ಹೊತ್ತಿನಲ್ಲಿ ಸೌದಿ ಅರೇಬಿಯಾ ಡಬಲ್‌ ಗೇಂ ಆಡಿದ ಗಂಭೀರ ಆರೋಪ ಕೇಳಿಬಂದಿದೆ.

ಒಂದೆಡೆ ನಿಮ್ಮ ಮೇಲೆ ದಾಳಿಗೆ ನಮ್ಮ ಭೂಮಿ ಬಳಸಲು ಬಿಡಲ್ಲ ಎಂದು ಇರಾನ್‌ಗೆ ಭರವಸೆ ನೀಡಿದ್ದ ಸೌದಿ ಅರೇಬಿಯಾ, ಮತ್ತೊಂದೆಡೆ ಇರಾನ್‌ ಮೇಲೆ ದಾಳಿಗೆ ಅಮೆರಿಕಕ್ಕೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಇರಾನ್‌ ಹಾಗೂ ಅಮೆರಿಕ ನಡುವೆ ಕಳೆದ ತಿಂಗಳೇ ಯುದ್ಧಾತಂಕ

ಇರಾನ್‌ ಹಾಗೂ ಅಮೆರಿಕ ನಡುವೆ ಕಳೆದ ತಿಂಗಳೇ ಯುದ್ಧಾತಂಕ ಮನೆಮಾಡಿತ್ತು. ಹಾಗಿದ್ದಾಗ, ಇರಾನ್‌ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ಗೆ ಕರೆ ಮಾಡಿದ್ದ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ‘ನಿಮ್ಮ ಮೇಲಿನ ದಾಳಿಗೆ ನಮ್ಮ ನೆಲ ಅಥವಾ ವಾಯುವಲಯ ಬಳಸಲು ಬಿಡಲ್ಲ’ ಎಂಬ ಭರವಸೆ ನೀಡಿದ್ದರು. ಅದಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹಲವು ಬಾರಿ ಗೌಪ್ಯವಾಗಿ ಕರೆ ಮಾಡಿ, ‘ನೀವು ಈಗಲೇ ಇರಾನ್‌ ಮೇಲೆ ಆಕ್ರಮಣ ಮಾಡಬೇಕು. ಇಲ್ಲದಿದ್ದರೆ ಅವರು ಇನ್ನಷ್ಟು ಶಕ್ತಿಶಾಲಿಯಾಗಿ, ಅಪಾಯಕಾರಿ ದಾಳಿ ನಡೆಸಬಹುದು’ ಎಂದು ಪ್ರಚೋದಿಸಿದ್ದರು ಎಂದು ಅಮೆರಿಕದ ಪ್ರತಿಷ್ಠಿತ ಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಯಾರ್ಯಾರ ಜತೆ ಎಂಥಾ ಸಂಬಂಧ?:

ತನ್ನ ನೆಲದಲ್ಲಿ ಮುಸಲ್ಮಾನರ ಪವಿತ್ರ ಸ್ಥಳಗಳನ್ನು ಹೊಂದಿರುವ ಸುನ್ನಿ ರಾಷ್ಟ್ರ ಸೌದಿ ಅರೇಬಿಯಾ ಮತ್ತು ಇರಾನ್‌ ನಡುವೆ ಹದಗೆಟ್ಟಿದ್ದ ಸಂಬಂಧ 2023ರಲ್ಲಿ ಚೀನಾ ಮಧ್ಯಸ್ಥಿಕೆಯಲ್ಲಿ ಹಳಿಗೆ ಬಂದಿತ್ತು. ಅತ್ತ ತನಗೆ ಶಸ್ತ್ರಾಸ್ತ್ರದ ಜತೆ ರಕ್ಷಣೆಯನ್ನೂ ನೀಡುತ್ತಿರುವ ಅಮೆರಿಕದೊಂದಿಗೆ ಉತ್ತಮ ಸಂಬಂಧವಿದ್ದರೂ, ಅದರ ಮಿತ್ರನಾದ ಇಸ್ರೇಲ್‌ನ ವಿರೋಧಿಯಾಗಿತ್ತು. ಕಾರಣ, ಪ್ರತ್ಯೇಕ ಪ್ಯಾಲೆಸ್ತೀನ್‌ ರಾಷ್ಟ್ರದ ರಚನೆಯನ್ನು ಸೌದಿ ಪ್ರತಿಪಾದಿಸಿದರೆ, ಇಸ್ರೇಲ್‌ ಇದರ ವಿರುದ್ಧವಾಗಿದೆ.

ಆದರೆ ಪ್ರಸ್ತುತ ನಡೆಯುತ್ತಿರುವ ಯುದ್ಧವು ಸೌದಿಯನ್ನು ಸ್ಪಷ್ಟವಾಗಿ ಅಮೆರಿಕದ ಬಣದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖಮೇನಿ ಹತ್ಯೆ ಖಂಡಿಸಿ : ಟ್ರಂಪ್‌ ಕೊಲ್ಲುತ್ತೇವೆಂದು ಮುಸ್ಲಿಂ ಮಹಿಳೆಯರ ಆಕ್ರೋಶ
ತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ನತ್ತ