ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸದ ಮೇಲೆ ಎಫ್‌ಐಬಿ ದಾಳಿ ನಡೆಸಿದೆ. ಮಂಗಳವಾರ ನಡೆಸಿದ ದಾಳಿಯಲ್ಲಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬೆನಲ್ಲಿಯೇ ದಾಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, 2024ರ ಚುನಾವಣೆಯಲ್ಲಿ ನನಗೆ ನಿಷೇಧಿಸುವ ನಿಟ್ಟಿನಲ್ಲಿ ಈ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ನ್ಯೂಯಾರ್ಕ್ (ಆ. 12): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನೆ ಮೇಲೆ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ದಾಳಿ ನಡೆಸಿದ್ದು, ಟ್ರಂಪ್ ಅವರ ದೊಡ್ಡ ವ್ಯವಹಾರವನ್ನು ಬಹಿರಂಗಪಡಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಪರಮಾಣು ದಾಖಲೆಗಳು ಮತ್ತು ಇತರ ಪ್ರಮುಖ ವಿಷಯಗಳಿಗಾಗಿ ಹುಡುಕಾಟ ನಡೆಸಲಾಗಿದೆ. ಈ ವೇಳೆ ಅಲ್ಲಿಂದ ಸುಮಾರು 12 ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದಾಗ್ಯೂ, ಎಫ್‌ಬಿಐ ಏಜೆಂಟ್‌ಗಳು ಯಾವುದೇ ಪರಮಾಣು ದಾಖಲೆಗಳನ್ನು ಕಂಡುಕೊಂಡಿದ್ದಾರೆಯೇ ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಈ 12 ಬಾಕ್ಸ್‌ಗಳಲ್ಲಿ ಏನಿತ್ತು ಎಂಬುದನ್ನೂ ಬಹಿರಂಗಪಡಿಸಿಲ್ಲ. ಮಾಜಿ ಅಧ್ಯಕ್ಷ ಟ್ರಂಪ್ ಅವರ ಐಷಾರಾಮಿ ಪಾಮ್ ಹೌಸ್ ಮತ್ತು ಮಾರ್-ಎ-ಲಿಗೊ ರೆಸಾರ್ಟ್ ಮೇಲೆ ಎಫ್‌ಬಿಐ ದಾಳಿ ನಡೆಸಿದೆ. ಯಾವುದೇ ಸೂಚನೆ ನೀಡದೆ ಈ ದಾಳಿ ನಡೆಸಲಾಗಿದೆ ಎಂದು ಟ್ರಂಪ್ ಅವರ ಇಬ್ಬರು ಆಪ್ತರು ಹೇಳಿದ್ದಾರೆ. ಏಜೆಂಟರು ದಾಳಿ ನಡೆಸಿದಾಗ ಸ್ವತಃ ಟ್ರಂಪ್ ಅಲ್ಲಿರಲಿಲ್ಲ. ಟ್ರಂಪ್ ದಾಳಿಯ ಮೇಲೆ ಪ್ರಭಾವ ಬೀರಲು ಮತ್ತು ಅದನ್ನು ರಾಜಕೀಯ ವಿಷಯವನ್ನಾಗಿ ಮಾಡಲು ಇದನ್ನು ಮಾಡಲಾಗಿದೆ ಎಂದು ನಂಬಲಾಗಿದೆ.
ಮಾಹಿತಿ ನೀಡದ ಅಟಾರ್ನಿ ಜನರಲ್: ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಾಳಿಯ ಬಗ್ಗೆ ಸ್ವಲ್ಪ ಮಾಹಿತಿ ನೀಡಿದರು. ಆದಾಗ್ಯೂ, ದಾಳಿಯ ನಂತರ ಎಫ್‌ಬಿಐ ಮೇಲೆ ಮಾಡಲಾಗುತ್ತಿರುವ ಟೀಕೆಯನ್ನು ಅವರು ಖಂಡಿಸಿದರು. ಅದಲ್ಲದೆ, ಟ್ರಂಪ್ ಅವರ ಮನೆಯಿಂದ ಹೊರ ತಂದ ಬಾಕ್ಸ್‌ನಲ್ಲಿ ಕೆಂಪು ಗುರುತನ್ನು ಹಾಕಲು ಕಾರಣವೇನು ಅನ್ನೋದನ್ನೂ ಹೇಳಿಲ್ಲ. ಅಟಾರ್ನಿ ಜನರಲ್ ಅವರು ಸರ್ಚ್ ವಾರೆಂಟ್ ಅನ್ನು ವೈಯಕ್ತಿಕವಾಗಿ ಅನುಮೋದಿಸಿದಿದ್ದಾಗಿ ಹೇಳಿದ್ದಾರೆ. ಸರ್ಚ್ ವಾರಂಟ್ ಅನ್ನು ಸಾರ್ವಜನಿಕಗೊಳಿಸಲು ಅಮೆರಿಕ ನ್ಯಾಯ ಇಲಾಖೆಯ ನಿರ್ಧಾರದ ನಂತರ ಅವರ ಹೇಳಿಕೆ ಬಂದಿದೆ. ಗುರುವಾರ, ನ್ಯಾಯಾಂಗ ಇಲಾಖೆಯು ಮಾರ್-ಎ-ಲಿಗೋ ದಾಳಿಗಳ ಹುಡುಕಾಟ ವಾರಂಟ್‌ಗಳನ್ನು ಸಾರ್ವಜನಿಕಗೊಳಿಸುವಂತೆ ನ್ಯಾಯಾಧೀಶರನ್ನು ಕೇಳಿದೆ, ಇದರಿಂದಾಗಿ ದಾಳಿಗಳನ್ನು ಏಕೆ ನಡೆಸಲಾಗಿದೆ ಎಂದು ಜನರು ತಿಳಿದುಕೊಳ್ಳಬಹುದು. ಮಾಜಿ ಅಧ್ಯಕ್ಷರ ಮೇಲೆ ತೆಗೆದುಕೊಂಡ ಕ್ರಮದ ನಂತರ, ರಿಪಬ್ಲಿಕನ್ ಪಕ್ಷದ ಜನರು ಎಫ್‌ಬಿಐ ಅನ್ನು ಖಂಡಿಸುತ್ತಿದ್ದಾರೆ.
ಎಫ್‌ಬಿಐ ತನ್ನ ನಿವಾಸದ ಮೇಲೆ ರೇಡ್ ಮಾಡಿದೆ: ಡೊನಾಲ್ಡ್ ಟ್ರಂಪ್ ಟೀಕೆ
ಶ್ವೇತಭವನದಿಂದ ಮಹತ್ವದ ದಾಖಲೆಗಳನ್ನು ಕದ್ದ ಆರೋಪ: ಕಳೆದ ವರ್ಷ ಶ್ವೇತಭವನದಿಂದ ಹೊರಬರುವಾಗ ಟ್ರಂಪ್ ತಮ್ಮೊಂದಿಗೆ ಹಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪವಿದೆ. ಈ ದಾಖಲೆಗಳನ್ನು 15 ದೊಡ್ಡ ಪೆಟ್ಟಿಗೆಗಳಲ್ಲಿ ಮಾರ್-ಎ-ಲಿಗೋಗೆ ತೆಗೆದುಕೊಂಡು ಹೋಗಲಾಯಿತು. ಅಂದಿನಿಂದ, ಅಮೆರಿಕದ ಗುಪ್ತಚರ ಸಂಸ್ಥೆಗಳು ಟ್ರಂಪ್ ಮತ್ತು ಅವರ ನಿಕಟವರ್ತಿಗಳ ಮೇಲೆ ಕಣ್ಣಿಟ್ಟಿದ್ದವು. ಆದಾಗ್ಯೂ, ಎಫ್‌ಐಬಿ ಈವರೆಗೂ ಈ ಆರೋಪದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ ನಿಧನ!
ಇದೊಂದು ಕರಾಳ ದಿನ: ಅಮೆರಿಕದ ಮಾಜಿ ಅಧ್ಯಕ್ಷರ ನಿವಾಸದ ಮೇಲೆ ಹಿಂದೆಂದೂ ದಾಳಿ ನಡೆದಿರಲಿಲ್ಲ. ಇದೊಂದು ದೇಶದ ಕರಾಳ ದಿನ ಎಂದು ಟ್ರಂಪ್ ಹೇಳಿದ್ದಾರೆ. ತನಿಖಾ ಸಂಸ್ಥೆಗಳ ಜೊತೆ ನಾನು ಸಹಕಾರ ನೀಡುತ್ತಿದ್ದ ಹೊರತಾಗಿಯೂ ಇಂಥ ಕ್ರಮಕೈಗೊಳ್ಳಲಾಗುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಯನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಂಡಂತೆ. ಇದು ಕಟ್ಟಾ ಡೆಮಾಕ್ರಾಟ್ಸ್‌ಗಳ ದಾಳಿಯಾಗಿದೆ. 2024ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಅವರಿಗೆ ಇಷ್ಟವಿಲ್ಲ ಎಂದು ಟೀಕಿಸಿದ್ದಾರೆ. ಯಾವುದೇ ಸೂಚನೆ ನೀಡದೆ ಈ ದಾಳಿ ನಡೆಸಲಾಗಿದೆ ಎಂದು ಇಬ್ಬರು ಟ್ರಂಪ್ ಆಪ್ತರು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಎಫ್‌ಬಿಐ ಏಜೆಂಟ್‌ಗಳು ಮಾರ್-ಎ-ಲಿಗೊ ಮೇಲೆ ದಾಳಿ ನಡೆಸಿದಾಗ ಸ್ವತಃ ಟ್ರಂಪ್ ಅಲ್ಲಿರಲಿಲ್ಲ. ಸದ್ಯ ನ್ಯೂಜೆರ್ಸಿಯಲ್ಲಿದ್ದಾರೆ ಎನ್ನಲಾಗಿದೆ. ಇಲ್ಲಿ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೋಗಿದ್ದಾರೆ. ಕೆಲವು ದಿನಗಳ ಹಿಂದೆ, ಟ್ರಂಪ್ ವಿರುದ್ಧದ ಜನವರಿ 6 ಹಿಂಸಾಚಾರದ ತನಿಖೆಯ ಸಂಸದೀಯ ಸಮಿತಿಯು ಎಫ್‌ಬಿಐ ಅವರ ವಿರುದ್ಧದ ತನಿಖೆಯನ್ನು ವೇಗಗೊಳಿಸಬೇಕು ಎಂದು ಹೇಳಿದೆ.