ಹಳೆಯ ಪೇಂಟಿಂಗ್ ಬಟ್ಟಲಿಗೆ 314 ಕೋಟಿ ರೂ. ಕೊಟ್ಟ ಉದ್ಯಮಿ; ವಿಶ್ವದಾಖಲೆ ಬರೆದ ಪಾತ್ರೆಯ ವಿಶೇಷತೆ ಗೊತ್ತಾ?

By Sathish Kumar KH  |  First Published Jun 20, 2024, 1:45 PM IST

ಪೇಂಟಿಂಗ್ ಮತ್ತು ಕ್ಯಾಲಿಗ್ರಫಿ ವೇಳೆ ಬ್ರಷ್ ತೊಳೆಯಲು ಬಳಸುತ್ತಿದ್ದ ಸಣ್ಣ ಪಿಂಗಾಣಿ ಬಟ್ಟಲನ್ನು ಉದ್ಯಮಿಯೊಬ್ಬ ಬರೋಬ್ಬರಿ 314 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಈ ಸಣ್ಣ ಬಟ್ಟಲು ಮಾರಾಟವಾದ ಬೆಲೆ ವಿಶ್ವದಾಖಲೆ ಬರೆದಿದೆ.


ನವದೆಹಲಿ (ಜೂ.20): ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಳೆಯ ಪಾತ್ರೆಗಳನ್ನು ಮಾರಾಟ ಮಾಡಲು ಹೋದರೆ ಇದು ಮರುಬಳಕೆಗೆ ಬರೊಲ್ಲ, ಕರಗಿಸಿ ಹೊಸದನ್ನು ಮಾಡಬೇಕು. ತೂಕಕ್ಕೆ ಹಾಕಿ ಎಷ್ಟು ಬರುತ್ತೋ ಅಷ್ಟು ಹಣ ಕೊಡ್ತೀವಿ ಅಂತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಹಳೆಯ ಬಟ್ಟಲನ್ನು ಮಾರಾಟ ಮಾಡಲು ಮುಂದಾದಾಗ ಉದ್ಯಮಿಯೊಬ್ಬ ಬರೋಬ್ಬರಿ 314 ಕೋಟಿ ರೂ. ಕೊಟ್ಟು ಬಟ್ಟಲನ್ನು ಖರೀದಿ ಮಾಡಿದ್ದಾನೆ. ಅಷ್ಟಕ್ಕೂ ಈ ಬಟ್ಟಲಿನ ವಿಶೇಷತೆ ಏನು ಗೊತ್ತಾ..?

ಹಿಂದೂ ಪುರಾಣ ಕತೆಗಳು ಹಾಗೂ ಕೆಲವು ಪವಾಡ ಪುರುಷರ ಕಥೆಗಳನ್ನು ಅಕ್ಷಯ ಪಾಯತ್ರೆಗಳನ್ನು ಹೊಂದಿದ್ದರು ಎಂಬ ಬಗ್ಗೆ ಕೇಳಿರುತ್ತೇವೆ. ಒಂದು ವೇಳೆ ದೇವರು ಕೊಟ್ಟ ನೈಜ ಅಕ್ಷಯ ಪಾತ್ರೆ ಕೊಟ್ಟರೂ 100 ಕೋಟಿ ರೂ.ಗೆ ಮಾರಾಟ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಇಲ್ಲೊಂದು ಹಳೆಯ ಬಟ್ಟಲಿಗೆ ಉದ್ಯಮಿಯೊಬ್ಬ ಬರೋಬ್ಬರಿ 314 ಕೋಟಿ ರೂ. ಕೊಟ್ಟು ಖರೀದಿ ಮಾಡಿದ ಘಟನೆ ಚೀನಾದ ಹಾಂಗ್ ಕಾಂಗ್ ಹರಾಜಿನಲ್ಲಿ ನಡೆದಿದೆ. ಇನ್ನು ಈ ಬಟ್ಟಲು ಚೀನಾದ ಉತ್ತರ ಭಾಗದ ಸಾಂಗ್ ರಾಜಮನೆತನಕ್ಕೆ ಸೇರಿದ ಬರೋಬ್ಬರಿ 1,000 ವರ್ಷಗಳಷ್ಟು ಹಳೆಯದು ಎಂಬುದು ಇದರ ವಿಶೇಷತೆ ಆಗಿದೆ.

Tap to resize

Latest Videos

undefined

ಚಿಕನ್ ಸುಕ್ಕಾ ಮಾಡಲು ತಲೆ ಕತ್ತರಿಸಿದರೂ 18 ತಿಂಗಳು ಬದುಕಿದ ಫಾರಂ ಕೋಳಿ

67 ಕೋಟಿಗೆ ಹರಾಜಿಗಿಟ್ಟರೆ 5 ಪಟ್ಟು ಬೆಲೆ ಹೆಚ್ಚಾಯ್ತು: ಇನ್ನು ಮೇಲೆ ಕಾಣಿಸುವ ಈ ಬಟ್ಟಲು ಹಾಂಗ್ ಕಾಂಗ್ ನಲ್ಲಿ ನಡೆದ ಹರಾಜಿನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಈ ಚಿಕ್ಕ ಬಟ್ಟಲು ಚೀನಾದ ಉತ್ತರ ಸಾಂಗ್ ರಾಜವಂಶಕ್ಕೆ ಸೇರಿದೆ. ಈ ಬಟ್ಟಲಿನ ಹರಾಜಿನಲ್ಲಿ ಹಲವಾರು ಶ್ರೀಮಂತರು ಭಾಗವಹಿಸಿದ್ದರು. ಕೆಲವರು ನೇರವಾಗಿ ಭಾಗವಹಿಸಿದರೆ, ಇನ್ನು ಕೆಲವರು ಆನ್‌ಲೈನ್ ಹರಾಜಿನಲ್ಲಿಯೂ ಪಾಲ್ಗೊಂಡಿದ್ದರು. ಈ ಬಟ್ಟಲನ್ನು ಸೋಥೆಬಿಸ್ ಎನ್ನುವವರು ಆರಂಭದಲ್ಲಿ 67 ಕೋಟಿ ರೂ.ಗೆ ಮಾರಾಟ ಮಾಡಲು ಹರಾಜಿಗಿಟ್ಟಿದ್ದರು. ಆದರೆ, ಉದ್ಯಮಿಗಳು ಹಾಗೂ ಶ್ರೀಮಂತರು ಈ ಬಟ್ಟಲನ್ನು ನಾವೇ ಖರೀದಿ ಮಾಡಬೇಕು, ರಾಜ ವಂಶದ ಹೆಗ್ಗಳಿಗೆ ನಮಗೆ ಸಿಗಬೇಕು ಎಂದು ಜಿದ್ದಿಗೆ ಬಿದ್ದವರಂತೆ ಬೆಲೆ ಏರಿಸಿ ಬಿಡ್ ಕೂಗಿದ್ದಾರೆ. ಕೊನೆಗೆ 20 ನಿಮಿಷಗಳ ಅಂತರದಲ್ಲಿ ಬಟ್ಟಲು ಮೂಲ ಹರಾಜು ಬೆಲೆಗಿಂತ 5 ಪಟ್ಟು ಹೆಚ್ಚಳಕ್ಕೆ ಏರಿಸಿ 314 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ.

ಈ ಬಟ್ಟಲು ಕೇವಲ 13 ಸೆಂಟಿಮೀಟರ್ ಗ್ರಾತ್ರವನ್ನು ಹೊಂದಿದೆ. ಇದು ನೀಲಿ ಹಸಿರು ಬಣ್ಣವನ್ನು ಹೊಂದಿದೆ. ಇದನ್ನು ಸಾಂಗ್ ರಾಜಮನೆತನದಲ್ಲಿ ಪೇಂಟಿಂಗ್ ಮಾಡುವ ಬ್ರಷ್‌ ತೊಳೆಯಲು ಬಳಕೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸುಮಾರು ಕ್ರಿ.ಶ. 960 ರಿಂದ 1127 ರವರ ಅವಧಿಯಲ್ಲಿ ಬಳಕೆಯಲ್ಲಿತ್ತು. ಈ ಪಿಂಗಾಣಿ ಬಟ್ಟಲನ್ನು ಮಧ್ಯ ಚೀನೀ ಪ್ರಾಂತ್ಯದ ಹೆನಾನ್‌ನಲ್ಲಿ ಅದರ ಪ್ರಸಿದ್ಧವಾದ ರುಝೌ ಸಮುದಾಯದಿಂದ ರಚಿಸಲ್ಪಟ್ಟಿದೆ. ಈ ಬಟ್ಟನನ್ನು ಕ್ಯಾಲಿಗ್ರಫಿ ಮತ್ತು ಪೇಂಟಿಂಗ್‌ಗೆ ಬಳಸುವ ಬ್ರಷ್‌ಗಳನ್ನು ಸ್ವಚ್ಛಗೊಳಿಸಲು ಕಲಾವಿದರು ಬಳಸುತ್ತಿದ್ದರು ಎಂದು ಬಟ್ಟಲು ಮಾರಾಟ ಮಾಡಿದ ಸೋಥೆಬಿಸ್ ಹೇಳಿದ್ದಾರೆ.

ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್ ಸೇರ್ಪಡೆ ಮಾಡಿದ ಪೊಲೀಸರು; ಜೈಲೂಟ ಫಿಕ್ಸ್!

ಅಷ್ಟಕ್ಕೂ ಈ ಬಟ್ಟಲು ಈಗ ಮಾರಾಟವಾಗಿಲ್ಲ. ವಿಶ್ವಕ್ಕೆ ಕೊರೊನಾ ಮಾರಕ ವೈರಸ್ ಬರುವ ಮುನ್ನವೇ 2017ರಲ್ಲಿ ಮಾರಾಟ ಮಾಡಲಾಗಿದೆ. ಇನ್ನು ರಾಜಮನೆತನದ ಈ ಬಟ್ಟಲನ್ನು ಖರೀದಿ ಮಾಡಿದವರು ಒಂದಷ್ಟು ವರ್ಷಗಳನ್ನು ಬಿಟ್ಟು ಲಾಭಕ್ಕಾಗಿ ಪುನಃ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಪ್ರತಿ ಹರಾಜಿನಲ್ಲಿಯೂ ಈ ಬಟ್ಟಲಿನ ಬೆಲೆ ಹೆಚ್ಚಳವಾಗುತ್ತಲೇ ಹೋಗುತ್ತಿದೆ. ಇನ್ನು ಹರಾಜಿನ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಮಾತನಾಡಿ, ಈ ಬಟ್ಟಲು ಹರಾಜಿನ ಆರಂಭದಲ್ಲಿ 10.2 ಮಿಲಿಯನ್ ಡಾಲರ್‌ನಿಂದ (67 ಕೋಟಿ ರೂ.) ಬಿಡ್ಡಿಂಗ್ ಪ್ರಾರಂಭವಾಗಿ, ಕೇವಲ 20 ನಿಮಿಷಗಳ ಅಂತರದಲ್ಲಿ 37.7 ಮಿಲಿಯನ್ ಡಾಲರ್‌ಗೆ ಮಾರಾಟವಾಯಿತು. ಈ ಬಟ್ಟಲು ವಿಶ್ವ ದಾಖಲೆ ಮಟ್ಟಕ್ಕೆ ಮಾರಾಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

click me!