ಶೇ.34 ಹೆಚ್ಚುವರಿ ತೆರಿಗೆ ವಿಧಿಸಿ ಟ್ರಂಪ್‌ಗೆ ಶಾಕ್ ಕೊಟ್ಟ ಚೀನಾ

Published : Apr 05, 2025, 08:10 AM ISTUpdated : Apr 05, 2025, 08:14 AM IST
ಶೇ.34 ಹೆಚ್ಚುವರಿ ತೆರಿಗೆ ವಿಧಿಸಿ ಟ್ರಂಪ್‌ಗೆ ಶಾಕ್ ಕೊಟ್ಟ ಚೀನಾ

ಸಾರಾಂಶ

ಅಮೆರಿಕದ ತೆರಿಗೆ ನೀತಿಗೆ ಪ್ರತಿಕ್ರಿಯೆಯಾಗಿ ಚೀನಾ ಅಮೆರಿಕದ ಉತ್ಪನ್ನಗಳ ಮೇಲೆ ಶೇ.34ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿದೆ. ಟ್ರಂಪ್ ತೆರಿಗೆ ನೀತಿಯನ್ನು ಚೀನಾ ಕಟುವಾಗಿ ವಿರೋಧಿಸಿದೆ, ಇದು ವಿಶ್ವ ವ್ಯಾಪಾರ ಒಕ್ಕೂಟದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಬೀಜಿಂಗ್‌: ತನ್ನ ಉತ್ಪನ್ನಗಳ ಮೇಲೆ ಶೇ.34ರಷ್ಟು ಪ್ರತಿತೆರಿಗೆ ಹಾಕಿದ ಅಮೆರಿಕದ ವಿರುದ್ಧ ಸಿಡಿದೆದ್ದಿರುವ ಚೀನಾ, ತಾನು ಕೂಡಾ ಅಮೆರಿಕದ ಉತ್ಪನ್ನಗಳ ಮೇಲೆ ಶೇ.34ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಘೋಷಿಸಿದೆ. ಈ ಮೂಲಕ ಅಮೆರಿಕದೊಂದಿಗೆ ನೇರ ತೆರಿಗೆ ಯುದ್ಧಕ್ಕೆ ಇಳಿದಿದೆ. ಗುರುವಾರ ಕೆನಡಾ ಕೂಡಾ ಅಮೆರಿಕದ ವಿವಿಧ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಘೋಷಿಸಿತ್ತು.

ಟ್ರಂಪ್‌ ತೆರಿಗೆ ದಾಳಿಯನ್ನು ಕಟುವಾಗಿ ವಿರೋಧಿಸಿರುವ ಚೀನಾ ವಾಣಿಜ್ಯ ಇಲಾಖೆ, ಟ್ರಂಪ್‌ ತೆರಿಗೆ ನೀತಿಯು ವಿಶ್ವ ವ್ಯಾಪಾರ ಒಕ್ಕೂಟ (ಡಬ್ಲ್ಯುಟಿಓ) ನೀತಿಗೆ ವಿರುದ್ಧವಾಗಿದೆ. ಪ್ರತಿ ತೆರಿಗೆಯಿಂದಾಗಿ ಯಾರೂ ಗೆಲ್ಲುವುದಿಲ್ಲ. ತೆರಿಗೆ ಮತ್ತು ವ್ಯಾಪಾರ ಕುರಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಿದೆ.

ಈ ಮೊದಲೇ ಚೀನಾ ಉತ್ಪನ್ನಗಳ ಮೇಲೆ ಅಮೆರಿಕ ಶೇ.30ರಷ್ಟು ತೆರಿಗೆ ವಿಧಿಸುತ್ತಿತ್ತು. ಇದೀಗ ಮತ್ತೆ ಶೇ.34ರಷ್ಟು ತೆರಿಗೆ ಹೇರಿದೆ. ಚೀನಾದ ರಫ್ತಿನ ಪೈಕಿ ಅಮೆರಿಕದ 3ನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಚೀನಾ ಅಮೆರಿಕಕ್ಕೆ 50 ಲಕ್ಷ ಕೋಟಿ ರು. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತದೆ. ಇನ್ನೊಂದೆಡೆ ಅಮೆರಿಕ ಚೀನಾಕ್ಕೆ ವಾರ್ಷಿಕ 12 ಲಕ್ಷ ಕೋಟಿ ರು. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತದೆ.

ಟ್ರಂಪ್ ತೆರಿಗೆಯಿಂದ ಹಣದುಬ್ಬರ:
ಅಮೆರಿಕ ಕೇಂದ್ರೀಯ ಬ್ಯಾಂಕ್‌!ಅರ್ಲಿಂಗ್‌ಸ್ಟನ್‌: ತನ್ನೊಂದಿಗೆ ವ್ಯಾಪಾರ ನಡೆಸುವ ದೇಶಗಳ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿವಿಧ ಪ್ರಮಾಣದ ಪ್ರತಿತೆರಿಗೆ ವಿಧಿಸಿದ್ದನ್ನು ಸ್ವತಃ ಅಮೆರಿಕ ಕೇಂದ್ರೀಯ ಬ್ಯಾಂಕ್‌ ವಿರೋಧ ವ್ಯಕ್ತಪಡಿಸಿದೆ. ಹೊಸ ತೆರಿಗೆ ನೀತಿಯಿಂದ ಹಣದುಬ್ಬರ ಏರಿಕೆಯ ಮತ್ತು ಆರ್ಥಿಕತೆ ಕುಸಿಯುವ ಭೀತಿಯೂ ಇದೆ ಎಂದು ಹೇಳಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್‌ ಅಧ್ಯಕ್ಷ ಜೆರೋಂ ಪೋವೆಲ್‌, ‘ತೆರಿಗೆ, ಆರ್ಥಿಕತೆಯ ಮೇಲೆ ಅದರ ಪರಿಣಾಮ ಮತ್ತು ಹಣದುಬ್ಬರ ಪ್ರಮಾಣವು ನಿರೀಕ್ಷೆಗಿಂತಲೂ ಅಧಿಕವಾಗಿದೆ. ಆಮದು ತೆರಿಗೆಯಿಂದಾಗಿ ಹಣದುಬ್ಬರದಲ್ಲಿ ತಾತ್ಕಾಲಿಕ ಏರಿಕೆಯಂತೂ ಖಚಿತ. ಜೊತೆಗೆ ಈ ಸಮಸ್ಯೆ ನಿರಂತರವಾಗಿರುವ ಸಾಧ್ಯತೆಯೂ ದಟ್ಟವಾಗಿದೆ ಎಂದು ಹೇಳಿದ್ದಾರೆ.

ಭಾರತದ ಮೇಲಿನ ಅಮೆರಿಕ ಪ್ರತಿ
ತೆರಿಗೆ ಶೇ.27 ರಿಂದ 26ಕ್ಕೆ ಇಳಿಕೆನವದೆಹಲಿ: ಭಾರತದ ಉತ್ಪನ್ನಗಳ ಆಮದಿನ ಮೇಲೆ ವಿಧಿಸಿದ್ದ ಪ್ರತಿತೆರಿಗೆ ಪ್ರಮಾಣವನ್ನು ಶೇ.27 ರಿಂದ 26ಕ್ಕೆ ಇಳಿಸಲಾಗಿದೆ. ಬುಧವಾರ ತಡರಾತ್ರಿ ಟ್ರಂಪ್‌ ಈ ಕುರಿತು ಘೋಷಣೆ ಮಾಡಿದಾಗ ಭಾರತದ ಮೇಲೆ ಶೇ.26ರಷ್ಟು ತೆರಿಗೆ ಘೋಷಿಸಿದ್ದರು. ಗುರುವಾರ ಶ್ವೇತಭವನದ ದಾಖಲೆಗಳಲ್ಲಿ ಈ ಪ್ರಮಾಣ ಶೇ.27 ಎಂದು ತೋರಿಸಲಾಗಿತ್ತು. .ಆದರೆ ಬಳಿಕ ಈ ಕುರಿತು ಬಿಡುಗಡೆ ಮಾಡಲಾದ ಪರಿಷ್ಕೃತ ಮಾಹಿತಿಯನ್ನು ಪ್ರತಿತೆರಿಗೆ ಪ್ರಮಾಣ ಶೇ.26ರಷ್ಟು ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಈ ವ‍ರ್ಷದ ಜಗತ್ತಿನ ಟಾಪ್ 10 ಶ್ರೀಮಂತ ಮಹಿಳೆಯರ ಫೋರ್ಬ್ಸ್ ಪಟ್ಟಿ ರಿಲೀಸ್‌, ಭಾರತದ ಏಕೈಕ ಮಹಿಳೆಗೆ ಸ್ಥಾನ!

ಟ್ರಂಪ್‌ ತೆರಿಗೆ ದಾಳಿ ಬಳಿಕ 500 ಭಾರೀ ಶ್ರೀಮಂತರಿಗೆ 17 ಲಕ್ಷ ಕೋಟಿ ರು.ನಷ್ಟ!
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ತೆರಿಗೆ ವಿಧಿಸಿದ ಬೆನ್ನಲ್ಲೇ ಶುಕ್ರವಾರ ಒಂದೇ ದಿನ 500 ಶತಕೋಟ್ಯಾಧೀಶರಿಗೆ ಬರೋಬ್ಬರಿ 17 ಲಕ್ಷ ಕೋಟಿ ನಷ್ಟ ಸಂಭವಿಸಿದೆ. ಈ ಶ್ರೀಮಂತರು ಹೊಂದಿರುವ ಷೇರುಗಳ ಮೌಲ್ಯ ಕುಸಿತದ ಕಾರಣ ಈ ಬೆಳವಣಿಗೆ ಸಂಭವಿಸಿದೆ. ಈ ಪೈಕಿ ಫೇಸ್‌ಬುಕ್ಸಂ ಸಂಸ್ಥಾಪಕ ಮಾರ್ಕ್ ಜುಗರ್‌ ಬರ್ಗ್ ಮೊದಲ ಸ್ಥಾನದಲ್ಲಿದ್ದು, ಅವರ ಆಸ್ತಿ ಒಂದೇ ದಿನ 1.5 ಲಕ್ಷ ಕೋಟಿ ಇಳಿದಿದೆ. 2ನೇ ಸ್ಥಾನದಲ್ಲಿ ಅಮೆಜಾನ್‌ನ ಜೆಫ್‌ ಬೆಜೋಸ್‌ರಿದ್ದು ಅವರ ಆಸ್ತಿ 1.3 ಲಕ್ಷ ಕೋಟಿ ರು. ಕುಸಿದಿದೆ, ಮೂರನೇಯ ಸ್ಥಾನದಲ್ಲಿ ಎಲಾನ್ ಮಸ್ಕ್‌ ಇದ್ದು ಮಸ್ಕ್‌ಗೆ 95000 ಕೋಟಿ ನಷ್ಟವಾಗಿದೆ. ಇದು ಕೋವಿಡ್‌ ಬಳಿಕದ ಅತಿದೊಡ್ಡ ಕುಸಿತವಾಗಿದೆ.

ಇದನ್ನೂ ಓದಿ: ಅಮೆರಿಕ ಸಂಸತ್ತಿನ ಮೇಲ್ಮನೆಯಲ್ಲಿ ಸತತ 25 ತಾಸು ಭಾಷಣ ಮಾಡಿದ ಸಂಸದ ಕೋರಿ ಬೂಕರ್‌ !

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

32ನೇ ಬಾರಿ ಎವರೆಸ್ಟ್‌ ಹತ್ತಿ ಕಾಮೀ ರೀತಾ ಶೆರ್ಪಾ ದಾಖಲೆ; ಪರ್ವತದಲ್ಲಿ ಅಳಿಸಲಾಗದ ದಾಖಲೆ
Health Emergency: ಆಫ್ರಿಕಾ ದೇಶಗಳಲ್ಲಿ ಎಬೋಲಾ ಪತ್ತೆ: 88 ಬಲಿ, 300 ಜನಕ್ಕೆ ಸೋಂಕು ಶಂಕೆ