ಚಂದ್ರನ ಕಲ್ಲು ತರುವ ಚೀನಾ ನೌಕೆ ಗಗನಕ್ಕೆ: ಡಿಸೆಂಬರಲ್ಲಿ ಲ್ಯಾಂಡಿಂಗ್‌!

By Suvarna NewsFirst Published Nov 26, 2020, 9:07 AM IST
Highlights

ಚಂದ್ರನ ಮೇಲ್ಮೈನಿಂದ ಕಲ್ಲಿನ ಮಾದರಿ ತರುವ ನೌಕೆ|  ಯಶಸ್ವಿಯಾಗಿ ಉಡ್ಡಯನ ಮಾಡಿದ ಚೀನಾ| ವೆಂಚಾಗ್‌ ಬಾಹ್ಯಾಕಾಶ ಉಡ್ಡಯನ ನೆಲೆಯಿಂದ ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ

ಬೀಜಿಂಗ್‌(ನ.26): ಚಂದ್ರನ ಮೇಲ್ಮೈನಿಂದ ಕಲ್ಲಿನ ಮಾದರಿ ತರುವ ನೌಕೆಯನ್ನು ಚೀನಾ ಮಂಗಳವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ. ವೆಂಚಾಗ್‌ ಬಾಹ್ಯಾಕಾಶ ಉಡ್ಡಯನ ನೆಲೆಯಿಂದ ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ.

ಈ ನೌಕೆಯಲ್ಲಿ ಆರ್ಬಿಟರ್‌, ಆರ್ಬಿಟರ್‌ ಹಾಗೂ ರಿಟರ್ನಟರ್‌ ಇದ್ದು ಒಟ್ಟು 8.2 ಟನ್‌ ತೂಕವನ್ನು ಹೊತ್ತು ಸಾಗಿದೆ. ಆರ್ಬಿಟರ್‌ ಹಾಗೂ ರಿಟರ್ನರ್‌ ಚಂದ್ರನಿಗಿಂತ 200 ಕಿ.ಮಿ ದೂರದಲ್ಲಿ ಉಳಿಯಲಿದ್ದು, ಲ್ಯಾಂಡರ್‌ ಹಾಗೂ ಅಸೆಂಡರ್‌ ಚಂದ್ರನ ಮೇಲ್ಮೈನಲ್ಲಿ ಇಳಿದು ಮಾದರಿಗಳನ್ನು ಸಂಗ್ರಹಿಸಲಿದೆ.

ಡಿಸೆಂಬರ್‌ ಮೊದಲ ವಾರದಲ್ಲಿ ಚಂದ್ರನ ಮೇಲೆ ಇಳಿಯುವ ಸಂಭವ ಇದೆ. ಲ್ಯಾಂಡರ್‌ನಲ್ಲಿ ಅಳವಡಿಸಲಾಗಿರುವ ರೋಬೋಟ್‌ ಚಂದ್ರನ ಮೇಲ್ಮೈಯನ್ನು ಕೊರೆದು, ಮಾದರಿಯನ್ನು ಸಂಗ್ರಹಿಸಿ ಪ್ಯಾಕ್‌ ಮಾಡಲಿದೆ. 

ಸುಮಾರು ಎರಡು ಕೆಜಿಯಷ್ಟು ಕಲ್ಲಿನ ಮಾದರಿಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ. 40 ವರ್ಷದ ಬಳಿಕ ಚಂದ್ರನ ಮೇಲಿಂದ ಕಲ್ಲು ತರುವ ಯತ್ನ ಇದಾಗಿದೆ.

click me!