ಬೊಲಿವಿಯಾದಲ್ಲಿ ಸರಕು ಸಾಗಣೆ ವಿಮಾನ ಪತನ : 15 ಮಂದಿ ಸಾವು

Kannadaprabha News   | Kannada Prabha
Published : Mar 01, 2026, 06:15 AM IST
bolivia military plane crash

ಸಾರಾಂಶ

ಬೊಲಿವಿಯಾದ ರಾಜಧಾನಿ ಲಾ ಪಾಜ್‌ನಲ್ಲಿ ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಪತನಗೊಂಡ ಘಟನೆ ಶನಿವಾರ ನಡೆದಿದೆ. ಈ ವೇಳೆ 15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬೊಲಿವಿನ್‌ ಕರೆನ್ಸಿಗಳನ್ನ ಸಾಂತ್‌ ಕ್ರೂಜ್‌ನಿಂದ ಸಾಗಿಸುತ್ತಿದ್ದಾಗ ಪತನ

ಲಾ ಪಾಜ್‌: ಬೊಲಿವಿಯಾದ ರಾಜಧಾನಿ ಲಾ ಪಾಜ್‌ನಲ್ಲಿ ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಪತನಗೊಂಡ ಘಟನೆ ಶನಿವಾರ ನಡೆದಿದೆ. ಈ ವೇಳೆ 15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಬೊಲಿವಿನ್‌ ಕರೆನ್ಸಿಗಳನ್ನ ಸಾಂತ್‌ ಕ್ರೂಜ್‌ನಿಂದ ಸಾಗಿಸುತ್ತಿದ್ದಾಗ ಪತನ

ಹರ್ಕ್ಯೂಲಸ್‌ ಸಿ-130 ಎನ್ನುವ ವಿಮಾನವು ಹೊಸದಾಗಿ ಮುದ್ರಿಸಿದ್ದ ಬೊಲಿವಿನ್‌ ಕರೆನ್ಸಿಗಳನ್ನ ಸಾಂತ್‌ ಕ್ರೂಜ್‌ನಿಂದ ಸಾಗಿಸುತ್ತಿದ್ದಾಗ ಇಲ್ಲಿನ ಎಲ್ ಆಲ್ಟೊ ವಿಮಾನ ನಿಲ್ದಾಣ ಸಮೀಪದ ಹೊಲದಲ್ಲಿ ಪತನಗೊಂಡಿದೆ.

12ಕ್ಕೂ ಹೆಚ್ಚು ವಾಹನಗಳಿಗೂ ಹಾನಿ

ಇದರಿಂದ 12ಕ್ಕೂ ಹೆಚ್ಚು ವಾಹನಗಳಿಗೂ ಹಾನಿಯಾಗಿವೆ. ಆಗ ವಿಮಾನ ಹಾಗೂ ರಸ್ತೆಯಲ್ಲಿನ ವಾಹನದಲ್ಲಿ ಸಾಗುತ್ತಿದ್ದವರು ಸತ್ತಿದ್ದಾರೆ.ವಿಮಾನದ ಅವಶೇಷಗಳು, ಧ್ವಂಸಗೊಂಡ ಕಾರುಗಳು, ರಸ್ತೆಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿರುವ ದೃಶ್ಯಗಳು ಜಾಲತಾಣದಲ್ಲಿ ವೈರಲ್‌ ಆಗಿದೆ. ಮತ್ತೊಂದೆಡೆ ಜನರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಅಳಿದುಳಿದ ನೋಟು ಹೆಕ್ಕಲು ಮುಗಿಬಿದ್ದ ಪ್ರಸಂಗವೂ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ನ 500ಕ್ಕೂಹೆಚ್ಚು ಕಡೆ ಇಸ್ರೇಲ್- ಅಮೆರಿಕ ದಾಳಿ । 200 ಬಲಿ
Operation Epic Fury: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ವಿಶ್ವಸಂಸ್ಥೆಯಲ್ಲಿ ಮಾತಿನ ಸಮರ!