ಪುರುಷನ ಜನನಾಂಗದಂತೆ ಕಾಣುವ ಹುಳ/ ಸಮುದ್ರದ ದಂಡೆಯಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಪೆನಿಸ್ ಫಿಶ್ ಗಳ ಪೋಟೋ ವೈರಲ್/ ಈ ಸೃಷ್ಟಿ ವೈಚಿತ್ರ್ಯದ ಕತೆ ನೋಡಲೇಬೇಕು
ಕ್ಯಾಲಿಪೋರ್ನಿಯಾ(ಡಿ. 19) ಈ ಪೋಟೋ ನೋಡಿದರೆ ಒಂದು ಕ್ಷಣ ಭಯ ಬೀಳಲೇಬೇಕು. ಪುರುಷನ ಜನನಾಂಗದಂತೆ ಕಾಣುವ ಹುಳುವೋ, ಮೀನೋ... ಕ್ಯಾಲಿಪೋರ್ನಿಯಾದ ಈ ಪೋಟೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್.
ತಕ್ಷಣಕ್ಕೆ ನೋಡಲು ಇದು ಪುರುಷರ ಜನನಾಂಗದಂತೆ ಕಂಡು ಹೌಹಾರಬೇಕಾಗಿದ್ದೇನೋ ನಿಜ. ಕ್ಯಾಲಿಫೋರ್ನಿಯಾದ ಸಮುದ್ರದ ತೀರದಲ್ಲಿ ಈ ಹುಳುಗಳು ರಾಶಿ ಬಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.
undefined
ಡ್ರೇಕ್ಸ್ ಬೀಚ್‌ನಲ್ಲಿ ಈ ಹುಳುಗಳು ದಡದಲ್ಲಿ ಬಂದು ಬಿದ್ದಿದ್ದವು. ಉತ್ತರ ಕ್ಯಾಲಿಫೋರ್ನಿಯಾದ ಸಾಗರದಾಳದಲ್ಲಿ ಪ್ರಬಲ ಅಲೆಗಳ ಕಾರಣದಿಂದ ಈ ಹುಳುಗಳು ದಡಕ್ಕೆ ಬಂದು ಬಿದ್ದಿವೆ ಎಂಬ ವಾದ ಇದೆ.
ಉತ್ತರ ಅಮೇರಿಕಾದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಾಗಿ ಈ ಹುಳುಗಳು ಕಂಡುಬರುತ್ತವೆ. ದಡಕ್ಕೆ ಬಂದು ಬಿದ್ದಿರುವುದು ಇದೇ ಮೊದಲೇನಲ್ಲ. ಪಜಾರೊ ಡ್ಯೂನ್ಸ್, ಮಾಸ್ ಲ್ಯಾಂಡಿಂಗ್, ಬೊಡೆಗಾ ಬೇ ಮತ್ತು ಪ್ರಿನ್ಸ್ಟನ್ ಬಂದರುಗಳಲ್ಲಿಯೂ ಹುಳುಗಳ ರಾಶಿ ಬಿದ್ದಿತ್ತು.
ಇವು ಸಮುದ್ರಾಳದ ಜೀವಿಗಳಂತೆ. ಸುಮಾರು 10 ಇಂಚುಗಳಷ್ಟು ಉದ್ದವಿರುವ ಈ ಹುಳು ಶಿಶ್ನದಂತೆ ಕಾಣುವುದರಿಂದ ಇದಕ್ಕೆ ಪೆನಿಸ್ ಫಿಶ್ ಎಂದೇ ಹೆಸರು ನೀಡಲಾಗಿದೆ. ಈ ಪೆನಿಸ್ ಫಿಶ್ ಸಾಗರದ ಆಳದಲ್ಲಿ ಜೀವಿಸುವ ಒಂದು ರೀತಿಯ ಹುಳು ಎಂಬುದು ತಜ್ಞರ ಅಭಿಮತ. ಇವುಗಳ ಆಯುಷ್ಯ 25 ವರ್ಷ ಎಂದು ಹೇಳಲಾಗಿದೆ.