ಬುರ್ಖಾ ನಿಷೇಧ ಬಿಲ್‌ಗೆ ಸಂಸತ್ತಿನಲ್ಲಿ ಅನುಮೋದನೆ, ತಪ್ಪಿದ್ರೆ 4 ಲಕ್ಷ ರೂ ದಂಡ ಎಂದ ಪೋರ್ಚುಗಲ್

Published : Oct 18, 2025, 09:17 PM IST
Burka ban

ಸಾರಾಂಶ

ಬುರ್ಖಾ ನಿಷೇಧ ಬಿಲ್‌ಗೆ ಸಂಸತ್ತಿನಲ್ಲಿ ಅನುಮೋದನೆ, ತಪ್ಪಿದ್ರೆ 4 ಲಕ್ಷ ರೂ ದಂಡ ಎಂದ ಪೋರ್ಚುಗಲ್, ಒತ್ತಾಯ ಪೂರ್ವಕವಾಗಿ ಅಥವಾ ಷಡ್ಯಂತ್ರದ ಭಾಗವಾಗಿ ಬುರ್ಖಾ ಹಾಕಲು ಪ್ರೇರೇಪಿಸಿದರ 3 ವರ್ಷ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.

ಪೋರ್ಚುಗಲ್ (ಅ.18) ಭಾರತ ಸೇರಿದಂತೆ ಹಲವೆಡೆ ಬುರ್ಖಾ, ಹಿಜಾಬ್ ವಿಚಾರದಲ್ಲಿ ಬಾರಿ ಕೋಲಾಹಲವೇ ಸೃಷ್ಟಿಯಾಗಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ಕುರಿತು ಹಿಂಸಾಚಾರ, ಪ್ರತಿಭಟನೆಗಳೇ ನಡೆದು ಹೋಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪೋರ್ಚುಗಲ್‌ನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಬುರ್ಖಾ ನಿಷೇಧ ಬಿಲ್‌ಗೆ ಸಂಸತ್ತು ಅನುಮೋದನೆ ನೀಡಿದೆ. ನಿಯಮ ಉಲ್ಲಂಘಿಸಿದರೆ 4 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.ಇಷ್ಟೇ ಅಲ್ಲ ಬುರ್ಖಾ ಧರಿಸಲು ಒತ್ತಾಯಿಸಿದರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಬಿಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಬುರ್ಖಾ ಬ್ಯಾನ್ ಬಿಲ್, ಧಾರ್ಮಿಕ ಸ್ಥಳದಲ್ಲಿ ಹಿಜಾಬ್ ಒಕೆ

ಪೋರ್ಚುಗಲ್‌ನಲ್ಲಿ ಬುರ್ಖಾ, ಹಿಜಾಬ್ ನಿಷೇಧಿಸಲು ಹಲವು ಹೋರಾಟಗಳು ನಡೆದಿದೆ. ಇದೀಗ ಚೆಗಾ ಪಾರ್ಟಿ ಮಹತ್ವದ ಬಿಲ್ ಮಂಡಿಸಿದೆ. ಇದಕ್ಕೆ ಸಂಸತ್ತೂ ಅನುಮೋದನೆ ನೀಡಿದೆ. ಪ್ರಮುಖವಾಗಿ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ನಿಷೇಧಿಸಲಾಗಿದೆ. ಇನ್ನು ಧಾರ್ಮಿಕ ಸ್ಥಳದಲ್ಲಿ ಹಿಜಾಬ್ ಧರಿಸಲು ಪ್ರಸ್ತಾವನೆಯಲ್ಲಿ ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಧ್ಯಕ್ಷರ ಟೇಬಲ್‌ಗೆ ಬಿಲ್

ಪೊರ್ಚುಗಲ್ ಸಂಸತ್ತಿನಲ್ಲಿ ಪಾಸ್ ಆದ ಬುರ್ಖಾ ನಿಷೇಧ ಬಿಲ್ ಇದೀಗ ಅಧ್ಯಕ್ಷ ಮಾರ್ಸೆಲೋ ರೆಬೆಲೋ ಡಿ ಸೌಸಾಗೆ ಕಳುಹಿಸಲಾಗಿದೆ. ಅಧ್ಯಕ್ಷರು ಸಹಿ ಮಾಡಿದ ಬಳಿಕ ಕಾನೂನಾಗಿ ಜಾರಿಯಾಗಲಿದೆ. ಅಧ್ಯಕ್ಷರು ಈ ಬಿಲ್‌ನ್ನು ಪರಿಶೀಲನೆಗಾಗಿ ಸಾಂವಿಧಾನಿಕ ಕೋರ್ಟ್‌ಗೆ ಕಳುಹಿಸುತ್ತಾರೆ. ಪರಿಶೀಲನೆ ಬಳಿಕ ಅಧ್ಯಕ್ಷರು ಸಹಿ ಮಾಡಿದರೆ ಶೀಘ್ರದಲ್ಲೇ ಕಾನೂನು ಆಗಿ ಜಾರಿಯಾಗಲಿದೆ. ಹೀಗಾದಲ್ಲಿ ಯುರೋಪಿಯನ್ ಕೆಲ ರಾಷ್ಟ್ರಗಳ ಬಳಿಕ ಇದೀಗ ಪೋರ್ಚುಗಲ್ ಕೂಡ ಬುರ್ಖಾ ಬ್ಯಾನ್ ಮಾಡಿದ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದಕ್ಕೂ ಮೊದಲು ಯೂರೋಪಿಯನ್ ರಾಷ್ಟ್ರಗಳಾದ ಫ್ರಾನ್ಸ್, ಆಸ್ಟ್ರಿಯಾ, ಬೆಲ್ಜಿಯಂ ಹಾಗೂ ನೆದರ್ಲೆಂಡ್ ಸಾರ್ವಜನಿಕ ಪ್ರದೇಶದಲ್ಲಿ ಬುರ್ಖಾ ಬ್ಯಾನ್ ಮಾಡಿದೆ.

ಸಂಸತ್ತಿನಲ್ಲಿ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ ಎಡಪಂಥೀಯ ನಾಯಕರು

ಪೋರ್ಚುಗಲ್ ಸಂಸತ್ತಿನಲ್ಲಿ ಚೆಗಾ ಪಕ್ಷದ ನಾಯಕ ಆ್ಯಂಡ್ರೆ ವೆಂಟುರ ಬುರ್ಖಾ ಬ್ಯಾನ್ ಮಸೂದೆ ಮಂಡಿಸಿದ್ದರು. ಈ ವೇಳೆ ಎಡಪಂಥೀಯ ಪಕ್ಷದ ಕೆಲ ಮಹಿಳಾ ನಾಯಕಿಯರು ಈ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಇದು ಸಮಾನತೆ, ಯಾವುದೇ ಮಹಿಳೆಗೆ ಒತ್ತಾಯಪೂರ್ವಕವಾಗಿ ಬುರ್ಖಾ, ಹಿಜಾಬ್ ಧರಿಸಲು ಸೂಚಿಸುವಂತಿಲ್ಲ. ಅವರಿಗೆ ಇಷ್ಟವಿದ್ದೆ ಬಟ್ಟೆ ಧರಿಸಲು ಅವಕಾಶವಿದೆ. ಪೋರ್ಚುಗಲ್‌ನಲ್ಲಿ ಪೋರ್ಚಗುಲ್ ಪರಂಪರೆ, ಪದ್ಧತಿ ಇರಲಿದೆ. ಬೇರೆ ರಾಷ್ಟ್ರದ ನೀತಿ ಪದ್ದತಿ ಇಲ್ಲಿ ನಡೆಯುವುದಿಲ್ಲ. ಇಲ್ಲಿರಬೇಕಾದರೆ ಇಲ್ಲಿನ ಸಂಸ್ಕೃತಿ, ಇಲ್ಲಿನ ಪರಂಪರೆ ಗೌರವಿಸಿ ಎಂದು ಚೆಗಾ ಪಾರ್ಟಿ ನಾಯಕರು ಪ್ರತಿಪಾದಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!