ವಧು ಕೆಳಕ್ಕೆ ಬಿದ್ದರೂ ಕ್ರೂರವಾಗಿ ಎಳೆದಾಡಿದ ವರನಿಗೆ ವೇದಿಕೆಯಲ್ಲೇ ಥಳಿಸಿದ ಅಣ್ಣ, ದೃಶ್ಯ ಸೆರೆ!

By Chethan Kumar  |  First Published Jul 25, 2024, 1:56 PM IST

ಬೇಡ ಎಂದರೂ ವಧುವನ್ನು ವೇದಿಕೆಗೆ ಹಿಡಿದು ಎಳೆದು ತಂದಿದ್ದಾನೆ. ಆಕೆ ಕೆಳಕ್ಕೆ ಬಿದ್ದು ಕಾಲು ಹಿಡಿದರೂ ವರ ಮಾತ್ರ ಕೇಳಲ್ಲಿ ಎಳೆದಾಡಿ, ಕ್ರೌರ್ಯ ಮೆರೆದಿದ್ದಾನೆ. ಇದನ್ನು ನೋಡುತ್ತಿದ್ದ ವಧುವಿನ ಅಣ್ಣ ರೊಚ್ಚಿಗೆದ್ದಿದ್ದಾನೆ. ವೇದಿಕೆಯಲ್ಲಿ ವರನಿಗೆ ಥಳಿಸಿ ತಕ್ಕ ಪಾಠ ಕಲಿಸಿದ ವಿಡಿಯೋ ವೈರಲ್ ಆಗಿದೆ.
 


ಕ್ಷುಲ್ಲಕ ಕಾರಣಕ್ಕೆ ಮದುವೆ ಮಂಟಪ ರಣಾಂಗಣವಾದ ಘಟನೆಗಳು ಹಲವಿದೆ. ಮಟನ್ ಇರಲಿಲ್ಲ, ಗೌರವ ನೀಡಲಿಲ್ಲ, ಅಹಂಕಾರ, ಹೀಗೆ ಹಲವು ಕಾರಣಗಳಿಂದ ಮದುವೆ ಮನೆಯಲ್ಲೆ ಹೊಡೆದಾಟ ನಡೆದಿದೆ. ಇದೀಗ ವೇದಿಕೆ ವಧುವಿನ ಕೈಹಿಡಿದು ಬರುವಾಗ ವರನ ಕ್ರೂರ ವರ್ತನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ವಧು ಜಾರಿ ಕೆಳಕ್ಕೆ ಬಿದ್ದರೂ ವರ ಮಾತ್ರ ಆಕೆಯನ್ನು ಎಳೆದಾಡಿದ್ದಾನೆ. ಆಕೆ ಕಾಲು ಹಿಡಿದರೂ ಈತನ ಕ್ರೂರ ವರ್ತನೆ ನಿಲ್ಲಿಲ್ಲ. ಆದರೆ ತನ್ನ ತಂಗಿಯನ್ನು ಕೆಟ್ಟದಾಗಿ ನಡೆಸಿಕೊಂಡ ಕಾರಣಕ್ಕೆ ಏಕಾಏಕಿ ವೇದಿಕೆಗೆ ನುಗ್ಗಿದ ಅಣ್ಣ, ಸರಿಯಾಗಿ ಥಳಿಸಿದ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ವಧುವಿನ ಅಣ್ಣನ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸಫಿ ಮೊಹಮ್ಮದ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅದ್ದೂರಿಯಾಗಿ ಮದುವೆ ಆಯೋಜಿಸಲಾಗಿದೆ. ಎರಡೂ ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಮದುವೆ ಆಯೋಜಿಸಿದೆ. ಆದರೆ ವರನ ದರ್ಪದ ಮಾತುಗಳು, ವಧುವಿನ ಕುಟುಂಬಸ್ಥರಿಗೆ ತೀವ್ರ ಆಕ್ರೋಶ ತಂದಿತ್ತು. ಆದರೆ ಮದುವೆ ಬಳಿ ವಧುವಿನ ಭಿವಿಷ್ಯದ ಕುರಿತು ಚಿಂತೆಯಿಂದ ಕುಟುಂಬಸ್ಥರು ಸುಮ್ಮನಾಗಿದ್ದರು.

Tap to resize

Latest Videos

undefined

ಕೂಲರ್‌ನಿಂದ ಮದುವೆ ಮಂಟಪ ಕೂಲ್ ಕೂಲ್ ಆದರೆ ಮದುವೆ ಕ್ಯಾನ್ಸಲ್! 

ಮದುವೆ ದಿನ ವೇದಿಕೆಯಲ್ಲಿ ಎಲ್ಲಾ ತಯಾರಿ ನಡೆದಿತ್ತು. ಇತ್ತ ಮದುವೆ ಡ್ರೆಸ್‌ನಲ್ಲಿ ವಧು ಹಾಗೂ ವರ ಜೋಡಿ ಕಂಗೊಳಿಸಿದ್ದರು. ವಧುವಿನ ಕೈ ಹಿಡಿದು ಆಕೆಯನ್ನು ವೇದಿಕೆಗೆ ಕರೆ ತರಬೇಕಾದ ಜವಾಬ್ದಾರಿ ವರನಿಗಿತ್ತು. ಆದರೆ ಇದು ಈತನ ಸ್ಟೇಟಸ್‌ಗೆ ಧಕ್ಕೆ ತಂದಿದೆ. ಎಲ್ಲರ ಮುಂದೆ ನೇರವಾಗಿ ಹೇಳದ ಈ ವರ, ತನ್ನ ಸಿಟ್ಟನ್ನು ವಧುವಿನ ಮೇಲೆ ತೋರಿಸಿದ್ದಾನೆ. ಆಕೆಯನ್ನು ಧರಧರನೇ ಎಳೆದುಕೊಂಡು ವೇದಿಕೆಯತ್ತ ಬಂದಿದ್ದಾನೆ. 

 

 
 
 
 
 
 
 
 
 
 
 
 
 
 
 

A post shared by safy mohamad (@safyelhosiny)

 

ಎತ್ತರದ ವೇದಿಕೆಯನ್ನು ವರ ಒಂದೇ ಬಾರಿ ಹತ್ತಿದ್ದಾನೆ. ಆದರೆ ಆಕೆಯ ಹೀಲ್ಡ್ ಚಪ್ಪಲಿ, ಗೌನ್ , ಆಭರಣಗಳ ಕಾರಣದಿಂದ ಏಕಾಏಕಿ ಛಂಗನೆ ಹಾರಲು ಸಾಧ್ಯವಾಗಿಲ್ಲ. ಮೆಲ್ಲನೆ ಹೆಜ್ಜೆ ಇಟ್ಟಿದ್ದಾಳೆ. ಆದರೆ ವರ ಆಕೆಯನ್ನು ಹಿಡಿದು ಎಳೆದಿದ್ದಾನೆ. ಇದರ ಪರಿಣಾಮ ಆಕೆ ವೇದಿಕೆಯಲ್ಲೇ ಕೆಳಕ್ಕೆ ಬಿದ್ದಿದ್ದಾಳೆ. ಬಿದ್ದಲ್ಲಿಂದ ಆಕೆಯನ್ನು ಎತ್ತುವ ಪ್ರಯತ್ನ ಮಾಡಿಲ್ಲ, ಬದಲಾಗಿ ಹಾಗೇ ಎಳೆದುಕೊಂಡು ಬರವು ಪ್ರಯತ್ನ ಮಾಡಿದ್ದಾನೆ.

ಆಕೆ ವರನ ಕಾಲು ಹಿಡಿದು ಮೇಳೆಲು ಪ್ರಯತ್ನಿಸಿದರೂ ವರ ಮಾತ್ರ ಆಕೆಯನ್ನು ಧರ ಧರ ಎಳೆದುಕೊಂಡು ತರುವ ಪ್ರಯತ್ನ ಮಾಡಿದ್ದಾನೆ. ಬಳಿಕ ಆಕೆಯನ್ನು ಅಲ್ಲೆ ಬಿಟ್ಟು ಅಲಂಕರಿಸಿದ್ದ ಆಸನದಲ್ಲಿ ವರ ಕುಳಿತಿದ್ದಾನೆ. ಇತ್ತ ವಧು ತೀವ್ರ ಅವಮಾನ, ನೋವಿನಿಂದ ಪಕ್ಕದ ಸೋಫಾದಲ್ಲಿ ಕುಳಿತಿದ್ದಾಳೆ. ಈ ಘಟನೆ ನೋಡುತ್ತಿದ್ದ ವಧುವಿನ ಅಣ್ಣ ರೊಚ್ಚಿಗೆದ್ದಿದ್ದಾನೆ. ತನ್ನ ತಂಗಿಯನ್ನು ಸರಿಯಾಗಿ ನಡೆಸಿಕೊಳ್ಳಲು ಸಾಧ್ಯವಿಲ್ಲವೇ ಎಂದು ಏಕಾಏಕಿ ವೇದಿಕೆ ಮೇಲೆ ಹತ್ತಿ ವರನಿಗೆ ಥಳಿಸಿದ್ದಾನೆ. ಬಳಿಕ ವೇದಿಕೆಯಲ್ಲೇ ರಣಾಂಗಣವಾಗಿದೆ. ಹೊಡೆದಾಟ ಜೋರಾಗಿದೆ.

300 ಕೋಟಿ ರೂ ಜೆಟ್, 40 ಕೋಟಿ ಮನೆ; ದಿಗ್ಗಜರಿಂದ ಅನಂತ್ ರಾಧಿಕಾಗೆ ಸಿಕ್ಕಿದೆ ಭರ್ಜರಿ ಗಿಫ್ಟ್!

ವಧುವಿನ ಅಣ್ಣನ ನಡೆ, ಪಾಠ ಕಲಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಳಿಕ ಈ ಮದುವೆ ಸೂಸೂತ್ರವಾಗಿ ನಡೆದಿದೆಯಾ ಅನ್ನೋ ಕುರಿತು ಯಾವುದೇ ಮಾಹಿತಿ ಇಲ್ಲ.

click me!