ವಿಚ್ಛೇದನ ಕೇಸ್: ತಾಯಿಗೆ 750 ಕೋಟಿ ರು.ನೀಡಲು ಮಗನಿಗೆ ಆದೇಶಿಸಿದ ಕೋರ್ಟ್‌!

By Suvarna NewsFirst Published Apr 24, 2021, 1:13 PM IST
Highlights

ವಿಚ್ಛೇದನ ಪ್ರಕರಣಗಳಲ್ಲಿ ಪತಿ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನೀಡಬೇಕು| ಆದರೆ ಇಲ್ಲಿ ತಾಯಿಗೆ 750 ಕೋಟಿ ರು.ನೀಡಲು ಮಗನಿಗೆ ಆದೇಶಿಸಿದ ಕೋರ್ಟ್‌!

ಲಂಡನ್‌(ಏ.24): ಸಾಮಾನ್ಯವಾಗಿ ವಿಚ್ಛೇದನ ಪ್ರಕರಣಗಳಲ್ಲಿ ಪತಿ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನೀಡಬೇಕು. ಆದರೆ, ಬ್ರಿಟನ್‌ನ ಅತಿದೊಡ್ಡ ವಿಚ್ಛೇದನ ಪ್ರಕರಣವೊಂದರಲ್ಲಿ ತಾಯಿಗೆ 750 ಕೋಟಿ ರು. ಪರಿಹಾರ ನೀಡುವಂತೆ ಕೋರ್ಟ್‌ ಮಗನಿಗೆ ಆದೇಶಿಸಿರುವ ಪ್ರಸಂಗವೊಂದು ಜರುಗಿದೆ.

ಅಜೆರ್‌ಬೈಜಾನ್‌ ಮೂಲದ ಕೋಟ್ಯಧಿಪತಿ ಫರ್ಖಾದ್‌ ಅಖ್ಮೆಡೋವ್‌ ಎಂಬಾತನ ವಿಚ್ಛೇದನ ಪ್ರಕರಣದಲ್ಲಿ ಕೋರ್ಟ್‌ ಇಂಥದ್ದೊಂದು ವಿಚಿತ್ರ ತೀರ್ಪು ನೀಡಿದೆ. ಅಖ್ಮೆಡೋವ್‌ ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾಕ್ಕಾಗಿ 4700 ಕೋಟಿ ಜೀವನಾಂಶ ನೀಡುವಂತೆ ಕೋರ್ಟ್‌ ಆದೇಶಿತ್ತು.

ಆದರೆ, ತನ್ನ ತಾಯಿಗೆ ಜೀವನಾಂಶ ದೊರಕದಂತೆ ಮಾಡಲು ಮಗ ತೆಮೂರ್‌ ಅಖ್ಮೆಡೋವ್‌ ಯತ್ನಿಸಿದ್ದ. ತಂದೆಯ ಆಸ್ತಿಯನ್ನು ಬಚ್ಚಿಡಲು ಯತ್ನಿಸಿದ ಕಾರಣಕ್ಕೆ ತೆಮೂರ್‌ ಕಖ್ಮೆಡೋವ್‌ಗೆ ಛೀಮಾರಿ ಹಾಕಿರುವ ಬ್ರಿಟನ್‌ನ ವಿಚ್ಛೇದನಾ ನ್ಯಾಯಾಲಯ 750 ಕೋಟಿ ರು. ಪರಿಹಾರವನ್ನು ತುಂಬಿಕೊಡುವಂತೆ ಸೂಚಿಸಿದೆ.

click me!