ನೂರಾರು ವಿಮಾನ, ಹಡಗು ನುಂಗಿದ ಬರ್ಮುಡಾ ಟ್ರಯಾಂಗಲ್‌ ರಹಸ್ಯ ಕೊನೆಗೂ ಬಯಲು!

Published : May 10, 2022, 09:30 AM IST
ನೂರಾರು ವಿಮಾನ, ಹಡಗು ನುಂಗಿದ ಬರ್ಮುಡಾ ಟ್ರಯಾಂಗಲ್‌ ರಹಸ್ಯ ಕೊನೆಗೂ ಬಯಲು!

ಸಾರಾಂಶ

* ಹಡಗು, ವಿಮಾನ ಕಣ್ಮರೆಗೆ ಹವಾಮಾನ, ಮಾನವ ತಪ್ಪು ಕಾರಣ: ಆಸ್ಪ್ರೇಲಿಯಾ ವಿಜ್ಞಾನಿ ವಾದ * ಬರ್ಮುಡಾ ಟ್ರಯಾಂಗಲ್‌ ರಹಸ್ಯ ಬಯಲು!

ಕ್ಯಾನ್‌ಬೆರಾ(ಮೇ.10): ಉತ್ತರ ಅಟ್ಲಾಂಟಿಕ್‌ ಮಹಾಸಾಗರದಲ್ಲಿರುವ ಕುಖ್ಯಾತ ಬರ್ಮುಡಾ ಟ್ರಯಾಂಗಲ್‌ನಲ್ಲಿ ಇದ್ದಕ್ಕಿದ್ದಂತೆ ಹಡಗುಗಳು ಹಾಗೂ ವಿಮಾನಗಳ ವಿಲಕ್ಷಣವಾಗಿ ಕಣ್ಮರೆಯಾಗುವ ರಹಸ್ಯವನ್ನು ತಾವು ಬೇಧಿಸಿರುವುದಾಗಿ ಆಸ್ಪ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಕ್ರುಸ್ಜೆಲ್ನಿಕಿ ಹೇಳಿ ಕೊಂಡಿದ್ದಾರೆ.

ಈ ದುರ್ಘಟನೆಗಳು ಯಾವುದೇ ಅಲೌಕಿಕ ಶಕ್ತಿಯಿಂದಾಗಿ ನಡೆಯುವುದಿಲ್ಲ. ಬದಲಾಗಿ ಪ್ರತಿಕೂಲ ಹವಾಮಾನ ಅಥವಾ ಮಾನವನ ತಪ್ಪುಗಳಿಂದಲೇ ಸಂಭವಿಸಿವೆ ಎಂದಿದ್ದಾರೆ ಕಾರ್ಲ್

ಬರ್ಮುಡಾ, ಫ್ಲೋರಿಡಾ ಹಾಗೂ ಪೋರ್ಟೊರಿಕೋ ಪ್ರದೇಶದಲ್ಲಿರುವ ಸುಮಾರು 70 ವರ್ಷಗಳಿಂದಲೂ ನಿಗೂಢವೆನಿಸಿಕೊಂಡ ಬರ್ಮುಡಾ ಟ್ರಯಾಂಗಲ್‌ನಲ್ಲಿ ಹಡಗು, ವಿಮಾನ ರಹಸ್ಯವಾಗಿ ಕಣ್ಮರೆಯಾಗುತ್ತಿದ್ದವು. ಆದರೆ ಇದರ ಹಿಂದೆ ಜನರು ನಂಬಿದಂತೆ ಯಾವುದೇ ಅನ್ಯಗ್ರಹ ಜೀವಿಗಳ ಅಥವಾ ಕಳೆದುಹೋದ ಅಟ್ಲಾಂಟಿಕ್‌ ನಗರದ ಬೆಂಕಿ ಹರಳುಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಇವು ವಿಮಾನ ಚಾಲಕರು ಅಥವಾ ಹಡಗಿನ ನಾವಿಕರ ತಪ್ಪುಗಳು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಸಂಭವಿಸಿವೆ ಎಂದಿದ್ದಾರೆ.

ಹೊಡು ಸಮುದ್ರ, ಡೆವಿಲ್ಸ್‌ ಟ್ರಯಾಂಗಲ್‌ ಎಂದು ಕರೆಯಲ್ಪಡುವ ಬರ್ಮುಡಾ ಟ್ರಯಾಂಗಲ್‌ ಸುಮಾರು 700,000 ಚದರ್‌ ಕಿಮೀ ಸಮುದ್ರ ಪ್ರದೇಶವನ್ನು ಆವರಿಸಿಕೊಂಡಿದೆ. ಈ ಭಾಗವು ಸಮಭಾಜಕ ವೃತ್ತಕ್ಕೆ ಅತ್ಯಂತ ಸಮೀಪದಲ್ಲಿದೆ. ಅಲ್ಲದೇ ಅಮೆರಿಕಕ್ಕೆ ಹತ್ತಿರದಲ್ಲಿರುವುದರಿಂದ ಸಾಮಾನ್ಯವಾಗಿ ಇಲ್ಲಿ ಹೆಚ್ಚಿನ ಹಡಗು ಹಾಗೂ ವಿಮಾನಗಳ ದಟ್ಟಣೆ ಗಮನಿಸಬಹುದಾಗಿದೆ. ಲೊಯ್ಡ್‌ ಆಫ್‌ ಲಂಡನ್‌ ಹಾಗೂ ಅಮೆರಿಕದ ಕೋಸ್ಟ್‌ ಗಾರ್ಡ್‌ ಸಂಸ್ಥೆಗಳ ಮಾಹಿತಿಯ ಪ್ರಕಾರ ಬರ್ಮುಡಾ ಟ್ರ್ಯಾಂಗಲ್‌ನಲ್ಲಿ ಕಣ್ಮರೆಯಾಗುವ ಹಡಗು, ವಿಮಾನಗಳ ಪ್ರಮಾಣ ಜಗತ್ತಿನ ಸಮುದ್ರ ಭಾಗಗಳಲ್ಲಿ ನಡೆಯುವ ದುರ್ಘಟನೆಗಳ ಶೇಕಡಾವಾರು ಪ್ರಮಾಣಕ್ಕೆ ಸಮನಾಗಿದೆ ಎಂದು ಕಾರ್ಲ್ ಹೇಳಿದ್ದಾರೆ.

ಬರ್ಮುಡಾ ಟ್ರಯಾಂಗಲ್‌ ರಹಸ್ಯ

ಉತ್ತರ ಅಟ್ಲಾಂಟಿಕ್‌ ಮಹಾಸಾಗರದಲ್ಲಿರುವ ಬರ್ಮುಡಾ ಟ್ರಯಾಂಗಲ್‌ ವಿಮಾನಗಳು ಹಾಗೂ ಹಡಗುಗಳು ಇದ್ದಕ್ಕಿದ್ದಂತೇ ಕಣ್ಮರೆಯಾಗುತ್ತಿದ್ದವು. ದುರ್ಘಟನೆಯ ನಂತರ ಎಷ್ಟೇ ಹುಡುಕಿದರೂ ಹಡಗು ಅಥವಾ ವಿಮಾನಗಳ ಅವಶೇಷಗಳೂ ಪತ್ತೆಯಾಗುತ್ತಿರಲಿಲ್ಲ. ಹೀಗಾಗಿ ಇಲ್ಲಿ ಬಲವಾದ ಗುರುತ್ವಾಕರ್ಷಣ ಶಕ್ತಿಯ ಸೆಳೆತ, ಅನ್ಯಗ್ರಹ ಜೀವಿಗಳು ಅಥವಾ ಅಲೌಕಿಕ ಶಕ್ತಿಗಳ ಕೈವಾಡದಿಂದ ದುರ್ಘಟನೆಗಳು ಸಂಭವಿಸುತ್ತವೆ ಎನ್ನಲಾಗುತ್ತಿತ್ತು. ಇಲ್ಲಿ ಮೊದಲನೇ ವಿಶ್ವ ಯುದ್ಧದ ವೇಳೆ 309 ಜನರಿದ್ದ ಯುಎಸ್‌ಎಸ್‌ ಸೈಕ್ಲೋಫ್ಸ್‌ ಹಡಗು ಕಣ್ಮರೆಯಾಗಿತ್ತು. ಅದಾದ ನಂತರ 1941ರಲ್ಲಿ ಇನ್ನೆರಡು ಅವಳಿ ಹಡಗುಗಳು ಕಣ್ಮರೆಯಾಗಿದ್ದವು. 1945 ರಲ್ಲಿ ಅಮೆರಿಕದ ವಿಮಾನ ಫ್ಲೈಟ್‌ 19 ಕಣ್ಮರೆಯಾಗಿತ್ತು ಅದನ್ನು ಹುಡುಕಲು ಕಳುಹಿಸಿದ ಮಾರ್ಟಿನ್‌ ಮ್ಯಾರಿನರ್‌ ನೌಕಾವಿಮಾನ ಕೂಡಾ ಕಣ್ಮರೆಯಾಗಿದ್ದು, ಇದರ ಅವಶೇಷವಾಗಲೀ ಯಾವುದೇ ಸುಳಿವಾಗಲಿ ಸಿಕ್ಕಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಣ್ಣನ ಮಗನನ್ನೇ ಅಳಿಯ ಮಾಡಿಕೊಂಡ ಪಾಕ್‌ ಆರ್ಮಿ ಚೀಫ್‌ ಆಸೀಮ್‌ ಮುನೀರ್‌, ಸೇನಾ ಕಚೇರಿಯಲ್ಲೇ ಮದುವೆ!
ಭಾರತ-ಪಾಕ್ ಯುದ್ಧ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವು: ಚೀನಾ!