
ಢಾಕಾ (ಡಿ.21) ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಭಾರತ ವಿರೋಧಿ ನಾಯಕ ಶರೀಫ್ ಒಸ್ಮಾನ್ ಹಾಡಿ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಭಾರಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ದುರಂತ ಅಂದರೆ ಈ ಹಿಂಸಾಚಾರ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ನಡೆಸಲಾಗುತ್ತಿದೆ. ಈ ಹಿಂಸಾಚಾರದಲ್ಲಿ ಬಾಂಗ್ಲಾದೇಶದ ಹಿಂದೂ ದೀಪು ಚಂದ್ರ ದಾಸ್ ಮೇಲೆ ಭೀಕರ ದಾಳಿ ನಡೆದಿತ್ತು. ಜನು ಬಡಿದು, ತುಳಿದು ದೀಪು ಚಂದ್ರ ದಾಸ್ ಹತ್ಯೆ ಮಾಡಲಾಗಿದೆ. ಈ ಘಟನೆ ಬನ್ನಲ್ಲೇ ಇದೀಗ ಮತೊಬ್ಬ ಹಿಂದೂವಿನ ಮೇಲೆ ಭೀಕರ ದಾಳಿ ನಡೆದಿದೆ. ಹಿಂದೂ ಇ ರಿಕ್ಷಾ ಚಾಲಕ ಗೋಬಿಂದ ಬಿಸ್ವಾಸ್ ಮೇಲೆ ದಾಳಿಯಾಗಿದೆ. ದುರಂತ ಅಂದರೆ ಬಾಂಗ್ಲಾದೇಶ ಸೇನೆ, ಪೊಲೀಸರು ಈತನ ಬಂಧಿಸಿ ಜೈಲಿಗಟ್ಟಿದ್ದಾರೆ. ಇಷ್ಟೇ ಅಲ್ಲ ಈತನ ಮಾತು ಕೇಳಲು ಯಾವ ಭದ್ರತಾ ಎಜೆನ್ಸಿ, ಸರ್ಕಾರವೂ ತಯಾರಾಗಿಲ್ಲ.
ಜೆನ್ನೈದಾ ಜಿಲ್ಲೆಯ ಖುಲನಾ ಡಿವಿಶನ್‌ನಲ್ಲಿ ಈ ಘಟನೆ ನಡೆದಿದೆ.ಇ ರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿರುವ ಈ ಗೋಬಿಂದ ಬಿಸ್ವಾಸ್ ಮೇಲೆ ಬಾಂಗ್ಲಾದೇಶದ ಬಹುಸಂಖ್ಯಾತ ಪ್ರತಿಭಟನಾ ಗುಂಪು ದಾಳಿ ಮಾಡಿದೆ. ಹಿಗ್ಗಾ ಮುಗ್ಗ ಥಳಿಸಿದೆ. ಗೋಬಿಂದ ಬಿಸ್ವಾಸ್ ಬಡ ಹಿಂದೂ. ಪ್ರತಿ ದಿನ ಊಟಕ್ಕೆ ಇ ರಿಕ್ಷಾ ಮೂಲಕ ದುಡಿಯಬೇಕು. ಆದರೆ ಈತ ಧರಿಸಿದ್ದ ಉಡುದ್ವಾರ ಕಟ್ಟಿದ್ದು ಮಾತ್ರವಲ್ಲ, ಶರ್ಟ್ ಒಳಗೆ ಹಾಕಿರುವ ಟಿಶರ್ಟ್ ಶಿವನ ಚಿತ್ರ ಹೊಂದಿದೆ. ಇದೇ ಕಾರಣಕ್ಕೆ ಬಾಂಗ್ಲಾದೇಶದ ಬಹುಸಂಖ್ಯಾ ಪ್ರತಿಭಟನಾ ನಿರತ ಗುಂಪು ಈ ಹಿಂದೂ ಮೇಲೆ ದಾಳಿ ಮಾಡಿದೆ.
ಗೋಂಬಿದ ಬಿಸ್ವಾಸ್ ಬಾಂಗ್ಲಾದೇಶದ ಹಿಂದೂ. ಆದರೆ ಪ್ರತಿಭಟನಕಾರರು ಹಿಂದೂ ಧರಿಸುವ ಉಡುದ್ವಾರ ಕಟ್ಟಿದ್ದಾನೆ ಎಂದು ಆತನ ಮೇಲೆ ದಾಳಿ ಮಾಡಿದ್ದಾರೆ. ಗೋಂಬಿದ ಬಿಸ್ವಾಸ್ ಭಾರತದ ಗೂಢಚರ್ಯೆ ಎಂದು ಆರೋಪಿಸಿದ್ದಾರೆ. ಹಿಗ್ಗಾ ಮುಗ್ಗ ಥಳಿಸಿದ್ದರೆ. ದುರಂತ ಎಂದರೆ ಸ್ಥಳಕ್ಕೆ ಪೊಲೀಸರು, ಬಾಂಗ್ಲಾದೇಶ ಸೇನೆ ಬಂದರೂ ಈತನ ಮಾತು ಕೇಳಿಲ್ಲ. ತಾನು ಹಿಂದೂ. ಇಲ್ಲೇ ಹುಟ್ಟಿ ಬೆಳೆದಿದ್ದೇನೆ. ನನ್ನ ಇಡೀ ಕಟುಂಬ ಇಲ್ಲೇ ಹುಟ್ಟಿ ಬೆಳೆದಿದೆ. ನಾನು ಹಿಂದೂವಾಗಿಯೇ ಗುರುತಿಸಿಕೊಂಡಿದ್ದೇನೆ ಎಂದು ಪರಿಪರಿಯಾಗಿ ಹೇಳಿದರೂ ಯಾರೂ ಈತನ ಮಾತು ಕೇಳಲಿಲ್ಲ. ಕೊರಳಪಟ್ಟಿ ಹಿಡಿದು ಗೋಂಬಿದ ಬಿಸ್ವಾಸ್‌ನ ಜೈಲಿಗಟ್ಟಿದ್ದಾರೆ. ಗಾಯಗೊಂಡಿರುವ ಗೋಂಬಿದ ಬಿಸ್ವಾಸ್ ಕುಟುಂಬ ಕಂಗಾಲಾಗಿದೆ.
ಗೋಂಬಿದ ಬಿಸ್ವಾಸ್ ಮೊಬೈಲ್ ಫೋನ್‌ನಲ್ಲಿ ಭಾರತದ ಆಕಾಶ್ ಎಂಬ ವ್ಯಕ್ತಿ ಜೊತೆ ಸಂಪರ್ಕವಿರುವುದು ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈತ ಭಾರತದಲ್ಲೂ ನೆಲೆಸಿದ್ದ. ಹೀಗಾಗಿ ಈತ ಭಾರತದ ರಾ ಎಜೆನ್ಸಿಯ ಗೂಢಚಾರಿ ಎಂದು ಪ್ರಾಥಮಿಕ ತನಿಖೆ ಬಹಿರಂಗಪಡಿಸಿದೆ. ಹೀಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬಾಂಗ್ಲಾದೇಶ ಪೊಲೀಸರು ಹೇಳಿದ್ದಾರೆ.
ತಾನು ಹಿಂದೂ ಹೌದು, ತನಗೆ ಯಾವುದೇ ಗೂಢಚಾರಿ ಸಂಸ್ಥೆ, ಭಾರತದ ಯಾವುದೇ ಸರ್ಕಾರಿ ಸಂಸ್ಥೆಗಳ ಜೊತೆ ಸಂಪರ್ಕವಿಲ್ಲ ಎಂದು ಗೋಬಿಂದ ಬಿಸ್ವಾಸ್ ಹೇಳಿದ್ದಾನೆ. ಸದ್ಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಸತತ ದಾಳಿಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ