
ಢಾಕಾ: ಬಾಂಗ್ಲಾದೇಶದಲ್ಲಿ ಇರುವ 2 ಎಮ್ಮೆಗಳನ್ನು ನೋಡಿದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ನೆತನ್ಯಾಹು ನೆತನ್ಯಾಹು ನೆನಪಾಗುತ್ತಾರಂತೆ. ಆದ್ದರಿಂದ ಅವುಗಳಿಗೆ ಆ ನಾಯಕರ ಹೆಸರನ್ನೇ ಇಡಲಾಗಿದೆ!
- ಅಚ್ಚರಿ ಎನ್ನಿಸಿದರೂ ಇದು ನಿಜ, ಟ್ರಂಪ್ ಎಮ್ಮೆಯ ಮೈಬಣ್ಣ ಹಾಗೂ ಕೂದಲ ಬಣ್ಣ ತಿಳಿಯಾಗಿದ್ದು, ಸ್ವಭಾವ ಶಾಂತವಾಗಿದೆ. ಇದು 700 ಕೆ.ಜಿ. ತೂಗುತ್ತಿದೆ. ಇದರ ಹೇರ್ ಸ್ಟೈಲ್ ಕೂಡ ಡೊನಾಲ್ಡ್ ಟ್ರಂಪ್‌ರಂತೆ ಇದೆ.
ಇನ್ನು ನೆತನ್ಯಾಹು ಹೆಸರಿನ 750 ಕೆ.ಜಿ. ತೂಗುವ ಎಮ್ಮೆ ಆಗಾಗ ಗೊರಕೆ ಹೊಡೆಯುವುದು, ಪಾಲಕರ ಮೇಲೆ ಸುಖಾಸುಮ್ಮನೆ ಆಕ್ರಮಣ ಮಾಡುವುದು ಇತ್ಯಾದಿಗಳನ್ನು ಮಾಡುತ್ತದೆ.
ಆದರೆ, ಈದ್ ಹಬ್ಬ ಸಮೀಪಿಸುತ್ತಿರುವುದರಿಂದ ಇವುಗಳನ್ನೀಗ ಮಾರಿರುವುದಾಗಿ ಮಾಲೀಕರು ಹೇಳಿದ್ದಾರೆ. ಈ ಎಮ್ಮೆಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ