
ಇಸ್ಲಮಾಬಾದ್(ಸೆ.27) ಪಾಕಿಸ್ತಾನ(Pakistan) ತನ್ನ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ(Mohammad Ali Jinnah) ಪ್ರತಿಮೆ ಉಳಿಸಿಕೊಳ್ಳಲು ವಿಫಲವಾಗಿದೆ. ಬಲೂಚ್ ಲಿಬರೇಶನ್ ಆರ್ಮಿಯು ಉಗ್ರಗಾಮಿಗಳು ಗ್ವಾದರ್ ನಗರದ ಮರೀನ್ ಡ್ರೈವ್‌ನಲ್ಲಿರುವ (Marine Drive) ಮೊಹಮ್ಮದ್ ಅಲಿ ಜಿನ್ನಾರ ವಿಶಾಲ ಪ್ರತಿಮೆಯನ್ನು ಸ್ಫೋಟಕಗಳಿಂದ ಸ್ಫೋಟಿಸಿದೆ. ಈ ಸ್ಪೋಟದಲ್ಲಿ ಜಿನ್ನಾ ಪ್ರತಿಮೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಶನಿವಾರವಷ್ಟೇ, ಪಾಕಿಸ್ತಾನ ಫ್ರಾಂಟಿಯರ್‌ನ ನಾಲ್ವರು ಅಧಿಕಾರಿಗಳು ಬಲೂಚಿಸ್ತಾನದಲ್ಲಿ(Balochistan) ಐಇಡಿ ದಾಳಿಯಲ್ಲಿ ಹತರಾಗಿ, ಇತರ ಇಬ್ಬರು ಸೇನಾ ಅಧಿಕಾರಿಗಳು ಗಾಯಗೊಂಡಿದ್ದರು. ಈ ಎಲ್ಲ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿದೆ.
ಪ್ರವಾಸಿಗರ ವೇಷದಲ್ಲಿ ಬಂದ ಭಯೋತ್ಪಾದಕರು ಈ ಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಗ್ವಾದರ್ ಉಪ ಆಯುಕ್ತ ಮೇಜರ್ (ನಿವೃತ್ತ) ಅಬ್ದುಲ್ ಕಬೀರ್ ಖಾನ್ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
ಇದು ಪಾಕಿಸ್ತಾನದ ಸಿದ್ಧಾಂತದ ಮೇಲೆ ದಾಳಿ
ಬಲೂಚಿಸ್ತಾನ ಮಾಜಿ ಗೃಹ ಸಚಿವ ಮತ್ತು ಸೆನೆಟರ್ ಸರ್ಫರಾಜ್ ಬುಗ್ತಿ ಅವರು ಗ್ವಾದರ್‌ನಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು ಪಾಕಿಸ್ತಾನದ ಸಿದ್ಧಾಂತದ ನಡೆದ ದಾಳಿ ಎಂದು ಹೇಳಿದ್ದಾರೆ. ಜಿಯಾರತ್‌ನಲ್ಲಿರುವ ಕ್ವೈಡ್-ಎ-ಅಜಾಮ್ ನಿವಾಸದ ಮೇಲೆ ದಾಳಿ ಮಾಡಿದವರಿಗೆ ನಾವು ಮಾಡಿದಂತೆಯೇ ಅಪರಾಧಿಗಳನ್ನು ಶಿಕ್ಷಿಸುವಂತೆ ನಾನು ಅಧಿಕಾರಿಗಳಿಗೆ ವಿನಂತಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
2013ರಲ್ಲಿ ಬಲೂಚ್ ಉಗ್ರಗಾಮಿಗಳು ಜಿಯಾರತ್‌ನಲ್ಲಿ ಜಿನ್ನಾ ಬಳಸುತ್ತಿದ್ದ 121 ವರ್ಷಗಳ ಹಳೆಯ ಕಟ್ಟಡವನ್ನು ಸ್ಫೋಟಿಸಿದ್ದರು. ನಾಲ್ಕು ಗಂಟೆಗಳ ಕಾಲ ಬೆಂಕಿ ಉರಿಸಿ, ಪೀಠೋಪಕರಣಗಳು ಮತ್ತು ಸ್ಮರಣಿಕೆಗಳನ್ನು ನಾಶಪಡಿಸಿದರು. ಜಿನ್ನಾ ಕ್ಷಯರೋಗದಿಂದ ಬಳಲುತ್ತಿದ್ದರಿಂದ ಅವರ ಜೀವನದ ಕೊನೆಯ ದಿನಗಳನ್ನು ಅಲ್ಲಿ ಕಳೆದರು. ನಂತರ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು.
ಮುಹಮ್ಮದ್ ಅಲಿ ಜಿನ್ನಾ ಯಾರು?
ಮುಹಮ್ಮದ್ ಅಲಿ ಜಿನ್ನಾ ಅವಿಭಜಿತ ಭಾರತದಲ್ಲಿ ಅಖಿಲ ಭಾರತ ಮುಸ್ಲಿಂ ಲೀಗ್‌ನ ನಾಯಕರಾಗಿದ್ದರು ಮತ್ತು ವಿಭಜನೆಯ ನಂತರ ಪಾಕಿಸ್ತಾನದ ಗವರ್ನರ್ ಜನರಲ್ ಆಗಿದ್ದರು. ಆತ ಪಾಕಿಸ್ತಾನದ ಸ್ಥಾಪಕ. ಅವರನ್ನು ಕ್ವಾಯ್ಡ್-ಎ-ಅಜಮ್ ಎಂದು ಕರೆಯಲಾಗುತ್ತದೆ. ಅವರು 1948 ರಲ್ಲಿ ಟಿಬಿಯಿಂದ ನಿಧನರಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ