ಅಮೆರಿಕದ 5000 ಯೋಧರ ಆಗಮನ: ಥಾಯ್ಲೆಂಡ್‌ ವೇಶ್ಯಾಗೃಹ ಮೇಲೆ ದಾಳಿ, ಲೈಂಗಿಕ ವ್ಯಾಧಿ ಹಬ್ಬುವ ಭೀತಿ

Published : Sep 03, 2026, 05:44 AM IST
IRCTC Thailand tour

ಸಾರಾಂಶ

ಅಮೆರಿಕದ ಯುದ್ಧನೌಕೆ ಯುಎಸ್‌ಎಸ್‌ ಅಬ್ರಹಾಂ ಲಿಂಕನ್‌ ಥಾಯ್ಲೆಂಡ್‌ಗೆ ಆಗಮಿಸುತ್ತಿದ್ದಂತೆ, ಲೈಂಗಿಕ ವ್ಯಾಧಿ ಹರಡುವ ಭೀತಿಯಿಂದ ಸರ್ಕಾರವು ಪಟ್ಟಾಯದ ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಹಲವರನ್ನು ಬಂಧಿಸಲಾಗಿದ್ದು, ಅಮೆರಿಕದ ಯೋಧರಿಗೆ ರೆಡ್‌ಲೈಟ್‌ ಪ್ರದೇಶದಿಂದ ದೂರವಿರಲು ಸೂಚಿಸಲಾಗಿದೆ.

ವಾಷಿಂಗ್ಟನ್‌: 286 ದಿನಗಳಿಂದ ಮಧ್ಯ ಏಷ್ಯಾ ಪ್ರದೇಶದಲ್ಲಿ ನಿಯೋಜಿತ ಅಮೆರಿಕದ ಯುದ್ಧನೌಕೆ ಯುಎಸ್‌ಎಸ್‌ ಅಬ್ರಹಾಂ ಲಿಂಕನ್‌ ಥಾಯ್ಲೆಂಡ್‌ನ ಲೀಮ್‌ಚಬಾಂಗ್‌ ಬಂದರು ಪ್ರದೇಶಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲೈಂಗಿಕ ಟೂರಿಸಂಗೆ ಹೆಸರುವಾಸಿಯಾದ ಪಟ್ಟಾಯದಲ್ಲಿ ಸರ್ಕಾರ ಕಟ್ಟೆಚ್ಚರ ಘೋಷಿಸಿದೆ.

ವೇಶ್ಯಾವಾಟಿಕೆಯ ಆರೋಪದ ಮೇರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ 40-45 ಮಂದಿಯನ್ನು ಬಂಧಿಸಲಾಗಿದೆ. ಅಮೆರಿಕ ಯೋಧರಿಗೂ ರೆಡ್‌ಲೈಟ್‌ ಪ್ರದೇಶದಿಂದ ದೂರವಿರುವಂತೆ ಸೂಚಿಸಲಾಗಿದೆ.

ಐದು ದಿನಗಳ ಕಾಲ ಹಡಗಿನ ಹೊರಗೆ ಸಮಯ

ಇರಾನ್‌ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕದ ಯುದ್ಧನೌಕೆ ಅಬ್ರಹಾಂ ಲಿಂಕನ್‌ ಅನ್ನು ಕಳೆದ ನವೆಂಬರ್‌ನಲ್ಲಿ ಮಧ್ಯಏಷ್ಯಾ ಸಮೀಪ ನಿಯೋಜಿಸಲಾಗಿತ್ತು. ಆ ಬಳಿಕ ಬಹುತೇಕ ಯುದ್ಧನೌಕೆಗೇ ಸೀಮಿತವಾಗಿದ್ದ ಯೋಧರು ಇದೇ ಮೊದಲ ಬಾರಿ ಐದು ದಿನಗಳ ಕಾಲ ಹಡಗಿನ ಹೊರಗೆ ಸಮಯ ಕಳೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಲೀಮ್‌ಚಬಾಂಗ್‌ ಬಂದರಿಗೆ ಆಗಮಿಸಲಿರುವ ಯೋಧರಿಗೆ ಅಲ್ಲೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅವರು ಬೀಚ್‌ನಲ್ಲೂ ಕೆಲಕಾಲ ಸಮಯ ಕಳೆಯಲಿದ್ದಾರೆ.

ಭದ್ರತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಅಮೆರಿಕದ ಯೋಧರನ್ನು ಲೈಂಗಿಕ ಕಾರ್ಯಕರ್ತೆಯರಿಂದ ದೂರವಿರುವಂತೆ ನೋಡಿಕೊಳ್ಳಲಾಗುತ್ತಿದೆ. ಥಾಯ್‌ಲ್ಯಾಂಡ್‌ನಲ್ಲಿ ವೇಶ್ಯಾವಾಟಿಕೆಯು ಅಕ್ರಮ. ಆದರೆ, ಪಟ್ಟಾಯವು ಸೆಕ್ಸ್‌ಟೂರಿಸಂಗೆ ಹೆಸರುವಾಸಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pakistan temple demolition: ಪಾಕಿಸ್ತಾನದಲ್ಲಿ ನೂರಾರು ವರ್ಷ ಹಳೆಯ ದೇವಾಲಯ ಧ್ವಂಸ! ಭಾರತ ಆಕ್ರೋಶ
ಔಷಧಿ ಸೇರಿ 68 ಟನ್ ಅಗತ್ಯ ವಸ್ತುಗಳ ನೆರವು ನೀಡಿದ ಭಾರತಕ್ಕೆ ಶಾಕ್ ಕೊಟ್ಟ ನೇಪಾಳ