ಕಡಿಮೆ ತೆರಿಗೆ ಪಾವತಿಸಿದ ಆರೋಪ : ಬ್ರಿಟನ್‌ ಉಪಪ್ರಧಾನಿ ರಾಜೀನಾಮೆ

Kannadaprabha News   | Kannada Prabha
Published : Sep 06, 2025, 05:23 AM IST
ANJELA_REYNER

ಸಾರಾಂಶ

ಮನೆ ಖರೀದಿ ವೇಳೆ ಅಗತ್ಯದಷ್ಟು ತೆರಿಗೆ ಕಟ್ಟದ ಆರೋಪದ ಹಿನ್ನೆಲೆಯಲ್ಲಿ ಬ್ರಿಟನ್‌ ಉಪ ಪ್ರಧಾನಿ ಆ್ಯಂಜೆಲಾ ರೈನರ್‌ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಉಪಪ್ರಧಾನಿಯಾಗಿದ್ದುಕೊಂಡು ತೆರಿಗೆ ತಪ್ಪಿಸಿದ ಹಿನ್ನೆಲೆಯಲ್ಲಿ ನೈತಿಕತೆ ಕಾರಣದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಲಂಡನ್‌: ಮನೆ ಖರೀದಿ ವೇಳೆ ಅಗತ್ಯದಷ್ಟು ತೆರಿಗೆ ಕಟ್ಟದ ಆರೋಪದ ಹಿನ್ನೆಲೆಯಲ್ಲಿ ಬ್ರಿಟನ್‌ ಉಪ ಪ್ರಧಾನಿ ಆ್ಯಂಜೆಲಾ ರೈನರ್‌ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಉಪಪ್ರಧಾನಿಯಾಗಿದ್ದುಕೊಂಡು ತೆರಿಗೆ ತಪ್ಪಿಸಿದ ಹಿನ್ನೆಲೆಯಲ್ಲಿ ನೈತಿಕತೆ ಕಾರಣದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಬ್ರಿಟನ್‌ನಲ್ಲಿ ದುಬಾರಿ ಹಾಗೂ ಎರಡನೇ ಮನೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಆ್ಯಂಜೆಲಾ ರೈನಾರ್‌ ಅವರು ಇತ್ತೀಚೆಗೆ ಇಂಗ್ಲೆಂಡ್‌ನ ಹೋವ್‌ನಲ್ಲಿ ಅಪಾರ್ಟ್‌ಮೆಂಟ್‌ ಖರೀದಿಸಿದ್ದರು. ಈ ವೇಳೆ ಅವರು ಅಗತ್ಯದಷ್ಟು ತೆರಿಗೆ ಪಾವತಿಸಿರಲಿಲ್ಲ. 

 ಮನೆ ಖರೀದಿ ವೇಳೆ ಸ್ಟ್ಯಾಂಪ್‌ ಡ್ಯೂಟಿಯಲ್ಲಿ ಅವರು ಸುಮಾರು 40 ಸಾವಿರ ಪೌಂಡ್‌ (47.55 ಲಕ್ಷ ರು.) ಉಳಿಸಿದ್ದರು. ಈ ಹಿಂದೆ ರೈನಾರ್‌ ಅವರು ವಸತಿ ಖಾತೆಯನ್ನೂ ಕೆಲಕಾಲ ವಹಿಸಿಕೊಂಡಿದ್ದರು. ಆಗ ತೆರಿಗೆ ತಪ್ಪಿಸುತ್ತಿದ್ದವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದರು. ಇದೀಗ ಅವರೇ ಕಡಿಮೆ ತೆರಿಗೆ ಪಾವತಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮನೆ ಖರೀದಿ ವೇಳೆ ಅಗತ್ಯದಷ್ಟು ತೆರಿಗೆ ಕಟ್ಟದ ಆರೋಪ

ಬ್ರಿಟನ್‌ ಉಪ ಪ್ರಧಾನಿ ಆ್ಯಂಜೆಲಾ ರೈನರ್‌ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ

ಉಪಪ್ರಧಾನಿಯಾಗಿದ್ದುಕೊಂಡು ತೆರಿಗೆ ತಪ್ಪಿಸಿದ ಹಿನ್ನೆಲೆ

ನೈತಿಕತೆ ಕಾರಣದಿಂದಾಗಿ ಅವರು ಈ ನಿರ್ಧಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌