ರಿಷಿ ಜೊತೆ ಸುಧಾ ಮೂರ್ತಿ ಮಗಳು ಒಳ್ಳೇ ಸಂಬದಕ್ಕಿವು ಕಾರಣಗಳು, ಅಕ್ಷತಾ ಹೇಳಿದ ಗುಟ್ಟು!

Published : May 27, 2024, 02:22 PM ISTUpdated : May 27, 2024, 03:24 PM IST
ರಿಷಿ ಜೊತೆ ಸುಧಾ ಮೂರ್ತಿ ಮಗಳು ಒಳ್ಳೇ ಸಂಬದಕ್ಕಿವು ಕಾರಣಗಳು, ಅಕ್ಷತಾ ಹೇಳಿದ ಗುಟ್ಟು!

ಸಾರಾಂಶ

UK PM Wife Akshata Murty: ರಿಷಿ ಸುನಕ್ ಮತ್ತು ನನ್ನ ನಡುವಿನ ಕಾಮನ್ ವಿಷಯಗಳು ಏನು ಎಂದು ಜನರು ಯಾವಾಗಲೂ ಕೇಳುತ್ತಿರುತ್ತಾರೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಎಂದು ಆರು ವಿಷಯಗಳನ್ನು ಅಕ್ಷತ್ ರಿವೀಲ್ ಮಾಡಿದ್ದಾರೆ. 

ಲಂಡನ್: ಇಂಗ್ಲೆಂಡ್‌ನಲ್ಲಿ ಚುನಾವಣೆ (UK General Elections) ಸಮೀಪಿಸುತ್ತಿದ್ದು, ಪ್ರಧಾನಿ ರಿಷಿ ಸುನಕ್ (UK PM Rishi Sunak) ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಇನ್‌ಸ್ಟಾಗ್ರಾಂನಲ್ಲಿ ಪತಿಯ ಕುರಿತು ಪೋಸ್ಟ್ ಮಾಡಿದ್ದಾರೆ. ಪತಿ ಹಾಗೂ ತಮ್ಮ ನಡುವಿನ ಕಾಮನ್ ವಿಷಯಗಳು ಏನು ಎಂಬುದನ್ನು ಅಕ್ಷತಾ ಮೂರ್ತಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಪತಿ ರಿಷಿ ಸುನಕ್ ಜೊತೆಗಿನ ಎರಡು ಮುದ್ದಾದ ಫೋಟೋಗಳನ್ನು ಶೇರ್ ಮಾಡ್ಕೊಂಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದೆ. ಅಕ್ಷತಾ ಮೂರ್ತಿ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕರಾದ ನಾರಾಯಣ ಮೂರ್ತಿ (Narayana Murty) ಮತ್ತು ಸುಧಾಮೂರ್ತಿ (Sudha Murty) ದಂಪತಿಯ ಮಗಳಾಗಿದ್ದಾರೆ.

ರಿಷಿ ಸುನಕ್ ಮತ್ತು ನನ್ನ ನಡುವಿನ ಕಾಮನ್ ವಿಷಯಗಳು ಏನು ಎಂದು ಜನರು ಯಾವಾಗಲೂ ಕೇಳುತ್ತಿರುತ್ತಾರೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಎಂದು ಆರು ವಿಷಯಗಳನ್ನು ಅಕ್ಷತ್ ರಿವೀಲ್ ಮಾಡಿದ್ದಾರೆ. 

ಆರು ವಿಷಯಗಳನ್ನು ಹಂಚಿಕೊಂಡ ಅಕ್ಷತಾ ಮೂರ್ತಿ

1.ಸ್ನೇಹಿತರ ಜೊತೆಗೆ ಕಳೆದ ಸುಂದರ ಕ್ಷಣಗಳ ವಿಡಿಯೋವನ್ನು ಜೊತೆಯಾಗಿ ಕುಳಿತು ನೋಡುತ್ತೇವೆ. ಆ ಸುಂದರ ದಿನಗಳನ್ನು ಮೆಲಕು ಹಾಕುತ್ತಾ ಸ್ಪ್ಯಾನಿಶ್ ಆಹಾರ ಸೇವಿಸುತ್ತೇವೆ. 

2.ಒಳ್ಳೆಯ ಮೌಲ್ಯಗಳನ್ನು ನಾವು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ.

3.ಕಠಿಣ ಪರಿಶ್ರಮ ನಮ್ಮ ಮುಂದಿನ ಜೀವನವನ್ನು ನಿರ್ಧರಿಸುತ್ತೆ ಎಂಬುದದನ್ನು ನಾವಿಬ್ಬರು ನಂಬಿದ್ದೇವೆ. ಈ ನಂಬಿಕೆಯನ್ನು ನಾವು ಹಂಚಿಕೊಳ್ಳುತ್ತೇವೆ.

4.ಸದೃಢ ನಿರ್ಧಾರಗಳು ಜೀವನದಲ್ಲಿ ಖಂಡಿತ ಬದಲಾವಣೆ ತರುತ್ತವೆ ಎಂಬ ನಂಬಿಕೆ ನಮ್ಮಿಬ್ಬರಲ್ಲಿಯೂ ಇದೆ. 

5.ನಮ್ಮ ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ಸಮಾಜದಲ್ಲಿ ಜೀವನ ನಡೆಸುತ್ತಾರೆ ಎಂಬ ಬಲವಾದ ನಂಬಿಕೆಯನ್ನು ನಾನು ಮತ್ತು ರಿಷಿ ಸುನಕ್ ಹೊಂದಿದ್ದೇವೆ. 

6.ಹ್ಯಾರೋ ನಗರದ ಜನತೆ ಜೊತೆ ಮಾನವೀಯ ಮೌಲ್ಯಗಳಮ ಕುರಿತು ಮಾತಾನಾಡಲು ಇಷ್ಟಪಡುತ್ತೇವೆ. ಭವಿಷ್ಯದಲ್ಲಿ ಮಕ್ಕಳಿಗೆ ಈ ಮೌಲ್ಯಗಳು ತಲುಪಬೇಕು. 

ಅಕ್ಷತಾ ಮೂರ್ತಿ ಹಂಚಿಕೊಂಡ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ 35 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಈ ಫೋಸ್ಟ್ ಕಮೆಂಟ್ ಮಾಡಿರುವ ಜನತೆ ನಿಮ್ಮ ಮಕ್ಕಳನ್ನು ಸೇನೆಗೆ ಸೇರಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಶ್ರೀಮಂತಿಕೆಯಲ್ಲಿ ಬ್ರಿಟನ್‌ ದೊರೆಯನ್ನು ಮೀರಿಸಿದ ಇನ್ಫಿ ನಾರಾಯಣ ಮೂರ್ತಿ ಮಗಳು, ಅಳಿಯ ರಿಷಿ ಸುನಕ್‌!

ಜುಲೈ 4ರಂದು ಯುಕೆ ಚುನಾವಣೆ

ಇಂಗ್ಲೆಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆ ಜುಲೈ 4 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಿಷಿ ಸುನಕ್, ದೇಶದ ಆರ್ಥಿಕತೆ ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದು, ಭವಿಷ್ಯ ಉತ್ತಮವಾಗಿರಲಿದೆ ಎಂದು ರಿಷಿ ಸುನಕ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ನೆಗೆತ ಕಂಡ ರಿಷಿ ಸುನಕ್ ದಂಪತಿ, ಪತ್ನಿಯ ಆಸ್ತಿಯೇ ಜಾಸ್ತಿ!

ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲಿದ್ದೇವೆ

ಈ ವರ್ಷದ ಆರಂಭದಿಂದಲೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ಉತ್ತಮ ದಿಕ್ಕಿನಲ್ಲಿ ಸಾಗುತ್ತಿರೋದನ್ನು ನೋಡಬಹುದಾಗಿದೆ. ಇದಕ್ಕೆ ಕಾರಣ ನಮ್ಮ ಯೋಜನೆಗಳು ಉತ್ತಮವಾಗಿ ಕಾರ್ಯರೂಪಕ್ಕೆ ಬರುತ್ತಿವೆ. ಅಡಮಾನದ ದರ ಇಳಿಕೆಯಾಗುತ್ತಿರುವ ಕಾರಣ ತೆರಿಗೆ ಇಳಿಸಲು ಸಹಾಯವಾಯ್ತು. ಕೆಲಸ ಮತ್ತು ರಾಜಕೀಯದ ಒತ್ತಡಗಳು ಸದಾ ಜೊತೆಯಲ್ಲಿಯೇ ಇರುತ್ತವೆ ಎಂದು ನಾನು ನಂಬುತ್ತೇನೆ. ಈ ವರ್ಷದ ಅವಧಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲಿದ್ದೇವೆ ಎಂದು ರಿಷಿ ಸುನಕ್ ಹೇಳಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!