ಖತಾರ್ ಏರ್‌ವೇಸ್‌ಗೆ ಅತ್ಯುತ್ತಮ ವಿಮಾನಯಾನ ಸಂಸ್ಥೆ ಗರಿ; ಟಾಪ್ 20 ಬೆಸ್ಟ್ ಏರ್‌ಲೈನ್ಸ್ ಪಟ್ಟಿ ಇಲ್ಲಿದೆ!

By Suvarna NewsFirst Published Jul 20, 2021, 9:49 PM IST
Highlights
  • ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ
  • 2021ರ ಬೆಸ್ಟ್ ಏರ್‌ಲೈನ್ಸ್; ಖತಾರ್‌ ಏರ್‌ವೇಸ್‌ಗೆ ಮೊದಲ ಸ್ಥಾನ 
  • ಏರ್‌ಲೈನ್ಸ್ ರೇಟಿಂಗ್ ಸಂಸ್ಥೆಯಿಂದ ಬೆಸ್ಟ್ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ

ನವದೆಹಲಿ(ಜು.20):  ಕೊರೋನಾ ವೈರಸ್ ಕಾರಣ ಅತೀ ಹೆಚ್ಚು ಹೊಡೆತ ತಿಂದ ಕ್ಷೇತ್ರಗಳ ಪೈಕಿ ವಿಮಾನಯಾನ ಕೂಡ ಒಂದು. ಮೊದಲ ಅಲೆ ಬಳಿಕ ಪುನರ್ ಆರಂಭಗೊಂಡಿದ್ದ ವಿಮಾನ ಸೇವೆ 2ನೇ ಅಲೆಯಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. 2021ರಲ್ಲಿ ಕೆಲವೇ ತಿಂಗಳು ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸಿದೆ. ಇದರ ಆಧಾರದಲ್ಲಿ ಇದೀಗ ಈ ವರ್ಷದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟಗೊಂಡಿದೆ. ಇದರಲ್ಲಿ ಖತಾರ್ ಏರ್‌ವೇಸ್ ಮೊದಲ ಸ್ಥಾನ ಪಡೆದುಕೊಂಡಿದೆ.

ವಿಮಾನ ಹತ್ತಿದ ಸಂಸದನಿಗೆ ಅಚ್ಚರಿ; ಕಾರಣ ಪೈಲಟ್ ಕೂಡ ಸಂಸದ!

ಕಳೆದ ವರ್ಷ ಏರ್ ನ್ಯೂಜಿಲೆಂಡ್ ಮೊದಲ ಸ್ಥಾನ ಅಲಂಕರಿಸಿತ್ತು. ಇದೀಗ ಖತಾರ್ ಏರ್‌ವೇಸ್ ಅಗ್ರಸ್ಥಾನ ಪಡೆದುಕೊಂಡಿದೆ. ಏರ್‌ಲೈನ್ಸ್ ರೇಟಿಂಗ್ .ಕಾಂ ಪ್ರತಿ ವರ್ಷ ವಿಮಾನ ಸೇವೆ, ಸುರಕ್ಷತೆ ಸೇರಿದಂತೆ ಹಲವು ಮಾನದಂಡಗಳನ್ನಿಟ್ಟು ರೇಟಿಂಗ್ ನೀಡುತ್ತಿದೆ. ಈ ರೀತಿ ಅತ್ಯುತ್ತಮ 20 ವಿಮಾನಯಾನ ಸಂಸ್ಥೆಗಳನ್ನು ಪ್ರಕಟಿಸಲಾಗಿದೆ.

ಪ್ರತಿ ಗಂಟೆಗೆ 14 ಸಾವಿರ ಕೀ.ಮಿ ವೇಗದ ವಿಮಾನ; ಭೂಮಿಯ ಯಾವುದೇ ಮೂಲೆ ತಲುಪಲು 1 ಗಂಟೆ ಸಾಕು!

ಟಾಪ್ 20 ಪಟ್ಟಿಯಲ್ಲಿ ಕಾಣಿಸಿಕೊಂಡ ವಿಮಾನಯಾನ ಸಂಸ್ಥೆಗಳು  7 ಸ್ಟಾರ್ ರೇಟಿಂಗ್ ಪಡೆದಿರಬೇಕು. ವಿಮಾನ ಸೇವೆಯಲ್ಲಿನ ಈ ಹಿಂದಿನ  ಎಲ್ಲಾ ದಾಖಲೆಗಳನ್ನು ಪರಿಗಣಿಸಲಾಗುತ್ತದೆ.  ಏರ್‌ಲೈನ್ಸ್ ರೇಟಿಂಗ್ .ಕಾಂ ಪ್ರಕಟಿಸಿರುವ ಟಾಪ್ 20 ಬೆಸ್ಟ್ ವಿಮಾನಯಾನ ಸಂಸ್ಥೆ ಪಟ್ಟಿ ಇಲ್ಲಿವೆ.

  • ಕತಾರ್ ಏರ್ವೇಸ್
  • ಏರ್ ನ್ಯೂಜಿಲೆಂಡ್
  • ಸಿಂಗಾಪುರ್ ಏರ್ಲೈನ್ಸ್
  • ಕ್ವಾಂಟಾಸ್, ಎಮಿರೇಟ್ಸ್
  • ಕ್ಯಾಥೆ ಪೆಸಿಫಿಕ್
  • ವರ್ಜಿನ್ ಅಟ್ಲಾಂಟಿಕ್
  • ಯುನೈಟೆಡ್ ಏರ್ಲೈನ್ಸ್
  • EVA ಏರ್
  • ಬ್ರಿಟಿಷ್ ಏರ್ವೇಸ್
  • ಲುಫ್ಥಾನ್ಸ
  • ANA
  • ಫಿನ್ನೇರ್
  • ಜಪಾನ್ ಏರ್ ಲೈನ್ಸ್
  • KLM
  • ಹವಾಯಿಯನ್ ಏರ್ಲೈನ್ಸ್
  • ಅಲಾಸ್ಕಾ ಏರ್ಲೈನ್ಸ್
  • ವರ್ಜಿನ್ ಆಸ್ಟ್ರೇಲಿಯಾ
  • ಡೆಲ್ಟಾ ಏರ್ ಲೈನ್ಸ್
  • ಎತಿಹಾಡ್ ಏರ್ವೇಸ್
click me!