ಸಮಾರಂಭದಲ್ಲಿ ಬಾಲಕಿಯತ್ತ ನೋಡದ ದೊರೆ: ಮನೆಗೆ ತೆರಳಿ ಮುತ್ತಿಟ್ಟರೆ..?

By Suvarna News  |  First Published Dec 4, 2019, 3:09 PM IST

ಕೈಕುಲುಕಲು ಬಂದ ಬಾಲಕಿಯನ್ನು ನೋಡದ ಅಬು ದಾಬಿ ದೊರೆ| ಬಾಲಕಿಯ ಮನೆಗೆ ತೆರಳಿ ಆಶೀರ್ವದಿಸಿದ ಶೇಖ್ ಮೊಹ್ಮದ್ ಬಿನ್ ಜಯೈದ್| ಸೌದಿ ಅರೇಬಿಯಾದ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅಬು ದಾಬಿ ಪ್ರವಾಸ| ಸೌದಿ ದೊರೆಯನ್ನು ಸ್ವಾಗತಿಸಲು ಸೇರಿದ್ದ ಮಕ್ಕಳ ದಂಡು| ಬಾಲಕಿ ಕೈಕುಲುಕಲು ಮುಂದಾದಾಗ ಆಕೆಯತ್ತ ನೋಡದ ಶೇಖ್ ಮೊಹ್ಮದ್| ಬಾಲಕಿ ಆಯಿಶಾ ಮನೆಗೆ ತೆರಳಿ ಮುತ್ತಿಟ್ಟು ಆಶೀರ್ವಾದ ಮಾಡಿದ ಶೇಖ್ ಮೊಹ್ಮದ್| ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಶೇಖ್ ಮೊಹ್ಮದ್ ಅವರ ಸರಳತೆ|


ಅಬು ದಾಬಿ(ಡಿ.04): ಸರ್ಕಾರಿ ಸಮಾರಂಭದಲ್ಲಿ ಕೈಕುಲುಕಲು ಬಂದ ಬಾಲಕಿಯನ್ನು ನೋಡದೇ ಮುಂದೆ ಸಾಗಿದ್ದ ಅಬು ದಾಬಿ ದೊರೆ ಶೇಖ್ ಮೊಹ್ಮದ್ ಬಿನ್ ಜಯೈದ್, ಬಳಿಕ ಬಾಲಕಿಯ ಮನೆಗೇ ತೆರಳಿ ಆಕೆಯನ್ನು ಭೇಟಿ ಮಾಡಿದ ಅಪರೂಪದ ಪ್ರಹಸನ ನಡೆದಿದೆ.

ಸೌದಿ ಅರೇಬಿಯಾದ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅಬು ದಾಬಿ ಪ್ರವಾಸದಲ್ಲಿದ್ದು, ಈ ವೇಳೆ ಸೌದಿ ದೊರೆಯನ್ನು ಸ್ವಾಗತಿಸಲು ಮಕ್ಕಳ ಗುಂಪೊಂದು ಅಧ್ಯಕ್ಷರ ಅರಮನೆ ಮುಂದೆ ಜಮಾಯಿಸಿತ್ತು.

pic.twitter.com/KsqtBzOczu

— عبدالله بن زايد (@ABZayed)

Tap to resize

Latest Videos

ಈ ವೇಳೆ ಸೌದಿ ದಿರೆ ಹಾಗೂ ಅಬು ದಾಬಿ ದೊರೆ ಮಕ್ಕಳ ಕೈಕುಲುಕುತ್ತ ಮುಗುಳ್ನಗೆಯಿಂದ ಮುನ್ನಡೆಯುತ್ತಿದ್ದರು. ಆದರೆ ಸರತಿ ಸಾಲಿನಲ್ಲಿ ಕೊನೆಯಲ್ಲಿ ಆಯಿಶಾ ಅಲ್ ಮಜ್ರೋಯಿ ಎಂಬ ಬಾಲಕಿ ದೊರೆಯ ಕೈಕುಕುಕಲು ಮುಂದಾದಾಗ ಆಕೆಯತ್ತ ನೋಡದೇ ಶೇಖ್ ಮೊಹ್ಮದ್ ಮುಂದೆ ಸಾಗಿದ್ದರು.

ಬಳಿಕ ಬಾಲಕಿ ತಮ್ಮ ಕೈಕುಲುಕಲು ಮುಂದೆ ಬಂದಿದ್ದ ವಿಡಿಯೋ ನೋಡಿದ್ದ ಶೇಖ್ ಮೊಹ್ಮದ್, ಆಯಿಶಾ ಮನೆಗೆ ತೆರಳಿ ಆಕೆಯ ಹಣೆಗೆ ಮುತ್ತಿಟ್ಟು ಆಶೀರ್ವದಿಸಿದ್ದಾರೆ.

زرت اليوم الطفلة عائشة محمد مشيط المزروعي وسعدت بالسلام عليها ولقاء أهلها. pic.twitter.com/XY3N3nU6Dd

— محمد بن زايد (@MohamedBinZayed)

ಖುದ್ದು ಅಬು ದಾಬಿ ದೊರೆ ತಮ್ಮ ಮನೆಗೆ ಬಂದಿರುವುದನ್ನು ನಂಬಲಾಗದ ಪುಟಾಣಿಗಳು, ಆಶ್ವರ್ಯಕರ ಕಣ್ಣುಗಳಿಂದ ಅವರನ್ನೇ ನೋಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

click me!