ನಿನ್ನೆ ಭಾರತದಲ್ಲಿ 60000, ವಿಶ್ವದಾದ್ಯಂತ 3.7 ಲಕ್ಷ ನವಜಾತ ಶಿಶುಗಳ ಜನನ!

By Suvarna NewsFirst Published Jan 2, 2021, 11:20 AM IST
Highlights

ನಿನ್ನೆ ಭಾರತದಲ್ಲಿ 60000, ವಿಶ್ವದಾದ್ಯಂತ 3.7 ಲಕ್ಷ ನವಜಾತ ಶಿಶುಗಳ ಜನನ| ಈ ವರ್ಷ ಒಟ್ಟು 14 ಕೋಟಿ ಮಕ್ಕಳ ಜನನ ಅಂದಾಜು

ನ್ಯೂಯಾರ್ಕ್(ಜ.01): 2021ರ ಮೊದಲ ದಿನ ಭಾರತದಲ್ಲಿ 60 ಸಾವಿರ ಮಕ್ಕಳು ಸೇರಿದಂತೆ ವಿಶ್ವದಲ್ಲಿ ಸುಮಾರು 3.7 ಲಕ್ಷ ಮಕ್ಕಳು ಜನಿಸಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ಶುಕ್ರವಾರ ಹೇಳಿದೆ.

2021ರಲ್ಲಿ 14 ಕೋಟಿ ಮಕ್ಕಳು ಜನಿಸುವ ಅಂದಾಜಿದೆ. ವಯಸ್ಸಿನ ಸರಾಸರಿ 84 ವರ್ಷ ಇರಲಿದೆ ಎಂದು ಅದು ತಿಳಿಸಿದೆ. ಇದೇ ವೇಳೆ ಭಾರತದಲ್ಲಿ ಜನಿಸುವ ಮಕ್ಕಳ ವಯಸ್ಸಿನ ಸರಾಸರಿ 80.9 ಇರಲಿದೆ.

ವಾಣಿವಿಲಾಸದಲ್ಲಿ ಕದ್ದಿದ್ದ ಮಗು 80000ಕ್ಕೆ ಮಾರಾಟ

2021ರ ಮೊದಲ ಮಗು ಫಿಜಿಯಲ್ಲಿ ಜನಿಸಿದರೆ, ಅಮೆರಿಕದಲ್ಲಿ ಕೊನೆಯ ಮಗು ಜನಿಸಿದೆ.

ಹೊಸ ವರ್ಷದಂದು ಮಕ್ಕಳು ಜನಿಸುವ ಟಾಪ್‌-10 ದೇಶಗಳೆಂದರೆ ಭಾರತ (59,995) ಚೀನಾ (35,615), ನೈಜೀರಿಯಾ (21,439), ಪಾಕಿಸ್ತಾನ (14,161), ಇಂಡೋನೇಷ್ಯಾ(12,336), ಇಥಿಯೋಪಿಯಾ (12,006), ಅಮೆರಿಕ (10,312), ಈಜಿಪ್ಟ್‌ (9,455), ಬಾಂಗ್ಲಾದೇಶ (9,236) ಹಾಗೂ ಕಾಂಗೋ ಗಣರಾಜ್ಯ (8,640).

ಸತ್ತ ಮಗು ಅಂತ್ಯಸಂಸ್ಕಾರಕ್ಕೂ ಮುನ್ನ ಬದುಕಿತು! ಆದರೆ...

ಭಾರತ ಸರ್ಕಾರ ಕೈಗೊಂಡಿರುವ ನವಜಾತ ಶಿಶುಗಳ ಕ್ರಿಯಾ ಯೋಜನೆಯಿಂದ ಮಕ್ಕಳ ವಯೋಮಾನ ಹೆಚ್ಚುತ್ತಿದೆ ಎಂದು ಅದು ಶ್ಲಾಘಿಸಿದೆ.

click me!