ಫ್ಲೂ, ಕೊರೋನಾ ಎರಡೂ ಗೆದ್ದ ಶತಾಯುಷಿ ಅಜ್ಜಿ!

By Kannadaprabha News  |  First Published Apr 26, 2020, 7:23 AM IST

106 ವರ್ಷದ ಹಿಂದೆ ಸ್ಪ್ಯಾನಿಷ್‌ ಫ್ಲೂನಿಂದ ಬಚಾವ್‌| ಈಗ ಕೊರೋನಾದಿಂದಲೂ ವೃದ್ಧೆ ಗುಣಮುಖ| ಸ್ಪೇನ್‌ನ 106 ವರ್ಷದ ಮಹಿಳೆಯ ಯಶೋಗಾಥೆ


ಮ್ಯಾಡ್ರಿಡ್(ಏ.26)‌: ಕೊರೋನಾ ವೈರಸ್‌ಗೆ ವಿಶ್ವದೆಲ್ಲೆಡೆ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಸ್ಪೇನ್‌ನಲ್ಲಿ 106 ವರ್ಷದ ವೃದ್ಧೆಯೊಬ್ಬರು ಈ ಮಾರಕ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ ಕುತೂಹಲಕರ ಎಂದರೆ, ಆಕೆ 4 ವರ್ಷದ ಪುಟ್ಟಮಗುವಾಗಿದ್ದಾಗ ಭಯಾನಕ ಸ್ಪಾ್ಯನಿಶ್‌ ಫ್ಲೂ ಅನ್ನೂ ಜಯಿಸಿದ್ದರು!

ಹೌದು. ಸ್ಪೇನ್‌ನ ಶತಾಯುಷಿ ಮಹಿಳೆ ಅನಾ ಡೆಲ್‌ ವ್ಯಾಲೆ (106) ಕೊರೋನಾ ವೈರಸ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸ್ಪೇನ್‌ನಲ್ಲಿ ಕೊರೋನಾ ವೈರಸ್‌ನಿಂದ ಗುಣಮುಖರಾದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ನೆದರ್ಲೆಂಡ್‌ ಮೂಲದ ಕಾರ್ನೆಲಿಯಾ ರಾಸ್‌ (107) ಎನ್ನುವವರು ಕೊರೋನಾದಿಂದ ಗುಣಮುಖರಾದ ವಿಶ್ವದ ಅತಿ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.

Tap to resize

Latest Videos

ಮೂಗಲ್ಲಿ ಸಾಸಿವೆ ಎಣ್ಣೆ ಹಾಕಿದ್ರೆ ವೈರಸ್‌ ಮಾಯ: ಬಾಬಾ ರಾಮದೇವ್‌ರಿಂದ ‘ಮದ್ದು’!

1913ರಲ್ಲಿ ಜನಿಸಿದ್ದ ಅನಾ ಡೆಲ್‌ ವ್ಯಾಲೆ 1918ರಲ್ಲಿ ಸ್ಪ್ಯಾನಿಶ್‌ ಫ್ಲೂ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಅದೃಷ್ಟವಶಾತ್‌ ಬದುಕುಳಿದಿದ್ದರು. ಅದಾಗಿ 102 ವರ್ಷಗಳ ಬಳಿಕ ಮತ್ತೆ ಕೊರೋನಾ ಸಾಂಕ್ರಾಮಿಕ ರೋಗಕ್ಕೂ ತುತ್ತಾಗಿ ಅದರಿಂದಲೂ ಗುಣಮುಖರಾಗಿದ್ದಾರೆ ಎಂದು ಸ್ಪೇನ್‌ ಮೂಲದ ‘ದ ಆಲಿವ್‌ ಪ್ರೆಸ್‌’ ವರದಿ ಮಾಡಿದೆ. ಈ ಮೂಲಕ ಎರಡು ಮಹಾಮಾರಿ ಸಾಂಕ್ರಾಮಿಕ ರೋಗಗಳನ್ನು ಜಯಿಸಿದ ಗಟ್ಟಿಗಿತ್ತಿ ಎನಿಸಿಕೊಂಡಿದ್ದಾರೆ.

ಅಲ್ಕಾಲಾ ದೆಲ್‌ ವ್ಯಾಲೆಯ ನರ್ಸಿಂಗ್‌ ಹೋಂವೊಂದರಲ್ಲಿ ವಾಸಿಸುತ್ತಿರುವ ಅನಾ, ಇತರ 60 ನಿವಾಸಿಗಳಿಂದ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಅವರನ್ನು ಲಾ ಲಿನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕಿನಿಂದ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಅನಾ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಕುಟುಂಬ ಸದಸ್ಯರನ್ನು ಸೇರಿಕೊಂಡಿದ್ದಾರೆ. ಈಗ ಅನಾ ತಮ್ಮ ಊಟವನ್ನು ತಾವೇ ಮಾಡುವಷ್ಟುಶಕ್ತರಾಗಿದ್ದರೆ. ವಾಕರ್‌ ಸಹಾಯದಿಂದ ಸ್ವಲ್ಪ ದೂರದವರೆಗೆ ನಡೆದಾಡುತ್ತಾರೆ.

ಜಡ್ಜ್‌ ಮುಂದೆ ಬನಿಯನ್‌ನಲ್ಲಿ ವಿಚಾರಣೆಗೆ ಹಾಜರಾದ ವಕೀಲ!

1918ರ ಜನವರಿಯಿಂದ 1920ರ ಡಿಸೆಂಬರ್‌ವರೆಗೆ 36 ತಿಂಗಳ ಕಾಲ ಇಡೀ ವಿಶ್ವವನ್ನೇ ಸ್ಪಾ್ಯನಿಶ್‌ ಫä್ಲ ಕಾಡಿತ್ತು. 50 ಕೋಟಿ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು.

"

click me!