ಚೆನ್ನಾಗಿ ಆಟ ಆಡುತ್ತಿರುವಾಗಲೇ ಬಿಗ್ ಬಾಸ್ ಶೋನಿಂದ ಅನಿವಾರ್ಯವಾಗಿ ಗೋಲ್ಡ್ ಸುರೇಶ್ ಹೊರ ಬಂದಿದ್ದಾರೆ.
Image credits: our own
ತುರ್ತು ಪರಿಸ್ಥಿತಿ
ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣದಿಂದ ಬಿಬಿಕೆ ಮನೆಯಿಂದ ತನ್ನ ಮನೆಗೆ ತೆರಳಿದ್ದಾರೆ.
Image credits: our own
75ನೇ ದಿನಕ್ಕೆ ಮನೆಯಿಂದ ಹೊರಗೆ
ಡಿಸೆಂಬರ್ 16ರ ಸಂಚಿಕೆಯಲ್ಲಿ ಅವರು ದೊಡ್ಮನೆ ಬಿಟ್ಟು ಹೊರಬಂದಿದ್ದನ್ನು ತೋರಿಸಲಾಗಿದೆ.
Image credits: our own
ಎರಡು ದಿನಗಳ ಹಿಂದೆಯೇ ಬಂದಿರುವ ಗೋಲ್ಡ್
ಗೋಲ್ಡ್ ಮನೆಯಿಂದ ಬಂದು ಎರಡು ದಿನವಾಗಿದೆ. ಆದರೆ ಈವರೆಗೆ ಎಲ್ಲಿಯೂ ಅವರು ಯಾಕೆ ಹೊರಗೆ ಬಂದರು ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
Image credits: our own
ಸುರೇಶ್ ಮನೆಯಿಂದ ತುರ್ತು ಕರೆ
ಇನ್ನು ಭಾನುವಾರದ ಎಪಿಸೋಡ್ ಶೂಟಿಂಗ್ ಮುಗಿದ ಬಳಿಕ ಸುರೇಶ್ ಮನೆಯಿಂದ ತುರ್ತು ಕರೆ ಬಂದಿದೆ. ಹೀಗಾಗಿ ಸುದೀಪ್ ಜತೆ ವೇದಿಕೆಯಲ್ಲಿ ಮಾತನಾಡುವ ಚಾನ್ಸ್ ಮಿಸ್ ಆಗಿದೆ.
Image credits: our own
ಬಿಬಿಕೆ ಆದೇಶ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣದಿಂದ ಗೋಲ್ಡ್ ಸುರೇಶ್ ಕೂಡಲೇ ಹೊರಬರಬೇಕೆಂದು ಬಿಗ್‌ಬಾಸ್ ಆದೇಶಿಸಿದ್ದರು.
Image credits: our own
ಗೋಲ್ಡ್ ಸೋತಿಲ್ಲ ಕಿಚ್ಚನ ಧೈರ್ಯ
ನೀವು ಗಾಬರಿ ಆಗುವಂಥದ್ದು ಏನೂ ಇಲ್ಲ. ನೀವು ಮನೆಗೆ ತೆರಳಬೇಕು. ಸುರೇಶ್ ಅವರು ಸೋತು ಹೋಗುತ್ತಿಲ್ಲ. ಕ್ಯಾಪ್ಟನ್ ಆಗಿ ಗೆದ್ದು ಹೋಗುತ್ತಿದ್ದಾರೆ’ ಎಂದು ಕಿಚ್ಚ ಹೇಳಿದ್ದನ್ನು ಟಿವಿಯಲ್ಲಿ ಹಾಕಲಾಯ್ತು.
Image credits: our own
ಸಮಸ್ಯೆ ಏನಾಗಿರಬಹುದು
ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೂ ಸ್ಪಷ್ಟ ಕಾರಣ ಸಿಕ್ಕಿಲ್ಲ. ಬಿಸಿನೆಸ್‌ನಲ್ಲಿ ಸಮಸ್ಯೆ ಆಗಿರಬಹುದು ಎಂದು ಐಶ್ವರ್ಯಾ ಅವರು ಊಹಿಸಿದ್ದಾರೆ.
Image credits: our own
ತಂದೆ ಆರೋಗ್ಯವಾಗಿದ್ದಾರೆ
ಇನ್ನು ಸುರೇಶ್ ತಂದೆಗೆ ಸಮಸ್ಯೆ ಆಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಬಳಿಕ ಅದೆಲ್ಲ ಸುಳ್ಳು ಅವರ ತಂದೆ ಆರೋಗ್ಯವಾಗಿರುವ ಬಗ್ಗೆ ಹೇಳಿಕೆ ನೀಡಿದ್ದರು.