Small Screen
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಪುಟ್ಟಕ್ಕನ ಮಗಳು, ಡಿಸಿ ಸ್ನೇಹಾ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ಸಂಜನಾ ಬುರ್ಲಿ.
ಈ ಸೀರಿಯಲ್ ನಲ್ಲಿ ಕಷ್ಟಪಟ್ಟು ಓದಿ, ತಾನು ಕಂಡ ಕನಸನ್ನು ನನಸಾಗಿಸಿ, ಡಿಸಿ ಸ್ನೇಹಾ ಆಗಿ ಯುವಕರಿಗೆ ಪ್ರೇರಣೆ ನೀಡಿದ್ದ ಸಂಜನಾ.
ಕಾರಣಾಂತರಗಳಿಂದ ಸಂಜನಾ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಅವರ ಪಾತ್ರಕ್ಕೆ ಕೊನೆ ಹಾಡಲಾಗಿದೆ.
ಸೀರಿಯಲ್ ಬಿಟ್ಟ ಮೇಲೆ ನಟಿ ಟ್ರಾವೆಲ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಕಾಶ್ಮೀರ, ದುಬೈ, ಎನ್ನುತ್ತಾ ನಟಿ ಟ್ರಾವೆಲ್ ಮಾಡ್ತಾರೆ ಇರುತ್ತಾರೆ.
ಸಂಜನಾ ಸಾಹಸ ಪ್ರಿಯೆಯಾಗಿದ್ದು, ಇತ್ತೀಚೆಗೆ ಹಿಮಾಲಯ ಟ್ರೆಕ್ ಮಾಡಿದ್ದರು, ಅದಕ್ಕೂ ಮುನ್ನ ಸ್ಕೈ ಡೈವಿಂಗ್ ಮಾಡುವ ಮೂಲಕ ಏನೇ ಚಾಲೆಂಜ್ ಬಂದ್ರೂ ಸ್ವೀಕರಿಸೋದಕ್ಕೆ ರೆಡಿ ಅಂದಿದ್ರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಂಜನಾ ಹೊಸ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಕಪ್ಪು ಬಣ್ಣದ ಶಾರ್ಟ್ಸ್ ಹಾಗೂ ನೀಲಿ ಬಣ್ಣದ ಟಾಪ್ ಧರಿಸಿರುವ ಫೋಟೊ ಶೇರ್ ಮಾಡಿರುವ ನಟಿ Swipe left to race your heart..!? ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೆ ಸಂಜನಾ ಬುರ್ಲಿ ದುಬೈನಲ್ಲಿರುವ ವಿಶ್ವ ವಿಖ್ಯಾತ ಫೆರಾರಿ ವರ್ಲ್ಡ್ ಯಾಸ್ ಡಿಸ್ನಿಗೆ ತೆರಳಿದ್ದು, ಅಲ್ಲಿ ಕೆಲವು ರೈಡ್ ಮಾಡಿದ್ದು, ಅದು ಎಷ್ಟು ಥ್ರಿಲ್ ನೀಡಿದ್ದು ಅನ್ನೋದನ್ನು ನಟಿ ತಿಳಿಸಿದ್ದಾರೆ.
ಫೆರಾರಿ ವರ್ಲ್ಡ್ ನಲ್ಲಿ ತುಂಬಾನೆ ಎಂಜಾಯ್ ಮಾಡಿರೋದಾಗಿ ತಿಳಿಸಿರುವ ಸಂಜನಾ, ಫಾಸ್ಟೆಸ್ಟ್ ರೋಲರ್ ಕೋಸ್ಟರ್ ಅಲ್ಲಿ ಕುಳಿತಿರೋದಾಗಿಯು ಇದು ನನ್ನ ಜೀವನದ ಕನಸು ನನಸಾದ ಕ್ಷಣ ಎಂದಿದ್ದಾರೆ.
ಸೀರಿಯಲ್ ನಿಂದ ಹೊರ ನಡೆದ ಸಂಜನಾ ಮುಂದೆ, ಯಾವ ಸಿನಿಮಾ ಅಥವಾ ಸೀರಿಯಲ್ ನಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇನ್ನೂ ಹೊರ ಬಂದಿಲ್ಲ.