Health
ನಿಯಮಿತವಾಗಿ ಲವಂಗ ತಿನ್ನುವುದರಿಂದಾಗುವ ಪ್ರಯೋಜನಗಳೇನೆಂದು ನೋಡೋಣ.
ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಲವಂಗ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೆಮ್ಮು, ಶೀತ ಮುಂತಾದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಲವಂಗ ತಿನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಾರಿನಂಶ ಹೊಂದಿರುವ ಲವಂಗ ಅನಿಲದಿಂದ ಉಂಟಾಗುವ ಹೊಟ್ಟೆ ಉಬ್ಬರವನ್ನು ನಿವಾರಿಸುತ್ತದೆ.
ಊಟದ ನಂತರ ಲವಂಗ ತಿನ್ನುವುದು ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬಾಯಿಯ ಆರೋಗ್ಯಕ್ಕೆ ಲವಂಗ ಒಳ್ಳೆಯದು. ಹಲ್ಲುನೋವಿಗೆ ಉತ್ತಮ ಮದ್ದು ಲವಂಗ.
ಬಾಯಿ ದುರ್ವಾಸನೆ ಇರುವವರು ಸ್ವಲ್ಪ ಲವಂಗ ಎಣ್ಣೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಊಟದ ನಂತರ ಬಾಯಿ ಮುಕ್ಕಳಿಸಿದರೆ ದುರ್ವಾಸನೆ ನಿವಾರಣೆಯಾಗುತ್ತದೆ.
ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ.